
ಹಿರಿಯಡಕ : ಕ್ರೀಡಾ ಸ್ಫೂರ್ತಿ ಮತ್ತು ಸಮಾಜದ ಒಗ್ಗಟ್ಟನ್ನು ಪಸರಿಸುವ ಉದ್ದೇಶದಿಂದ ಹಿರಿಯಡಕದ ಕೊಂಡಾಡಿ ಭಜನೆಕಟ್ಟೆಯ ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘದ ಆಶ್ರಯದಲ್ಲಿ ಬೃಹತ್ ಹಗ್ಗ ಜಗ್ಗಾಟ ಪಂದ್ಯಾಟಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ಫೆಬ್ರವರಿ 28 ರ ಶನಿವಾರ ಸಂಜೆ 4:00 ಗಂಟೆಯಿಂದ ಕೊಂಡಾಡಿಯ ಬೊಮ್ಮಾರಬೆಟ್ಟು ಶಾಲಾ ಮೈದಾನದಲ್ಲಿ ‘ವಿಶ್ವಕರ್ಮ ಟ್ರೋಫಿ 2026’ ಹೊನಲು ಬೆಳಕಿನ ಕ್ರೀಡಾಕೂಟವು ರೋಚಕವಾಗಿ ನಡೆಯಲಿದೆ.
ಈ ಪಂದ್ಯಾಟವು 500+10 ಕೆ.ಜಿ ವಿಭಾಗದ ಫುಲ್ ಗ್ರಿಪ್ ಮಾದರಿಯಲ್ಲಿ ನಡೆಯಲಿದ್ದು, ಪುರುಷ ಹಾಗೂ ಮಹಿಳಾ ವಿಭಾಗದ ಕ್ರೀಡಾಪಟುಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಪುರುಷರ ವಿಭಾಗದ ವಿಜೇತರಿಗೆ ಪ್ರಥಮ ಬಹುಮಾನವಾಗಿ 20,000 ರೂ. ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ಕ್ರಮವಾಗಿ 10,000 ರೂ. ಮತ್ತು 5,000 ರೂ. ನಗದಿನೊಂದಿಗೆ ಟ್ರೋಫಿ ನೀಡಿ ಗೌರವಿಸಲಾಗುವುದು. ಇನ್ನು ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನಕ್ಕೆ 4,000 ರೂ. ಹಾಗೂ ದ್ವಿತೀಯ ಸ್ಥಾನಕ್ಕೆ 2,000 ರೂ. ನಗದು ಬಹುಮಾನ ಮೀಸಲಿಡಲಾಗಿದೆ. ಹಿರಿಯಡಕ ಪರಿಸರದ ಕ್ರೀಡಾಭಿಮಾನಿಗಳು ಈ ರೋಚಕ ಪಂದ್ಯಾವಳಿಗೆ ಸಾಕ್ಷಿಯಾಗಲಿದ್ದು, ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘವು ಸರ್ವರನ್ನು ಪ್ರೀತಿಯಿಂದ ಆಮಂತ್ರಿಸಿದೆ.



































