

ಹಿರಿಯಡಕದ ಗ್ರೀನ್ ಪಾರ್ಕ್ ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿ ಕುರಿತು ಒಂದು ವಿಶೇಷ ಕಾರ್ಯಾಗಾರ ನಡೆಯಿತು. ಜೇಸೀಐ ಭಾರತದ ರಾಷ್ಟ್ರೀಯ ತರಬೇತುದಾರರಾದ ಜೇಸಿ. ದೀಪಕ್ ರಾಜ್ ಅವರು ತರಬೇತಿ ನೀಡಿದರು. ಈ ಕಾರ್ಯಕ್ರಮವನ್ನು ಸೀನಿಯರ್ ಚೇಂಬರ್ ಇಂಟರ್‌ನ್ಯಾಶನಲ್, ನೇಜಾರ್ ಲೇಜಿಯನ್‌ನ ವತಿಯಿಂದ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಲಾ ಪ್ರಾಂಶುಪಾಲರಾದ ಕ್ಲಾರಿನ್ ನಿಕೋಲಸ್ ಅವರು ದೀಪ ಬೆಳಗುವ ಮೂಲಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಎಸ್.ಸಿ.ಐ ನೇಜಾರ್ ಲೇಜಿಯನ್‌ನ ಅಧ್ಯಕ್ಷರಾದ ಸುರೇಶ್ ಅಮೀನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮಿತ್ರ ಕುಮಾರ್ ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಜಯಶ್ರೀ ತೆಂಡೂಲ್ಕರ್ ಅವರು ಕಾರ್ಯಕ್ರಮದ ನಿರ್ವಹಣೆ ಮಾಡಿದರೆ, ರಂಜಿತಾ ಅವರು ದೀಪಕ್ ರಾಜ್ ಅವರನ್ನು ಪರಿಚಯಿಸಿದರು. ಶುಭ್ರ ಶೆಟ್ಟಿ ಅವರು ವಂದನಾರ್ಪಣೆ ಮಾಡಿದರು. ಶಾಲೆಯ ಆಡಳಿತಾಧಿಕಾರಿ ಶೇಖರ್ ಗುಜ್ಜರ್ ಬೆಟ್ಟು, ಸಂಯೋಜಕಿಯರಾದ ಉಷಾ ರಾವ್ ಮತ್ತು ಗೀತಾ ಭಟ್ ಹಾಗೂ ಇತರ ಶಿಕ್ಷಕ-ಶಿಕ್ಷಕಿಯರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಈ ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಒತ್ತಡವನ್ನು ನಿರ್ವಹಿಸುವುದು, ಸಮಯವನ್ನು ಸರಿಯಾಗಿ ಬಳಸಿಕೊಳ್ಳುವುದು, ಉತ್ತಮ ಸ್ಮರಣ ಶಕ್ತಿಯನ್ನು ಗಳಿಸುವುದು ಹಾಗೂ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸುವುದು ಹೇಗೆ ಎಂಬ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಲಾಯಿತು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿ, ಉತ್ತಮ ಫಲಿತಾಂಶ ಪಡೆಯಲು ಪ್ರೇರೇಪಿಸಿತು.

