
ಗೆಳೆಯರ ಬಳಗ (ರಿ) ಪೆರ್ಡೂರು ಇವರ ವತಿಯಿಂದ, ಸಂಸ್ಥೆಯ ಗೌರವ ಸಲಹೆಗಾರರಾದ ಶ್ರೀ ಸತೀಶ್ ಶೆಟ್ಟಿ ಕುತ್ಯಾರು ಬೀಡು ಇವರ ಮಾರ್ಗದರ್ಶನದಲ್ಲಿ. 2024-25 ರ 2ನೇ ಯೋಜನೆಯ ಅಂಗವಾಗಿ ಬೈರಂಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಂತ್ಯಾರು ನಿವಾಸಿ ಶ್ರೀ ಸುಂದರ ಶೇರ್ವೆಗಾರ್ ಇವರ ಮನೆಯನ್ನು ರೂಪಾಯಿ 1.50 ಲಕ್ಷ ವೆಚ್ಚದಲ್ಲಿ ದುರಸ್ತಿ ಮಾಡಿಕೊಡಲಾಯಿತು.ಯೋಜನೆಯ ಹಸ್ಥಾoತರ ಕಾರ್ಯಕ್ರಮ ದಿನಾಂಕ 5-3-2025 ರಂದು ನಡೆಯಿತು.

ಈ ಸಂಧರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರು ಶ್ರೀ ನಿತಿನ್ ಮೆಂಡನ್, ಸ್ಥಾಪಕ ಅಧ್ಯಕ್ಷರು ಶ್ರೀ ಸತೀಶ್ ಪಿ. ಗೌರವ ಅಧ್ಯಕ್ಷರು ಶ್ರೀ ಸತೀಶ್, ಕಾರ್ಯದರ್ಶಿ ಶ್ರೀ ಮಂಜುನಾಥ್ ಶೆಟ್ಟಿ, ಖಜಾಂಚಿ ಶ್ರೀ ನಿಶ್ವಲ್ ಶೆಟ್ಟಿ, ಸಂಸ್ಥೆಯ ಸದಸ್ಯರು,ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀ ಪ್ರಸಾದ್ ಮಲ್ಯ ಮಾಜಿ ಅಧ್ಯಕ್ಷರು ಶ್ರೀ ಜಿಯಾನಂದ ಹೆಗ್ಡೆ, ಸದಸ್ಯೆ ಶ್ರೀಮತಿ ಸಚೇತಾ ರಾವ್, ಮುಂತಾದವರು ಉಪಸ್ಥಿತರಿದ್ದರು.