
ಜೈಪುರ : ಅಕ್ರಮ ಸಂಬಂಧ ಬಯಲಾಗುವ ಭಯದಿಂದ ಪತಿಯನ್ನೇ ಹತ್ಯೆ ಮಾಡಿದ ಆರೋಪದಡಿ, ಪತ್ನಿ ಗೋಪಾಲಿ ದೇವಿ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.
ಧನಲಾಲ್ ಸೈನಿ ಮೃತಪಟ್ಟ ವ್ಯಕ್ತಿಯಾಗಿದ್ದು, ಮಾರ್ಚ್.15ರಂದು ಪತ್ನಿ ಮತ್ತು ಆಕೆಯ ಪ್ರಿಯಕರನೊಂದಿಗೆ ನಡೆದ ವಾಗ್ವಾದದ ನಂತರ ಈ ಹತ್ಯೆ ನಡೆದಿದೆ. ಬಳಿಕ, ಸೈನಿಯನ್ನು ಥಳಿಸಿ ಉಸಿರುಗಟ್ಟಿಸಿ ಕೊಂದು, ಶವವನ್ನು ಮೂಟೆಯಲ್ಲಿಟ್ಟು ಸುಡುವ ಯತ್ನ ಮಾಡಲಾಗಿದೆ.
ಈ ಘಟನೆಯ ಸಿಸಿಟಿವಿ ದೃಶ್ಯ ಈಗ ವೈರಲ್ ಆಗಿದ್ದು, ಆರೋಪಿಗಳು ಬೈಕ್‌ನಲ್ಲಿ ಶವವನ್ನು ಸಾಗಿಸುತ್ತಿರುವುದು ಸ್ಪಷ್ಟವಾಗಿ ಕಾಣಿಸಿಕೊಂಡಿದೆ. ಪೊಲೀಸರು ಈ ಘಟನೆಯ ತನಿಖೆಯನ್ನು ತೀವ್ರಗೊಳಿಸಿದ್ದಾರೆ.