
ಹಿರಿಯಡ್ಕ: ಹಿರಿಯಡ್ಕ ಪುತ್ತಿಗೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕಳೆದ 19 ವರ್ಷಗಳಿಂದ ಲೋಕಕಲ್ಯಾಣಾರ್ಥವಾಗಿ ವಿಷ್ಣುಮೂರ್ತಿ ದೇವರಿಗೆ ಲಕ್ಷ ತುಳಸಿ ಅರ್ಚನೆ ನಡೆದಿದೆ. ಈ ಸಲ 20ನೇ ವರ್ಷದಲ್ಲಿ ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ ಎಂಬ ಪಂಚ ಕುಂಡಗಳಲ್ಲಿ ಪವಮಾನ ಯಾಗ ಹಾಗೂ ಲಕ್ಷ ತುಳಸಿ ಅರ್ಚನೆ ಸಮಸ್ತ ಗ್ರಾಮಸ್ಥರೆಲ್ಲರ ಸಹಕಾರದಿಂದ ಯಶಸ್ವಿಯಾಗಿ ನೆರವೇರಿತು.
ಈ ಸಮಯದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಅಂಗಭೂತವಾಗಿ ಕ್ಷೇತ್ರದ ತಂತ್ರಿಗಳಾದ ವಾದಿರಾಜ ತಂತ್ರಿ, ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ, ಪ್ರಸನ್ನ ಆಚಾರ್ಯ ಹಾಗೂ ಕ್ಷೇತ್ರದ ಅರ್ಚಕರಾದ ವಿಷ್ಣುಮೂರ್ತಿ ಭಟ್ ಇವರ ಸಮ್ಮುಖದಲ್ಲಿ ದೇವಳದ ಮುಂದಿನ ಜೀರ್ಣೋದ್ದಾರ ಕಾರ್ಯಗಳಿಗೆ ಅನುಕೂಲವಾಗುವಂತೆ ಸಮಸ್ತ ಗ್ರಾಮಸ್ಥರ ಅಭಿಪ್ರಾಯ ತೆಗೆದುಕೊಂಡು ಜೀರ್ಣೋದ್ದಾರ ಸಮಿತಿ ರಚಿಸಲಾಯಿತು. ಈ ಸಮಯದಲ್ಲಿ ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದು, ಶ್ರೀ ದೇವರ ಅನ್ನಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು.
(ವಿ.ಸೂ)
ಮುಂಬರುವ ಪುತ್ತಿಗೆ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯದಲ್ಲಿ ಭಕ್ತ ಮಹನೀಯರೆಲ್ಲರೂ ಸಹಕರಿಸಬೇಕಾಗಿ ವಿನಂತಿ.



































