
ಹೈದರಾಬಾದ್ : ತೆಲಂಗಾಣದ ರಾಜಧಾನಿ ಹೈದರಾಬಾದ್‌ನ ಅಂಬರ್‌ಪೇಟ್‌ನಲ್ಲಿ ಮಂಗಳವಾರ ಬೆಚ್ಚಿಬೀಳಿಸುವ ದುರಂತವೊಂದು ಸಂಭವಿಸಿದ್ದು, ಒಂದೇ ಕುಟುಂಬದ ಮೂವರು ಸದಸ್ಯರು ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಅಂಬರ್‌ಪೇಟ್ ನಿವಾಸಿಗಳಾದ ರಾಮ್ ರಾಜ್ (55), ಇವರ ಪತ್ನಿ ಮಾಧವಿ (50) ಮತ್ತು ಪುತ್ರ ಶಶಾಂಕ್ (24) ಮೃತಪಟ್ಟ ದುರ್ದೈವಿಗಳು. ಈ ಕುಟುಂಬದ ಸದಸ್ಯರು ಕಳೆದ 2 ರಿಂದ 3 ದಿನಗಳಿಂದ ಮನೆಯಿಂದ ಹೊರಗೆ ಬಾರದಿರುವುದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳಿಗೆ ಅನುಮಾನ ಮೂಡಿದೆ. ತಕ್ಷಣವೇ ಅವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮನೆಯ ಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಿದಾಗ, ಮೂವರೂ ನಿಶ್ಚೇತನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ.
ಮನೆಯ ಬಾಗಿಲುಗಳು ಒಳಗಿನಿಂದ ಸಂಪೂರ್ಣವಾಗಿ ಲಾಕ್ ಆಗಿದ್ದವು. ಘಟನಾ ಸ್ಥಳದಲ್ಲಿ ಯಾವುದೇ ಮರಣ ಪತ್ರ (ಡೆತ್ ನೋಟ್) ಲಭ್ಯವಾಗಿಲ್ಲ. ಆದಾಗ್ಯೂ, ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಪೊಲೀಸರು ಇದೊಂದು ಸಾಮೂಹಿಕ ಆತ್ಮಹತ್ಯೆ ಇರಬಹುದು ಎಂದು ಶಂಕಿಸಿದ್ದಾರೆ. ತೀವ್ರ ಆರ್ಥಿಕ ಮುಗ್ಗಟ್ಟು ಅಥವಾ ಬಗೆಹರಿಯದ ಕೌಟುಂಬಿಕ ಸಮಸ್ಯೆಗಳೇ ಈ ಭೀಕರ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂದು ಊಹಿಸಲಾಗಿದೆ. ಪ್ರಸ್ತುತ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದು, ವರದಿ ಬಂದ ನಂತರ ಸಾವಿನ ನಿಖರ ಕಾರಣ ತಿಳಿಯಲಿದೆ. ಈ ಘಟನೆಯಿಂದ ಅಂಬರ್‌ಪೇಟ್ ಪ್ರದೇಶದಲ್ಲಿ ಶೋಕ ಮತ್ತು ಆತಂಕದ ವಾತಾವರಣ ಮನೆಮಾಡಿದೆ.



































