‘ನಾನು ಹಿಂದೂ, ಕನ್ನಡಿಗ ; ಗಾಯತ್ರಿಯನ್ನು ಮತಾಂತರ ಮಾಡಿಲ್ಲ, ಮಾಡುವುದೂ ಇಲ್ಲ’: ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ ಮುಕಳೆಪ್ಪ

Date:

spot_img

ಧಾರವಾಡ: ಯೂಟ್ಯೂಬ್ ಖ್ಯಾತಿಯ ಖ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ ಮತ್ತು ಗಾಯತ್ರಿ ಜಾಲಿಹಾಳ ಅವರ ವಿವಾಹಕ್ಕೆ ಸಂಬಂಧಿಸಿದಂತೆ ವ್ಯಕ್ತವಾದ ವ್ಯಾಪಕ ವಿರೋಧ ಮತ್ತು ‘ಲವ್ ಜಿಹಾದ್’ ಆರೋಪಗಳ ಕುರಿತು ದಂಪತಿ ಜಂಟಿಯಾಗಿ ವಿಡಿಯೋ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ್ದಾರೆ.

ವಿಡಿಯೋದಲ್ಲಿ ಮಾತನಾಡಿದ ಮುಕಳೆಪ್ಪ, “ನಾನು ಗಾಯತ್ರಿಯನ್ನು ಮತಾಂತರ ಮಾಡಿಲ್ಲ, ಮಾಡುವುದಿಲ್ಲ. ಆಕೆ ಯಾವ ಧರ್ಮದಲ್ಲಿ ಇರುತ್ತಿದ್ದಳೋ, ಅದೇ ಧರ್ಮದಲ್ಲಿ ಮುಂದುವರಿಯಲಿದ್ದಾಳೆ. ನಾವು ಪರಸ್ಪರ ಇಷ್ಟಪಟ್ಟು ಮದುವೆಯಾಗಿದ್ದೇವೆ. ಕಲಾವಿದರಿಗೆ ಜಾತಿ, ಧರ್ಮ ಇರುವುದಿಲ್ಲ. ದಯವಿಟ್ಟು ನಮ್ಮನ್ನು ಬದುಕಲು ಬಿಡಿ, ನಮಗೆ ರಕ್ಷಣೆ ಕೊಡಿ” ಎಂದು ಕೈಮುಗಿದು ವಿನಂತಿಸಿಕೊಂಡಿದ್ದಾರೆ. ಗಾಯತ್ರಿ ಕೂಡ ಇದೇ ಮಾತನ್ನು ಹೇಳಿ ಮನವಿ ಮಾಡಿದ್ದಾರೆ.

ನ್ಯಾಯಾಲಯದಲ್ಲಿ ಗಾಯತ್ರಿಯ ಹೇಳಿಕೆ

ಪೊಲೀಸ್ ಭದ್ರತೆಯೊಂದಿಗೆ ಧಾರವಾಡದ ಜೆಎಂಎಫ್ ನ್ಯಾಯಾಲಯಕ್ಕೆ ಹಾಜರಾದ ಗಾಯತ್ರಿ ಜಾಲಿಹಾಳ, ಸ್ವಇಚ್ಛೆಯಿಂದ ಖ್ವಾಜಾರನ್ನು ಮದುವೆಯಾಗಿರುವುದಾಗಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾರೆ. “ನನ್ನ ಗಂಡ ಯಾರ ಜೀವಕ್ಕೂ ಬೆದರಿಕೆ ಹಾಕಿಲ್ಲ. ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ನಾವು ಮದುವೆ ನಂತರವೂ ನಮ್ಮ ತಂದೆ-ತಾಯಿಯೊಂದಿಗೆ ಅನ್ಯೋನ್ಯವಾಗಿದ್ದೆವು. ನನಗೆ ಮತ್ತು ನನ್ನ ಗಂಡನಿಗೆ ಜೀವ ಬೆದರಿಕೆ ಇದೆ, ನಮಗೆ ರಕ್ಷಣೆ ಕೊಡಿ” ಎಂದು ಮನವಿ ಮಾಡಿದ್ದಾರೆ.

ಈ ಮಧ್ಯೆ, ತಮ್ಮ ಮಗಳನ್ನು ಭೇಟಿ ಮಾಡಲು ಬಂದ ಪೋಷಕರಾದ ಯಲ್ಲಪ್ಪ ಮತ್ತು ಶಿವಕ್ಕ ಅವರೊಂದಿಗೆ ಗಾಯತ್ರಿ ಮಾತನಾಡಲು ನಿರಾಕರಿಸಿದ್ದಾರೆ. ಇದರಿಂದ ಭಾವುಕರಾದ ಪೋಷಕರು, ಮುಕಳೆಪ್ಪ ತನ್ನ ಮಗಳ ತಲೆ ಕೆಡಿಸಿದ್ದಾನೆ ಎಂದು ಆರೋಪಿಸಿದ್ದಾರೆ. “ನನ್ನ ಮಗಳು ನಮ್ಮೊಂದಿಗೆ ಬರುತ್ತಿಲ್ಲ, ಆಕೆಯ ತಲೆ ಸರಿ ಹೋಗುವವರೆಗೂ ನಾವು ಆಕೆಯ ಬೆನ್ನತ್ತುತ್ತೇವೆ” ಎಂದು ಕಣ್ಣೀರಿಟ್ಟಿದ್ದಾರೆ. “ನನಗೆ ಯಾರು ಹೆದರಿಸಿಲ್ಲ, ಯಾರದೋ ಮಾತು ಕೇಳಿ ನಾನು ದೂರು ಕೊಟ್ಟಿಲ್ಲ, ಮುಕಳೆಪ್ಪ ನಮಗೆ ಮೋಸ ಮಾಡಿದ್ದಾನೆ” ಎಂದು ತಾಯಿ ಶಿವಕ್ಕ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಚೆನ್ನಮ್ಮ ದೇವೇಗೌಡ ನಿಧನ: ಡಾ ಮಂಜುನಾಥ್ ಭಾವುಕ

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನರಾಗಿದ್ದು, ಅಳಿಯ ಡಾ. ಸಿ.ಎನ್. ಮಂಜುನಾಥ್ ಭಾವುಕರಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕ್ರಿಯೇಟಿವ್ ಪುಸ್ತಕಧಾರೆ 2026: ಕಾರ್ಕಳದಲ್ಲಿ 25 ಕೃತಿಗಳ ಬಿಡುಗಡೆ

ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಪುಸ್ತಕಧಾರೆ 2026 ಕಾರ್ಯಕ್ರಮ ಸಡಗರದಿಂದ ಜರುಗಿದ್ದು, ಒಟ್ಟು 25 ಕೃತಿಗಳು ಲೋಕಾರ್ಪಣೆಗೊಂಡಿವೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಸುರತ್ಕಲ್‌ನಲ್ಲಿ ಅಣ್ಣನಿಂದ ತಮ್ಮನ ಹತ್ಯೆ; ಕಲ್ಲು ಎತ್ತಿಹಾಕಿ ಬರ್ಬರ ಕೊಲೆ

ಸುರತ್ಕಲ್‌ನ ಚೊಕ್ಕಬೆಟ್ಟಿನಲ್ಲಿ ಸ್ವಂತ ಅಣ್ಣನಿಂದ ತಮ್ಮನ ಬರ್ಬರ ಹತ್ಯೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿದಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾರ್ಕಳದ ಶಿವಪ್ರಸಾದ್ ರಾವ್ ಶ್ರದ್ಧಾಂಜಲಿ ಸಭೆ

ಕಾರ್ಕಳದಲ್ಲಿ ದಕ್ಷ ಕಂದಾಯ ನಿರೀಕ್ಷಕ ಶಿವಪ್ರಸಾದ್ ವಿ. ರಾವ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ.