
ಬೆಂಗಳೂರು: ಸದನದಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಯ ವೇಳೆ ಅಂಬೇಡ್ಕರ್ ಅವರನ್ನು ಸೋಲಿಸಿದವರ ಕುರಿತ ಬಿರುಸು ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ಮಧ್ಯೆ ತೀವ್ರ ವಾಕ್ಸಮರ ಉಂಟಾಗಿದ್ದು, ಸ್ಪೀಕರ್ ಯು.ಟಿ. ಖಾದರ್ ತಮ್ಮ ತಾಳ್ಮೆ ಕಳೆದುಕೊಂಡು ಬಿಜೆಪಿ ಸದಸ್ಯ ಹರೀಶ್ ಪೂಂಜಾಗೆ “ತೆಗೆದು ಬಿಸಾಡುತ್ತೇನೆ, ಗೆಟ್ ಔಟ್!” ಎಂದು ಖಡಕ್ ಎಚ್ಚರಿಕೆ ನೀಡಿದರು.
“ನಾನು ಲಿಮಿಟ್‌ನಲ್ಲಿ ಇದ್ದೇನೆ. ಇಲ್ಲಿ ಇರಲು ಆಗದಿದ್ದರೆ ಸದನ ಬಿಟ್ಟು ಹೋಗಿ, ಇಲ್ಲಾಂದ್ರೆ ನಾನೇ ತೆಗೆದು ಬಿಸಾಡುತ್ತೇನೆ” ಎಂದು ಖಾದರ್
ಕಿಡಿಕಾರಿದರು.
ಈ ವೇಳೆ ಬಿಜೆಪಿ ಸದಸ್ಯರು ಸ್ಪೀಕರ್ ಬಳಕೆಯ ಶಬ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, “ಯಾವ ಅಧ್ಯಕ್ಷರೂ ಹೀಗೆ ಮಾತನಾಡಿಲ್ಲ” ಎಂದು ಸಿ.ಸಿ. ಪಾಟೀಲ್ ಪ್ರತಿಪಾದಿಸಿದರು. ಹರೀಶ್ ಪೂಂಜಾ ಕೂಡಾ ಅಸಮಾಧಾನ ವ್ಯಕ್ತಪಡಿಸಿದರು.ಇದಕ್ಕೆ ವೇದವ್ಯಾಸ ಕಾಮತ್ ಸಾಥ್ ನೀಡಿದರು.
ಇದಕ್ಕೆ ಪ್ರತಿಯಾಗಿ ಸ್ಪೀಕರ್ ಖಾದರ್, “ಮಂಗಳೂರಿನ ಜ್ಯೋತಿಯಲ್ಲಿ ಅಂಬೇಡ್ಕರ್ ಸರ್ಕಲ್ ಕಟ್ಟಿ ಎಷ್ಟು ವರ್ಷವಾಯ್ತು? ಒಂದು ಸರ್ಕಲ್ ಕಟ್ಟುವ ಯೋಗ್ಯತೆ ಇಲ್ಲ. ಇಲ್ಲಿ ಮಾತನಾಡುತ್ತೀರಾ?” ಎಂದು ಗದರಿಸಿದರು.