
ಉಡುಪಿ: ಬಂಟರ ಸಂಘ ಹಿರಿಯಡಕ (ರಿ.) ವತಿಯಿಂದ ಆಗಸ್ಟ್ 10, ಭಾನುವಾರದಂದು ಹಿರಿಯಡಕದ ಶ್ರೀ ವೀರಭದ್ರ ದೇವಸ್ಥಾನದ ಸಭಾಭವನದಲ್ಲಿ ‘ಆಟಿಡೊಂಜಿ ದಿನ’ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಬಂಟರ ಸಂಘದ ಸದಸ್ಯರು ಮತ್ತು ಸ್ಥಳೀಯ ಬಂಟ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು.
ಬೆಳಿಗ್ಗೆ 9:30ರಿಂದ ಆಟಿ ತಿಂಗಳ ಹಿನ್ನೆಲೆಯುಳ್ಳ ವಿವಿಧ ಸಾಂಪ್ರದಾಯಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟರ ಸಂಘ ಹಿರಿಯಡಕದ ಅಧ್ಯಕ್ಷರಾದ ಶ್ರೀ ನಿತೀಶ್ ಕುಮಾರ್ ಶೆಟ್ಟಿ ಅವರು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಭಾಸ್ಕರ್ ಶೆಟ್ಟಿ , ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಸುರೇಶ ಶೆಟ್ಟಿ ಗುರ್ಮೆ, ಶ್ರೀ ಪುನೀತ್ ಪೊಲೀಸ್ ಅಧಿಕಾರಿಗಳು ಹಿರಿಯಡಕ ಪೊಲೀಸ್ ಠಾಣೆ , ಶ್ರೀಮತಿ ಮಂಜುಳಾ ಹಾಗೂ ಶ್ರೀಮತಿ ಯಶೋಧ ಶೆಟ್ಟಿ ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಬಂಟರ ಸಂಘ ಹಿರಿಯಡಕದ ಸ್ಥಾಪಕಾಧ್ಯಕ್ಷರಾದ ವಿಶ್ವನಾಥ ರೈ , ಉಪಾಧ್ಯಕ್ಷರಾದ ರವೀಂದ್ರನಾಥ್ ಹೆಗ್ಡೆ , ಕಾಯದರ್ಶಿಗಳಾದ ನವೀನ್ ಶೆಟ್ಟಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ, ಮಧ್ಯಾಹ್ನ 1:00 ಗಂಟೆಗೆ ಆಟಿ ತಿಂಗಳ ವಿಶೇಷ ಖಾದ್ಯಗಳ ಭೋಜನವನ್ನು ಏರ್ಪಡಿಸಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಸಂಜನಾ ರೈ ಅವರನ್ನು ಸಂಘದ ಸದಸ್ಯರು ಅಭಿನಂದಿಸಿದರು.