spot_img

ಯುದ್ಧ ನಡೆದರೆ ಇಂಗ್ಲೆಂಡ್‌ಗೆ ಹೋಗುತ್ತೇನೆ! ಪುಕ್ಕಲ ಹೇಳಿಕೆ ನೀಡಿ ವೈರಲ್ ಆದ ಪಾಕಿಸ್ಥಾನದ ಸಂಸದ

Date:

spot_img

ಇಸ್ಲಾಮಾಬಾದ್: “ಭಾರತದೊಂದಿಗೆ ಯುದ್ಧ ನಡೆದರೆ ನಾನು ಇಂಗ್ಲೆಂಡ್‌ಗೆ ಹೋಗುತ್ತೇನೆ” ಎಂಬ ಪಾಕಿಸ್ಥಾನದ ಸಂಸದ ಶೇರ್ ಅಫ್ಜಲ್ ಖಾನ್ ಮರ್ವಾತ್ ಅವರ ವಿವಾದಾತ್ಮಕ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪತ್ರಕರ್ತರೊಬ್ಬರು “ಯುದ್ಧ ಆರಂಭವಾದರೆ ಗಡಿಗೆ ಗನ್ ಹಿಡಿದು ಹೋಗುತ್ತೀರಾ?” ಎಂದು ಕೇಳಿದಾಗ, ಪಾಕಿಸ್ಥಾನದ ರಾಷ್ಟ್ರೀಯ ಅಸೆಂಬ್ಲಿಯ ಈ ಸದಸ್ಯ ವ್ಯಂಗ್ಯದಿಂದ “ನಾನು ಇಂಗ್ಲೆಂಡ್‌ಗೆ ಹೋಗುತ್ತೇನೆ” ಎಂದು ಉತ್ತರಿಸಿದ್ದಾರೆ.

ಮತ್ತೊಂದು ಪ್ರಶ್ನೆಯಲ್ಲಿ ” ಉದ್ವಿಗ್ನತೆಯನ್ನು ಕಡಿಮೆ ಮಾಡಲು ಭಾರತದ ಪ್ರಧಾನಿ ಮೋದಿ ಹಿಂದೆ ಸರಿಯಬೇಕು ಎಂದು ನಂಬುತ್ತೀರಾ?” ಎಂಬುದಕ್ಕೆ, ಅವರು ಮತ್ತೊಮ್ಮೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, “ ನಾನು ಹೇಳಿದಾಗ ಅವರು ಹಿಂದೆ ಸರಿಯಲು ಏನು ಮೋದಿ ನನ್ನ ಅತ್ತೆ ಮಗನಾ?” ಎಂದು ಉತ್ತರಿಸಿದ್ದಾರೆ.

ಈ ಹೇಳಿಕೆ ಪಾಕ್‌ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ದೇಶದ ಜನಪ್ರತಿನಿಧಿಗಳಿಗೂ ಸೇನೆಯ ಸಾಮರ್ಥ್ಯದ ಮೇಲೆ ನಂಬಿಕೆ ಇಲ್ಲವೇ ಎಂಬ ಲೇವಡಿಗೆ ಕಾರಣವಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಜಾಗತಿಕ AI ರೇಸ್‌ನಲ್ಲಿ ಸ್ವಿಟ್ಜರ್ಲೆಂಡ್: ಸಂಪೂರ್ಣ ಮುಕ್ತ-ಮೂಲ, ಬಹುಭಾಷಾ LLM ಬಿಡುಗಡೆಗೆ ಸಜ್ಜು

ಕೃತಕ ಬುದ್ಧಿಮತ್ತೆ (AI) ಪ್ರಾಬಲ್ಯಕ್ಕಾಗಿ ನಡೆಯುತ್ತಿರುವ ಜಾಗತಿಕ ಸ್ಪರ್ಧೆಯಲ್ಲಿ ಅಮೆರಿಕ ಮತ್ತು ಚೀನಾಗಳ ನಡುವಿನ ಪೈಪೋಟಿ ಮುಂಚೂಣಿಯಲ್ಲಿದ್ದರೂ, ಇದೀಗ ಸ್ವಿಟ್ಜರ್ಲೆಂಡ್ ಕೂಡ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮುತ್ತಿದೆ.

ಚಿಕ್ಕವನಿದ್ದಾಗಿನಿಂದಲೇ ಅಪರಾಧ: ಉದ್ಯಮಿಗಳಿಗೆ ವಂಚಿಸಿದ ರೋಶನ್ ಸಲ್ದಾನ್ಹಾ ಬಗ್ಗೆ ಸ್ಫೋಟಕ ಮಾಹಿತಿ

ಉದ್ಯಮಿಗಳಿಗೆ ಬಹುಕೋಟಿ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ರೋಶನ್ ಸಲ್ದಾನ್ಹಾ ಬಗ್ಗೆ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.

ಶ್ರೀ ಕೃಷ್ಣ ಜನ್ಮಾಷ್ಟಮಿಯ ಮಂಡಲೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಶ್ರೀ ಕೃಷ್ಣ ಜನ್ಮಾಷ್ಟಮಿಯ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಇಂದು ಪೂಜ್ಯ ಪರ್ಯಾಯ ಶ್ರೀಪಾದರು ಗೀತಾಮಂದಿರದಲ್ಲಿ ಬಿಡುಗಡೆಗೊಳಿಸಿದರು.

ಸಹಕಾರ ತತ್ವದಡಿ ಪರಿಸರ ಸಂರಕ್ಷಣೆ: ಮಲ್ಪೆಯಲ್ಲಿ ಯಶ್‌ಪಾಲ್ ಸುವರ್ಣರಿಂದ ಶ್ಲಾಘನೆ

ಸಹಕಾರ ತತ್ವದಡಿ ಸೇವೆ ಸಲ್ಲಿಸುವುದರ ಜೊತೆಗೆ ಪರಿಸರ ಸಂರಕ್ಷಣೆಯಂತಹ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಅತ್ಯಂತ ಶ್ಲಾಘನೀಯ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್‌ಪಾಲ್ ಸುವರ್ಣ ಹೇಳಿದ್ದಾರೆ.