
ಹಿರಿಯಡಕ : ಹಿರಿಯಡಕ ಗ್ರೀನ್ ಪಾರ್ಕ್ ಶಾಲೆಯಲ್ಲಿ ರೋಟರಿ ಪರ್ಕಳ ಇದರ ಪ್ರಾಯೋಜಕತ್ವದಲ್ಲಿ ಇಂಟಲ್ಯಾಕ್ಸ್ ಕ್ಲಬ್ ಪದ ಪ್ರದಾನ ಸಮಾರಂಭವನ್ನು ಪದ ಪ್ರದಾನ ಅಧಿಕಾರಿ ರೊ | PHF ಆತ್ರಾಡಿ ಪೃಥ್ವಿರಾಜ್ ಹೆಗ್ಡೆಯವರು ಕಾಲರ್ ಮತ್ತು ಗ್ಯಾವಲನ್ನು ಇಂಟರಾಕ್ಟ್ ಕ್ಲಬ್ ಅಧ್ಯಕ್ಷೆ ಕು| ಅನುಷಾ ಉಪಾಧ್ಯಾಯ ಅವರಿಗೆ ಹಸ್ತಾಂತರಿಸಿ ಮಾತನಾಡುತ್ತಾ ವಿದ್ಯಾರ್ಥಿ ಜೀವನದಲ್ಲಿಯೇ ಕಲಿಕೆಯೊಂದಿಗೆ ಸೇವಾ ಮನೋಭಾವನೆಯನ್ನು ರೂಢಿಸಿ ಕೊಳ್ಳಬೇಕೆಂದು ಹಿತವಚನ ನೀಡಿದರು.

ಪರ್ಕಳ ರೋಟರಿ ಕ್ಲಬ್ ಅಧ್ಯಕ್ಷರಾದ ರೊ PHF ಹಾಜಿ ಅಬೂಬಕರ್‌ರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಲಾ ಪ್ರಾಂಶುಪಾಲೆ ಕ್ಲಾರಿನ್ ನಿಕೋಲಸ್, ಇಂಟರಾಕ್ಟ್ ಟೀಚರ್ ಕೋ-ಆರ್ಡಿನೇಟರ್ ಜಯಶ್ರೀ ತೆಂಡುಲ್ಕರ್ ಹಾಗೂ ರೊ| ಸತ್ಯಾನಂದ ನಾಯಕ್ ರವರು ಭಾಗವಹಿಸಿದ್ದರು.

ಇಂಟರಾಕ್ಟ್ ಕಾರ್ಯದರ್ಶಿ ತೇಜಸ್ ಆಚಾರ್ಯ ಗತವರ್ಷದ ವರದಿಯನ್ನು ವಾಚಿಸಿದರು. ಈ ಸಂದರ್ಭದಲ್ಲಿ ರೋಟರಿ ನಿಕಟಪೂರ್ವ ಅಧ್ಯಕ್ಷರಾದ ರೊ | ರಾಮಮೂರ್ತಿ ಭಟ್, ರೊ 1 ಬಿ. ಹೆಚ್. ಶೆಟ್ಟಿಗಾರ್, ಶಾಲಾ ಆಡಳಿತಾಧಿಕಾರಿ ಶ್ರೀ ಶೇಕರ ಗುಜ್ಜರಬೆಟ್ಟು, ಸಂಯೋಜಕಿ ಉಷಾ ರಾವ್ ಮತ್ತು ಇತರ ಶಿಕ್ಷಕಿಯರು ಉಪಸ್ಥಿತರಿದ್ದರು. ರೊ | PHF ದಯಾನಂದ ನಾಯಕ್ ಪಿ. ಯವರು ಕಾರ್ಯಕ್ರಮ ನಿರೂಪಿಸಿ, ರೋಟರಿ ಕಾರ್ಯದರ್ಶಿ ರೋ | ವಿಶ್ವನಾಥ್ ನಾಯಕ್ ರವರು ವಂದಿಸಿದರು.

