spot_img

ಹಿರಿಯಡ್ಕ ಬ್ರಾಹ್ಮಣ ಮಹಾಸಭಾದಿಂದ ‘ಆಟಿಯ ಸಂಭ್ರಮ 2025’ ಯಶಸ್ವಿ

Date:

spot_img

ಉಡುಪಿ : ಬ್ರಾಹ್ಮಣ ಮಹಾಸಭಾ ಹಿರಿಯಡ್ಕ ವಲಯದಿಂದ ನಿನ್ನೆ ಓಂತಿಬೆಟ್ಟು ಲಕ್ಷ್ಮೀಕೃಪ ಕಲ್ಯಾಣ ಮಂಟಪದಲ್ಲಿ ಆಟಿಯ ಸಂಭ್ರಮ 2025 ಕಾರ್ಯಕ್ರಮ ಸಂಪನ್ನಗೊಂಡಿತ್ತು.ಈ ಸಂಭ್ರಮದಲ್ಲಿ ಹಿರಿಯಡ್ಕ ಮಾತ್ರವಲ್ಲದೆ ಬೇರೆ ಬ್ರಾಹ್ಮಣ ವಲಯದಿಂದಲೂ ವಿಪ್ರರು ಬಂದು ಭಾಗವಹಿಸಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.

ತುಳುನಾಡಿನಲ್ಲಿ ಜುಲೈ ಮಧ್ಯ ಭಾಗದಲ್ಲಿ ಬರುವ ಆಷಾಡ ಸಂಕ್ರಮಣದಿಂದ, ಆಗಸ್ಟ್ ಮಧ್ಯ ಭಾಗದಲ್ಲಿ ಬರುವ ಶ್ರಾವಣ ಸಂಕ್ರಮಣದವರೆಗಿನ 30 ದಿನಗಳನ್ನು ಆಟಿ ತಿಂಗಳು ಎನ್ನುವರು.ಗದ್ದೆಯ ಕೆಲಸವೆಲ್ಲ ಮುಗಿದು ಈ ಮಾಸದಲ್ಲಿ ರೈತರೆಲ್ಲಾ ನಿರಾಳರಾಗಿರುವ ಸಂದರ್ಭದಲ್ಲಿ ಹಾಗೂ ಆಟಿಯ ತಿಂಗಳಲ್ಲಿ ಮದುವೆ ಮುಂಜಿ ಇತ್ಯಾದಿ ಯಾವುದೇ ಒಳ್ಳೆಯ ಕಾರ್ಯಕ್ರಮಗಳು ನಡೆಯದೇ ಇರುವುದರಿಂದಲೂ ರೈತರು ಬಿಡುವಾಗಿರುತ್ತಾರೆ. ಆ ಸಮಯದಲ್ಲಿ ತುಳುನಾಡಿನಲ್ಲಿ ಆಟಿಡೊಂಜಿ ದಿನ, ಆಟಿದ ಸಂಭ್ರಮ, ಕೆಸರೆಡು ಒಂಜಿದಿನ, ಕೆಸರ್ದ ಗೊಬ್ಬು ಎಂಬಿತ್ಯಾಗಿ ಕಾರ್ಯಕ್ರಮಗಳನ್ನು ಊರಿನ ಉತ್ಸಾಹಿ ಯುವಕರು ಆಯೋಜಿಸಿ, ಊರಿನವರು ಪರವೂರಿನವರೆಲ್ಲರೂ ಸೇರಿ, ಈಗ ನಾವು ಮರೆತ ಹಳೆಯ ಆಟೋಟಗಳನ್ನು ಆಡಿಸುವುದು, ಹಳೆಯ ಕಾಲದಲ್ಲಿ ಹಳ್ಳಿಯ ಜನ ಮಾಡುತ್ತಿದ್ದ ಖಾದ್ಯಗಳನ್ನು ಮಾಡಿ ಬಂದವರೆಲ್ಲರಿಗೂ ಉಣ ಬಡಿಸುವುದು ಮುಂತಾದವುಗಳನ್ನು ಹಮ್ಮಿಕೊಳ್ಳುತ್ತಾರೆ.

ಈ ಮೊಬೈಲ್ ಯುಗದಲ್ಲಿ ಹೊಸ ತಲೆಮಾರಿನವರಿಗೆ ಹಳೆ ತಲೆಮಾರಿನ ಆಟೋಟ, ಖಾದ್ಯ ಗಳ ಪರಿಚಯ ಮಾಡುವುದೇ ಇಲ್ಲಿ ಸಂಘಟಕರ ಉದ್ದೇಶವಾಗಿರುತ್ತದೆ. ಹಾಗೆ ನಿನ್ನೆ ದಿನ ಹಿರಿಯಡ್ಕ ಮಹಾಸಭಾದವರ ಆಟಿ ಸಂಭ್ರಮ 2025 ರಲ್ಲಿ ವಲಯದ ಸದಸ್ಯರು ಬೆಳಿಗ್ಗೆ 9:00ಗಂಟೆಗೆ ಮಕ್ಕಳು ವೃದ್ಧರಾಧಿಯಾಗಿ ಓಂತಿಬೆಟ್ಟಿನಲ್ಲಿರುವ ಲಕ್ಷ್ಮೀ ಕೃಪಾ ಕಲ್ಯಾಣ ಮಂಟಪಕ್ಕೆ ಬಂದು ತರಕಾರಿ ತುಂಡು ಮಾಡುವುದು, ಬಿಸಿ ಬಿಸಿ ಶರಭತ್ತು, ತಂಪಾದ ಪಾನೀಯ ತಯಾರಿ, ತರಕಾರಿ ಸೊಪ್ಪುಗಳನ್ನು ಆಯುವುದು ಕೆಲವರು ಭಕ್ಷ ತಯಾರಿಕೆಯಲ್ಲಿ ತೊಡಗಿದರೆ, ಇನ್ನು ಹಲವರು ಎಣ್ಣೆಯಲ್ಲಿ ತಿಂಡಿಯನ್ನು ಹುರಿಯುವುದು ಹೀಗೆ ಹತ್ತು ಹಲವು ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.ಅವರೆಲ್ಲರ ಶ್ರಮದಿಂದ ಮೂರು ಬಗೆಯ ತಂಬುಳಿ, ಹುರುಳಿ ಸಾರು, ಹುರುಳಿ ಪಲ್ಯ, ಮೆಣಸ್ಕಾಯಿ, ಹಲಸಿನ ಗಸಿ, ಹುಳಿ, ಪತ್ರೊಡೆ, ಹಲಸಿನ ಬೀಜದ ಒಡೆ, ಹಲಸಿನ ಗಟ್ಟಿ ,ಅಪ್ಪಿ ಪಾಯಸ,ಮೋಹನ ಲಾಡು, ಕಾರಕಡ್ಡಿ, ಹಲಸಿನ ಅಪ್ಪ, ಅರಸಿನ ಎಲೆಯ ಈರಡ್ಯೆ ಹೀಗೆ ಹತ್ತು ಹಲವು ಸಾಂಪ್ರದಾಯಿಕ ಖಾದ್ಯಗಳು ತಯಾರಾಗಿ ಭಕ್ಷಣೆಗಾಗಿ ಕಾಯುತ್ತಿದ್ದವು. ಅಡುಗೆ ಕೆಲಸ ಎಲ್ಲಾ ಆದ ಬಳಿಕ ಹಳೆಯ ಆಟಕ್ಕೆ ಹೊಸ ಹೆಸರಿನ ಸ್ಪರ್ಶಕೊಟ್ಟು ಅದೃಷ್ಟ ಚಕ್ರ,ಆಜ್ಞಾ ಜಿಗಿತ, ಏಕಪಾದ ಸ್ಪರ್ಧೆ, ಸ್ಪರ್ಶ ಪಟು, ಚಕ್ರಾವಧಾನ, ಗೋಣಿಯಾನ, ಜಟಾಲಂಕಾರ, ಸಂಪತ್ ಅನ್ವೇಷಣೆ ಎಂಬ ಸ್ಪರ್ಧೆಗಳು ವಿಪ್ರ ಗಂಡು ಹೆಣ್ಣು ಮಕ್ಕಳು ಹಾಗೂ ಮಧ್ಯ ವಯಸ್ಕರು, ವೃದ್ಧರ ಸಹಯೋಗದೊಂದಿಗೆ ನಡೆಸಲ್ಪಟ್ಟವು.

ಆಟೋಟ ಸ್ಪರ್ಧೆಯ ಬಳಿಕ ಸಭಾ ಕಾರ್ಯಕ್ರಮವು ನಡೆಸಲ್ಪಟ್ಟಿತು. ವೇದಿಕೆಯಲ್ಲಿ ಆಸೀನರಾಗಿದ್ದ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಶ್ರೀಕಾಂತ್ ಉಪಾಧ್ಯಾಯರು ಮಾತನಾಡುತ್ತಾ, ಹಿರಿಯಡ್ಕ ಮಹಾಸಭಾವು ಕುದಿ ಶ್ರೀನಿವಾಸ ಭಟ್ಟರ ಮುತ್ಸದ್ದೀತನದಿಂದ ಇಡೀ ಉಡುಪಿ ಜಿಲ್ಲೆಯಲ್ಲೇ ಹೆಸರುವಾಸಿಯಾಗಿದೆ. ಹಾಗೂ ಅವರು ಹಲವಾರು ಪ್ರವಾಸಗಳನ್ನು ಹಮ್ಮಿಕೊಳ್ಳುವುದರಿಂದಲೂ, ವಲಯದ ಬ್ರಾಹ್ಮಣರನ್ನು ಒಳ್ಳೆಯ ರೀತಿಯಲ್ಲಿ ಒಗ್ಗೂಡಿಸುವ ಮೂಲಕ ಸಂಘಟನಾ ಚತುರರಾಗಿರುತ್ತಾರೆ. ಮುಂದಿನ ದಿನಗಳಲ್ಲಿ ಅವರ ಅನುಭವ ನಮ್ಮ ತಾಲೂಕು ಮಹಾಸಭಾಕ್ಕೂ ಅಗತ್ಯವಾಗಿ ಬೇಕಾಗಿದೆ ಎಂದು ಹೇಳಿದರು.

ತಾಲೂಕು ಮಹಾಸಭಾದ ಕಾರ್ಯದರ್ಶಿಗಳಾದ ದುರ್ಗಾಪ್ರಸಾದ್ ಭಾರ್ಗವರವರು ಸಮಯೋಚಿತವಾಗಿ ಮಾತನಾಡಿದರು. ಹಿರಿಯಡ್ಕ ಮಹಾಸಭಾದ ಅಧ್ಯಕ್ಷರಾದ ಕುದಿ ಶ್ರೀನಿವಾಸ ಭಟ್ಟರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ನಮ್ಮ ಸಂಘವು ನನ್ನೊಬ್ಬನ ಶ್ರಮದಿಂದ ಮಾತ್ರವಲ್ಲ, ಎಲ್ಲಾ ಸದಸ್ಯರ ಒಗ್ಗಟ್ಟಿನಿಂದಾಗಿ ಸಾಧ್ಯವಾಗಿದೆ. ನಾವು ವರ್ಷದಲ್ಲಿ ಹಲವಾರು ಪ್ರವಾಸಗಳನ್ನು ಹಮ್ಮಿಕೊಳ್ಳುವುದರಿಂದ ನಮ್ಮ ಬ್ರಾಹ್ಮಣ ಸಭಾದ ಸದಸ್ಯರ ಸಂಬಂಧ ಗಟ್ಟಿಯಾಗಿದೆ. ಒಬ್ಬರಿಗೊಬ್ಬರ ಪರಿಚಯವಾಗಿ ಬಾಂಧವ್ಯ ವೃದ್ಧಿಸಿದೆ. ಹಾಗೂ ನಮ್ಮ ಪ್ರವಾಸ ಮಂದಿನ ಈ ದಿನ ಮಾಡುವುದು ಎಂದು ಸಂಘದ ಗ್ರೂಪಿನಲ್ಲಿ ಹಾಕಿದ ಒಂದೇ ದಿನಕ್ಕೆ 30 ರಿಂದ 40 ಜನ ತಮ್ಮ ಹೆಸರನ್ನು ನಮೂದಿಸುತ್ತಾರೆ ಎಂದು ಹೇಳಿದರು.

ವೇದಿಕೆಯಲ್ಲಿ ಉಡುಪಿ ತಾಲೂಕು ಬ್ರಾಹ್ಮಣ ಸಭಾದ ಕೋಶಾಧಿಕಾರಿ ಹಯವದನ ಭಟ್, ಜನಾರ್ದನ ಭಟ್ ತೋನ್ಸೆ ವಲಯದವರು, ಶ್ರೀನಿವಾಸ ಬಲ್ಲಾಳ್ ಕರಂಬಳ್ಳಿ ವಲಯದವರು ಉಪಸ್ಥಿತರಿದ್ದರು ಕಾರ್ಯದರ್ಶಿಗಳಾದ ನಾಗರಾಜ ರಾವ್ ರವರು ವೇದಿಕೆಯಲ್ಲಿ ಇದ್ದ ಗಣ್ಯರಿಗೆ ಧನ್ಯವಾದ ಸಮರ್ಪಿಸಿದರು. ಸೇರಿದ್ದ 250 ಜನ ವಿಪ್ರರ ಭೋಜನಾಂತ್ಯದೊಂದಿಗೆ ಆಟಿಯ ಸಂಭ್ರಮ 2025 ಸಮಾಪನಗೊಂಡಿತು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕಾರ್ಕಳದಲ್ಲಿ ಶೌರ್ಯ ಸ್ವಯಂ ಸೇವಕರಿಗೆ ತರಬೇತಿ ಕಾರ್ಯಾಗಾರ ಯಶಸ್ವಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ)ಕಾರ್ಕಳ ತಾಲೂಕು,ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ಕಾರ್ಕಳ ತಾಲೂಕಿನ ಶೌರ್ಯ ಸ್ವಯಂ ಸೇವಕರ ತರಬೇತಿ ಕಾರ್ಯಗಾರವನ್ನು ರಾಜಪುರ ಸಭಾಭವನ ಜೋಡು ರಸ್ತೆ ಕಾರ್ಕಳದಲ್ಲಿ ನಡೆಸಲಾಯಿತು.

27ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಮೇಘಾ ಶೆಟ್ಟಿ: ಗ್ರೀನ್ ಸೀರೆಯ ಸಖತ್ ಬೋಲ್ಡ್ ಲುಕ್ ವೈರಲ್!

ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆಯ ಜನಪ್ರಿಯ ನಟಿ ಮೇಘಾ ಶೆಟ್ಟಿ ಅವರು ಆಗಸ್ಟ್ 4ರಂದು ತಮ್ಮ 27ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಹೆಬ್ರಿಯಲ್ಲಿ ಸುವರ್ಣ ಸಂಭ್ರಮದ ಗಣೇಶೋತ್ಸವ: ಮುಕ್ತ ಕ್ರಿಕೆಟ್ ಪಂದ್ಯಾಟ ಯಶಸ್ವಿ

ಸಾರ್ವಜನಿಕ ಗಣೇಶೋತ್ಸವ ಸಮಿತಿ (ರಿ), ಹೆಬ್ರಿ, ಇದರ ಸುವರ್ಣ ಸಂಭ್ರಮದ ಗಣೇಶೋತ್ಸವದ ಅಂಗವಾಗಿ ಆಯೋಜಿಸಿದ್ದ ಮುಕ್ತ ಅಂಡರ್-ಆರ್ಮ್ ಕ್ರಿಕೆಟ್ ಪಂದ್ಯಾಟ ಯಶಸ್ವಿಯಾಗಿ ನಡೆಯಿತು. ಸಮಿತಿಯ ಉಪಾಧ್ಯಕ್ಷ ಮತ್ತು ಹಿರಿಯರಾದ ಹೆಚ್. ಪ್ರಕಾಶ್ ಮಲ್ಯ ಅವರು ಪಂದ್ಯಾಟವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಉಪ್ಪಿನಂಗಡಿ: ಹಾವೇರಿ ಮೂಲದ ಮಹಿಳೆ ನಾಪತ್ತೆ

ನೆಕ್ಕಿಲಾಡಿ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಿದ್ದ ಹಾವೇರಿ ಮೂಲದ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.