spot_img

ಮಾನವನ ವ್ಯಕ್ತಿತ್ವ ಹಲವಾರು ವಿಚಾರಗಳ ಮಿಶ್ರಣ : ವೀರೇಶಾನಂದ ಸರಸ್ವತಿ ಸ್ವಾಮೀಜಿ

Date:

spot_img

ತಿಂಗಳ ಮೌಲಿಕ ಕಾರ್ಯಕ್ರಮ ‘ಮೌಲ್ಯಸುಧಾ’ದಲ್ಲಿ ಅಭಿಮತ

ಗಣಿತನಗರ: ಜೀವನದಲ್ಲಿ ಯಶಸ್ಸಿಗಿಂತ ಮೌಲ್ಯಗಳಿಗೆ ಬೆಲೆಕೊಡಬೇಕು ಹಾಗೂ ಗೌರವಿಸಬೇಕು, ನಾವು ಬುದ್ದಿವಂತರಾದರೆ ಸಾಲದು, ಪ್ರಜ್ಞಾವಂತರಾಗಬೇಕು ಎಂದು ವೀರೇಶಾನಂದ ಸರಸ್ವತಿ ಸ್ವಾಮೀಜಿಯವರು ನುಡಿದರು.

ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ನ ಸಹಯೋಗದಲ್ಲಿ ತಿಂಗಳ ಸರಣಿಯ ಮೌಲಿಕ ಕಾರ್ಯಕ್ರಮ “ಮೌಲ್ಯಸುಧಾ”-37ರ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ತುಮಕೂರಿನ ರಾಮಕೃಷ್ಣ ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪೂಜ್ಯ ವೀರೇಶಾನಂದ ಸರಸ್ವತಿ ಸ್ವಾಮಿಜಿಯವರು ‘ಸ್ವನಿಯಂತ್ರಣ : ಬಂಧನವೋ? ಸ್ವಾತಂತ್ರ್ಯವೋ?’ ಎಂಬ ವಿಷಯದ ಕುರಿತು ಉಪನ್ಯಾಸದಲ್ಲಿ ಮಾತನಾಡಿದರು.

ಬುದ್ಧಿವಂತಿಕೆ ವೃದ್ಧಿಯಾಗದೆ ಜ್ಞಾನವು ವೃದ್ಧಿಯಾದರೆ ದುಃಖವು ಹೆಚ್ಚಾಗುತ್ತದೆ. ಮಾನವನ ವ್ಯಕ್ತಿತ್ವ ಹಲವಾರು ವಿಚಾರಗಳ ಮಿಶ್ರಣ. ನಕಾರಾತ್ಮಕ ಚಿಂತನೆಯನ್ನು ನಿಯಂತ್ರಿಸಬೇಕು. ಸ್ವನಿಯಂತ್ರಣ ಮಾನವನ ಕರ್ತವ್ಯವಾಗಬೇಕು. ಆತ್ಮಹತ್ಯೆ ಎಂಬುದು ತಾತ್ಕಾಲಿಕ ಸಮಸ್ಯೆಗೆ ಶಾಶ್ವತ ಪರಿಹಾರವೆಂದು ಇಂದಿನ ಸಮಾಜದ ತಪ್ಪು ತಿಳುವಳಿಕೆಯಾಗಿದೆ. ಪ್ರಯತ್ನವೇ ಪರಮೇಶ್ವರ, ಹೋರಾಡಿ ಸಾಧಿಸುವ ಛಲ ನಮ್ಮದಾಗಬೇಕು. ಅನ್ಯಾಯದ ಮಾರ್ಗದಲ್ಲಿ ಗೆಲ್ಲುವುದಕ್ಕಿಂತ ನ್ಯಾಯಮಾರ್ಗದಲ್ಲಿ ಸೋಲುವುದು ಘನತೆಯಾಗಬೇಕು ಎಂದು ಕಿವಿಮಾತನ್ನಾಡಿದರು.

ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕ‌ ಶೆಟ್ಟಿಯವರು, ಟ್ರಸ್ಟಿಗಳು ಬೋಧಕ ಬೋಧಕೇತರ ಸಿಬ್ಬಂದಿವರ್ಗ ಉಪಸ್ಥಿತರಿದ್ದರು. ಉಪನ್ಯಾಸಕಿ ಕು. ಮಂಜುಳಾ ಭಟ್ ಪ್ರಾರ್ಥಿಸಿ, ಉಪನ್ಯಾಸಕ ಸಂತೋಷ್ ನೆಲ್ಲಿಕಾರು ನಿರೂಪಿಸಿ ವಂದಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಗೃಹ ಮಂತ್ರಿಯಾ ಅಥವಾ ‘ಗ್ರಹಚಾರ’ ಮಂತ್ರಿಯಾ?: ಬಿಜೆಪಿ ನಾಯಕರನ್ನು ತರಾಟೆಗೆತ್ತಿಕೊಂಡ ಮಹೇಶ್ ಶೆಟ್ಟಿ ತಿಮರೋಡಿ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತಾವು ನೀಡಿದ್ದಾರೆ ಎನ್ನಲಾದ ಹೇಳಿಕೆಗಾಗಿ ಬಂಧನಕ್ಕೆ ಒತ್ತಾಯಿಸಿದ ಬಿಜೆಪಿ ನಾಯಕರು ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿರುದ್ಧ ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶ್ವಹಿಂದೂ ಪರಿಷದ್ ಉಡುಪಿ ಜಿಲ್ಲೆಯ ವತಿಯಿoದ ಶಿವ ಪಂಚಾಕ್ಷರಿ ಜಪ ಸಂಕಲ್ಪ ; ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಕೊನೆಯಾಗಲು ಪ್ರಾರ್ಥನೆ

ಕ್ಷೇತ್ರದಲ್ಲಿ ಶ್ರದ್ಧೆ , ಭಕ್ತಿ , ಶಾಂತಿ ನೆಲೆಸಲಿ ಎಂಬ ಉದ್ದೇಶದಿಂದ ಉಡುಪಿ ಅನಂತೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಶಿವ ಪಂಚಾಕ್ಷರಿ ಜಪ ಸಂಕಲ್ಪವನ್ನು ಪರ್ಯಾಯ ಶ್ರೀ ಪುತ್ತಿಗೆ ಶ್ರೀಗಳ ಸಮ್ಮುಖದಲ್ಲಿ ನಡೆಸಲಾಯಿತು.

ಅತಿಯಾದ ಗಾಳಿ ಮಳೆಯಿಂದ ಆದ ಹಾನಿಗೆ ತುರ್ತು ಪರಿಹಾರ ಒದಗಿಸುವಂತೆ ಸರ್ಕಾರಕ್ಕೆ ಬಿಜೆಪಿ ಕ್ಷೇತ್ರಧ್ಯಕ್ಷ ನವೀನ್‌ ನಾಯಕ್‌ ಆಗ್ರಹ

ಅತಿಯಾದ ಗಾಳಿ ಮಳೆಯಿಂದ ಆದ ಹಾನಿಗೆ ತುರ್ತು ಪರಿಹಾರ ಒದಗಿಸುವಂತೆ ಸರ್ಕಾರಕ್ಕೆ ಬಿಜೆಪಿ ಕ್ಷೇತ್ರಧ್ಯಕ್ಷ ನವೀನ್‌ ನಾಯಕ್‌ ಆಗ್ರಹಿಸಿದ್ದಾರೆ.

ರೋಬೋಟ್‌ನಿಂದಲೇ ಮಗುವಿನ ಜನನ: ಜಗತ್ತಿನ ಮೊದಲ ಕೃತಕ ಗರ್ಭಧಾರಣೆಗೆ ಚೀನಾ ಸಿದ್ಧತೆ

ಭವಿಷ್ಯದಲ್ಲಿ ಹೆರಿಗೆಗೆ ಮಹಿಳೆಯರ ಅಗತ್ಯ ಇರಲಿಕ್ಕಿಲ್ಲ. ಯಾಕೆಂದರೆ, ಹ್ಯೂಮನಾಯ್ಡ್ ರೋಬೋಟ್‌ಗಳು ಮಾನವ ಮಗುವಿಗೆ ಜನ್ಮ ನೀಡುವ ಸಾಧ್ಯತೆಯಿದೆ ಎಂದು ಚೀನಾದ ವಿಜ್ಞಾನಿಗಳು ಹೇಳಿದ್ದಾರೆ.