spot_img

ಶಂಕರನಾರಾಯಣದಲ್ಲಿ ಹೆಂಡತಿಯನ್ನು ಕತ್ತಿಯಿಂದ ಕಡಿದು ಕೊಂದ ಗಂಡ !

Date:

spot_img

ಉಡುಪಿ : ಉಡುಪಿ ಜಿಲ್ಲೆಯ ಶಂಕರನಾರಾಯಣ ಬಳಿಯ ಹಿಲಿಯಾಣ ಗ್ರಾಮದ ಹೊಸಮಠದಲ್ಲಿ ಜೂನ್ 19ರ ರಾತ್ರಿ ನಡೆದ ಭೀಕರ ಘಟನೆಯಲ್ಲಿ ಗಂಡನೇ ತನ್ನ ಪತ್ನಿಯನ್ನು ಮನೆಯೊಳಗೆ ಕತ್ತಿಯಿಂದ ಕಡಿದು ಕೊಂದಿರುವ ಅಮಾನುಷ ಪ್ರಕರಣ ಬೆಳಕಿಗೆ ಬಂದಿದೆ.

27 ವರ್ಷದ ರೇಖಾ ಎಂಬ ಮಹಿಳೆಯು ಹತ್ಯೆಗೊಳಗಾಗಿದ್ದು, ಆರೋಪಿ ಗಂಡ ಗಣೇಶ ಪೂಜಾರಿ ಮದ್ಯಪಾನ ಚಟವನ್ನು ಹೊಂದಿದ್ದು , ಈ ಹಿಂದೆ ಕೂಡ ಪತ್ನಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ಮಾಹಿತಿಗಳು ಲಭ್ಯವಾಗಿವೆ.

ಹತ್ಯೆಯ ದಿನ ರಾತ್ರಿ 11:30ರ ವೇಳೆಗೆ, ರೇಖಾ ಕೆಲಸ ಮುಗಿಸಿ ಮನೆಗೆ ಬಂದ ನಂತರ ಮನೆಯೊಳಗೆ ಹೋದ ಗಣೇಶ್, ಬಾಗಿಲು ಲಾಕ್ ಮಾಡಿ ರೇಖಾ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ಇದನ್ನು ಕುಟುಂಬಸ್ಥರು ಕಿಟಕಿಯಿಂದ ನೋಡಿ ಸಾಕಷ್ಟು ಕೇಳಿಕೊಂಡರೂ ಆರೋಪಿ ಕೇಳದೆ ರೇಖಾರನ್ನು ಮಾರಕವಾಗಿ ಇರಿದು ಕೊಂದಿದ್ದಾನೆ. ನಂತರ ಹೊರಗೆ ಬಂದು “ಪೊಲೀಸರಿಗೆ ಹೇಳಿದರೆ ನಿಮ್ಮನ್ನೂ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ.

ಈ ಸಂಬಂಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ BNS ಕಲಂ 103 ಮತ್ತು 351(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಯ ತನಿಖೆ ಆರಂಭವಾಗಿದೆ.

ಸ್ಥಳೀಯರು ಈ ಕ್ರೂರ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದು, ತಾಯಿ ರೇಖಾರ ಮರಣದಿಂದ ಮಕ್ಕಳಿಬ್ಬರು ಅನಾಥರಾಗಿದ್ದಾರೆ ಎಂದು ವಿಷಾದ ವ್ಯಕ್ತ ಪಡಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಮಹಿಳಾ ಸಮಾನತಾ ದಿನ

ಪ್ರತಿ ವರ್ಷ ಆಗಸ್ಟ್ 26ರಂದು ಜಾಗತಿಕವಾಗಿ ಆಚರಿಸಲಾಗುವ ಮಹಿಳಾ ಸಮಾನತಾ ದಿನವು, ಮಹಿಳೆಯರ ಸಮಾನ ಹಕ್ಕುಗಳ ಹೋರಾಟ ಮತ್ತು ಅವರ ಸಾಧನೆಗಳನ್ನು ನೆನಪಿಸುವ ಮಹತ್ವದ ದಿನವಾಗಿದೆ

ನೆಟ್ವರ್ಕ್ ಇಲ್ಲದಿದ್ದರೂ ಕರೆ ಮಾಡಬಹುದು: ಗೂಗಲ್ ಪಿಕ್ಸೆಲ್ 10ನಲ್ಲಿ ಕ್ರಾಂತಿಕಾರಿ ತಂತ್ರಜ್ಞಾನ

ಗೂಗಲ್ ತನ್ನ ಹೊಸ ಪಿಕ್ಸೆಲ್ 10 ಸರಣಿಯಲ್ಲಿ ಕ್ರಾಂತಿಕಾರಿ ತಂತ್ರಜ್ಞಾನವೊಂದನ್ನು ಪರಿಚಯಿಸಿದೆ. ಈ ವೈಶಿಷ್ಟ್ಯದ ಮೂಲಕ ಫೋನ್‌ನಲ್ಲಿ ನೆಟ್‌ವರ್ಕ್‌ ಸಿಗ್ನಲ್ ಇಲ್ಲದಿದ್ದರೂ ಸಹ ಕರೆಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಕಂಪನಿ ತಿಳಿಸಿದೆ.

ಕಂಠೀರವ ಸ್ಟುಡಿಯೋದಲ್ಲಿ ನಡೆದ ಅನಿರೀಕ್ಷಿತ ಘಟನೆ: ಶಿವಣ್ಣನ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಮಡೆನೂರು ಮನು

ನಟಿ ಮೇಲೆ ಲೈಂಗಿಕ ಕಿರುಕುಳ ಮತ್ತು ವಂಚನೆ ಆರೋಪ ಪ್ರಕರಣದಿಂದಾಗಿ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದ ನಟ ಮಡೆನೂರು ಮನು, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಬಳಿ ಕ್ಷಮೆಯಾಚಿಸಿದ್ದಾರೆ.

ಮುದ್ದೇಬಿಹಾಳದಲ್ಲಿ ನ್ಯಾಯಾಧೀಶರ ಮನೆಗೆ ಕನ್ನ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿರುವ 5ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಮನೆಗೆ ಕಳ್ಳರು ಕನ್ನ ಹಾಕಿದ್ದು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿದ ಘಟನೆ ಸೋಮವಾರ ಬೆಳಕಿಗೆ ಬಂದಿದೆ.