spot_img

75 ವಿಐಪಿಗಳನ್ನು ಬ್ಲ್ಯಾಕ್‌ಮೇಲ್ ಮಾಡಿದ ‘ಹನಿ ಮನಿ’ ಲೇಡಿ: ಮಹಾರಾಷ್ಟ್ರದಲ್ಲಿ ಸಂಚಲನ ಸೃಷ್ಟಿಸಿದ ‘ಚಿತ್ರಾಂಗಿಣಿ’!

Date:

ಮುಂಬೈ : ತಮ್ಮ ಸೌಂದರ್ಯ ಮತ್ತು ಚಾಲಾಕಿತನವನ್ನೇ ಬಂಡವಾಳ ಮಾಡಿಕೊಂಡಿದ್ದ ಮಹಾರಾಷ್ಟ್ರದ ಓರ್ವ ಮಹಿಳೆ, ಐಪಿಎಸ್‌ ಅಧಿಕಾರಿಗಳು, ರಾಜಕಾರಣಿಗಳು, ಉನ್ನತ ಅಧಿಕಾರಿಗಳು ಸೇರಿದಂತೆ 75ಕ್ಕೂ ಹೆಚ್ಚು ವಿಐಪಿಗಳನ್ನು ಹನಿಟ್ರ್ಯಾಪ್ ಬಲೆಗೆ ಕೆಡವಿ ಕೋಟ್ಯಂತರ ರೂಪಾಯಿ ಸುಲಿಗೆ ಮಾಡಿರುವ ಮಹಾ ‘ಹನಿ ಮನಿ’ ಕಹಾನಿ ಇದೀಗ ಮಹಾರಾಷ್ಟ್ರದಲ್ಲಿ ಕೋಲಾಹಲ ಸೃಷ್ಟಿಸಿದೆ. ಈ ಘಟನೆ ಮಹಾರಾಷ್ಟ್ರದ ಪೊಲೀಸ್ ವಲಯ, ರಾಜಕೀಯ ಮತ್ತು ವಾಣಿಜ್ಯ ವಲಯದಲ್ಲಿ ಭಾರಿ ನಡುಕ ಹುಟ್ಟಿಸಿದೆ.

ಹನಿಟ್ರ್ಯಾಪ್ ಮಾಸ್ಟರ್ ಮೈಂಡ್

ಮಹಾ ‘ಹನಿ ಮನಿ’ ಕಹಾನಿಯ ಪ್ರಮುಖ ಪಾತ್ರಧಾರಿ, ‘ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು.. ಅಂದರೆ ಮಂಚಕ್ಕೂ ಕಾಲಿರುತ್ತಾ’ ಅನ್ನುವಷ್ಟು ಚಾಲಾಕಿ ಈ ಚಿತ್ರಾಂಗಿಣಿ. ತನ್ನ ಅಂದವನ್ನು ಬಂಡವಾಳ ಮಾಡಿಕೊಂಡು ಕಾಸಿರುವ ಕುಳಗಳನ್ನು ಗುರಿಯಾಗಿಸಿಕೊಂಡಿದ್ದಳು. ಬಣ್ಣ ಬಣ್ಣದ ಮಾತುಗಳಿಂದ ಮರಳು ಮಾಡಿ, ಮೊಬೈಲ್‌ನಲ್ಲಿ ‘ಮಧು ಮಂಚ’ ತೋರಿಸಿ ಯಾಮಾರಿಸುತ್ತಿದ್ದ ಈ ಬಿಂಕದ ಸಿಂಗಾರಿ, ಪ್ರಳಯಾಂತಕಿ ಕಾಮಬಾಣಕ್ಕೆ ಹಲವರನ್ನು ಲಾಕ್ ಮಾಡಿದ್ದಾಳೆ.

ಇವಳ ಬಲೆಗೆ ಬಿದ್ದವರ ಪಟ್ಟಿಯಲ್ಲಿ ಐಪಿಎಸ್ ಅಧಿಕಾರಿಗಳು, ಅಬಕಾರಿ ಇಲಾಖೆಯ ಅಧಿಕಾರಿಗಳು, ವಾಣಿಜ್ಯ ತೆರಿಗೆ ಅಧಿಕಾರಿಗಳು, ಕಾರ್ಪೊರೇಷನ್ ಉನ್ನತ ಅಧಿಕಾರಿಗಳು, ಕಾಲೇಜು ಪ್ರಿನ್ಸಿಪಾಲ್, ಪ್ರಭಾವಿ ರಾಜಕಾರಣಿಗಳು ಸೇರಿದಂತೆ ಹಲವು ವಿಐಪಿಗಳು ಸೇರಿದ್ದಾರೆ. ಹನಿಟ್ರ್ಯಾಪ್ ಬಲೆಗೆ ಬಿದ್ದವರ ಮಾನ ತೆಗೆಯುವ ಬೆದರಿಕೆ ಹಾಕಿ, ಭಾರಿ ಮೊತ್ತದ ಹಣ ಪೀಕಿಸಿದ್ದಾಳೆ.

ಪೊಲೀಸ್ ಅಧಿಕಾರಿಗಳಿಗೂ ಖೆಡ್ಡಾ

ಮಹಾರಾಷ್ಟ್ರದ ಥಾಣೆಯ ಇಬ್ಬರು ಎಸಿಪಿಗಳು ಈ ಮಹಿಳೆಯಿಂದ ಬ್ಲ್ಯಾಕ್‌ಮೇಲ್ ಮತ್ತು ಹಣ ವಸೂಲಿಯಾಗಿರುವ ಬಗ್ಗೆ ತಮ್ಮದೇ ಇಲಾಖೆಗೆ ದೂರು ನೀಡಿದ್ದಾರೆ. ರೇಪ್ ಕೇಸ್ ದಾಖಲಿಸದಂತೆ ತಲಾ 40 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಳು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರ ಗೃಹ ಇಲಾಖೆಯ ಮಹಿಳಾ ಎಸಿಪಿಯೊಬ್ಬರಿಗೆ ವಹಿಸಲಾಗಿದ್ದು, ತನಿಖೆ ವೇಳೆ ಆತಂಕಕಾರಿ ವಿಷಯಗಳು ಬೆಳಕಿಗೆ ಬಂದಿವೆ.

ಈ ಮಹಿಳೆ ತಾನೊಬ್ಬ ನೊಂದ ಮಹಿಳಾ ಕಾನ್ಸ್‌ಟೇಬಲ್ ಅಥವಾ ಹೋಮ್ ಗಾರ್ಡ್ ಎಂದು ಹೇಳಿಕೊಂಡು ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗುತ್ತಿದ್ದಳು. ಐಪಿಎಸ್ ಅಧಿಕಾರಿಗಳನ್ನೇ ಮುಖ್ಯವಾಗಿ ಗುರಿಯಾಗಿಸಿಕೊಂಡು, ಅವರೊಂದಿಗೆ ಲೈಂಗಿಕವಾಗಿ ತೊಡಗಿಸಿಕೊಂಡಂತೆ ಫೋಟೋ, ವಿಡಿಯೋಗಳನ್ನು ರಹಸ್ಯವಾಗಿ ಚಿತ್ರೀಕರಿಸಿಕೊಳ್ಳುತ್ತಿದ್ದಳು. ನಂತರ ಈ ಫೋಟೋ, ವಿಡಿಯೋಗಳನ್ನು ಬಳಸಿ ದೊಡ್ಡ ಮೊತ್ತದ ಹಣಕ್ಕೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಳು.

ಹಣ ನೀಡಿ ಮೌನಕ್ಕೆ ಶರಣಾದ ವಿಐಪಿಗಳು

ಈ ಹಿಂದೆ ಕೂಡ ಈ ಮಹಿಳೆ ಬೇರೆ ಬೇರೆಯವರ ವಿರುದ್ಧ ಸುಳ್ಳು ರೇಪ್ ಕೇಸ್ ದಾಖಲಿಸಿ, ಕೇಸ್ ವಾಪಸ್ ಪಡೆಯಲು ದೊಡ್ಡ ಮೊತ್ತದ ಹಣವನ್ನು ಬ್ಲ್ಯಾಕ್‌ಮೇಲ್ ಮಾಡಿ ಪಡೆದಿದ್ದಾಳೆ. ಬಹುತೇಕ ಸಂದರ್ಭಗಳಲ್ಲಿ ಸಂತ್ರಸ್ತ ಅಧಿಕಾರಿಗಳು, ಸಾಮಾಜಿಕ ಮುಜುಗರ, ತಮ್ಮ ವೃತ್ತಿಜೀವನಕ್ಕೆ ತೊಂದರೆ ಮತ್ತು ಇಮೇಜ್ ಡ್ಯಾಮೇಜ್ ಆಗುತ್ತದೆ ಎಂಬ ಕಾರಣಕ್ಕೆ ಹಣ ಕೊಟ್ಟು ಮೌನಕ್ಕೆ ಶರಣಾಗಿದ್ದಾರೆ. ಪೊಲೀಸರಿಗೆ ದೂರು ನೀಡುವ ಗೋಜಿಗೆ ಹೋಗಿಲ್ಲ.

ತಾನು ನೊಂದಿದ್ದು, ಸಹಾಯ ಬೇಕು ಎಂದು ಹೇಳಿಕೊಂಡು ಅಧಿಕಾರಿಗಳನ್ನು ಭೇಟಿಯಾಗುತ್ತಿದ್ದಳು. ಭಾವನಾತ್ಮಕವಾಗಿ ಮಾತನಾಡಿ ಅವರ ಕರುಣೆಯನ್ನು ಗಿಟ್ಟಿಸಿಕೊಂಡು, ಬಳಿಕ ವಾಟ್ಸಾಪ್ ಚಾಟ್, ವಿಡಿಯೋ ಚಾಟ್ ಶುರು ಮಾಡುತ್ತಿದ್ದಳು. ಅಧಿಕಾರಿಗಳಿಗೆ ತನ್ನ ಬಗ್ಗೆ ನಂಬಿಕೆ ಬರಲೆಂದು ಹೋಟೆಲ್‌ಗಳಲ್ಲಿಯೂ ಭೇಟಿಯಾಗುತ್ತಿದ್ದಳು. ಅಲ್ಲಿ, ಹಿಡನ್ ಕ್ಯಾಮೆರಾ, ಮೊಬೈಲ್ ಸ್ಕ್ರೀನ್ ರೆಕಾರ್ಡರ್, ಮೊಬೈಲ್ ಬಳಸಿ ತಾನು ಮತ್ತು ಅಧಿಕಾರಿ ಆಪ್ತವಾಗಿರುವ ಫೋಟೋ, ವಿಡಿಯೋಗಳನ್ನು ರಹಸ್ಯವಾಗಿ ತೆಗೆದುಕೊಳ್ಳುತ್ತಿದ್ದಳು. ನಂತರ ಸಾರ್ವಜನಿಕ ಅವಮಾನ, ವೃತ್ತಿಗೆ ತೊಂದರೆ, ರೇಪ್ ಕೇಸ್ ಅಪಾಯದಿಂದ ಬಚಾವ್ ಆಗಲು ಅಧಿಕಾರಿಗಳು ಕೇಳಿದಷ್ಟು ಹಣ ಕೊಟ್ಟು ಸುಮ್ಮನಾಗುತ್ತಿದ್ದರು.

ಒಮ್ಮೆ ಒಬ್ಬ ಐಪಿಎಸ್ ಅಧಿಕಾರಿಯನ್ನು ಹೋಟೆಲ್‌ಗೆ ಆಹ್ವಾನಿಸಿ, ತನ್ನ ಬಟ್ಟೆಯನ್ನು ತಾನೇ ಬಿಚ್ಚಿಕೊಂಡು ಸೀಕ್ರೆಟ್ ಆಗಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾಳೆ. ಬಳಿಕ ಈ ವಿಡಿಯೋವನ್ನು ಬ್ಲ್ಯಾಕ್‌ಮೇಲ್‌ಗೆ ಬಳಸಿಕೊಂಡಿದ್ದಾಳೆ. ಮತ್ತೊಂದು ಪ್ರಕರಣದಲ್ಲಿ, ಹಿರಿಯ ಅಧಿಕಾರಿಯ ಪತ್ನಿಯೇ ಈ ಮಹಿಳೆಗೆ ಹಣ ನೀಡಿ, ತನ್ನ ಪತಿಯ ವಿರುದ್ಧ ರೇಪ್ ಕೇಸ್ ದಾಖಲಿಸದಂತೆ ತಡೆದಿದ್ದಾರೆ. ಈ ಮಹಿಳೆ ಮುಂಬೈ, ಥಾಣೆ, ಪುಣೆ, ನಾಸಿಕ್‌ನಲ್ಲಿ ಇದೇ ರೀತಿ ಅನೇಕರಿಗೆ ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡಿದ್ದಾಳೆ.

ಮಹಾರಾಷ್ಟ್ರ ಪೊಲೀಸ್ ಇಲಾಖೆಯ ಮೂವರು ಡಿಸಿಪಿಗಳು, ಅಬಕಾರಿ ಅಧಿಕಾರಿಗಳು, ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್‌ಗಳು, ಎಸಿಗಳೂ ಕೂಡ ಈಕೆಯ ಬಲೆಗೆ ಬಿದ್ದು ಇಂಗು ತಿಂದ ಮಂಗನಂತಾಗಿದ್ದಾರೆ. 2016ರಲ್ಲಿ ತಾನೊಬ್ಬ ಕ್ರೈಮ್ ಬ್ರಾಂಚ್ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಥಾಣೆಯಲ್ಲಿ ಹಣ ವಸೂಲಿಗೆ ಯತ್ನಿಸಿದ್ದಳು. ಈ ಹಿಂದೆ ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲು ಪಾಲಾಗಿದ್ದರೂ, ಹೊಸ ಹೆಸರು, ಹೊಸ ವೇಷದಲ್ಲಿ ಹನಿಟ್ರ್ಯಾಪ್ ಮಾಡುವುದನ್ನು ಮುಂದುವರಿಸಿದ್ದಾಳೆ. ಇಬ್ಬರು ಎಸಿಪಿಗಳು ದಾಖಲಿಸಿರುವ ಕೇಸ್‌ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಮಹಿಳೆ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಳು. ಬಳಿಕ ಬಾಂಬೆ ಹೈಕೋರ್ಟ್‌ನಿಂದ ಮಧ್ಯಂತರ ರಕ್ಷಣೆ ಪಡೆದಿದ್ದಾಳೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಫುಟ್‌ಬಾಲ್ : ಕಾರ್ಕಳ ಜ್ಞಾನಸುಧಾ ತಂಡ ಜಿಲ್ಲಾಮಟ್ಟಕ್ಕೆ

ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ತಾಲೂಕು ಮಟ್ಟದ ಫುಟ್‌ಬಾಲ್ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.

‘ಸೇವಾ ಪಾಕ್ಷಿಕ ಅಭಿಯಾನ’ ಯಶಸ್ವಿಗೊಳಿಸಲು ಕುತ್ಯಾರು ನವೀನ್ ಶೆಟ್ಟಿ ಕರೆ

ಜಿಲ್ಲೆಯಾದ್ಯಂತ ನಡೆಯಲಿರುವ ಸೇವಾ ಪಾಕ್ಷಿಕ ಅಭಿಯಾನವನ್ನು ಪಕ್ಷದ ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಸಂಘಟಿತ ಪರಿಶ್ರಮದ ಮೂಲಕ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಕರೆ ನೀಡಿದರು.

ಕ್ರಿಯೇಟಿವ್ ಕಾಲೇಜಿನಲ್ಲಿ ಗುರುದೇವೋಭವ ಕಾರ್ಯಕ್ರಮ

ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಸಪ್ತಸ್ವರ ಸಭಾಂಗಣದಲ್ಲಿ, 'ಕ್ರಿಯೇಟಿವ್ ಗುರುದೇವೋಭವ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜ್ಞಾನ ಜ್ಯೋತಿಯನ್ನು ಬೆಳಗಿ, ಡಾ. ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆಯನ್ನು ನೀಡಲಾಯಿತು.

ಕಾರ್ಕಳ ಜ್ಞಾನಸುಧಾ – ಶಿಕ್ಷಕರ ದಿನಾಚರಣೆಸಾವಧಾನದ ಮನಸ್ಥಿತಿ ಗೌರವದ ಉಪಸ್ಥಿತಿ : ವಸಂತ್ ಆಚಾರ್

ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಸಂದರ್ಭ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು.