ಹಿಂದೂಜಾ ಗ್ರೂಪ್‌ ಅಧ್ಯಕ್ಷ, ಬಿಲಿಯನೇರ್ ಗೋಪಿಚಂದ್‌ ಪಿ. ಹಿಂದುಜಾ ವಿಧಿವಶ

Date:

spot_img

ಲಂಡನ್: ಜಾಗತಿಕ ಉದ್ಯಮ ಸಮೂಹವಾದ ಹಿಂದೂಜಾ ಗ್ರೂಪ್‌ನ ಅಧ್ಯಕ್ಷ ಮತ್ತು ಬಿಲಿಯನೇರ್ ಉದ್ಯಮಿ ಗೋಪಿಚಂದ್‌ ಪಿ. ಹಿಂದುಜಾ (85) ಅವರು ಲಂಡನ್‌ನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಗೋಪಿಚಂದ್‌ ಅವರು ನಾಲ್ವರು ಹಿಂದೂಜಾ ಸಹೋದರರಲ್ಲಿ ಎರಡನೆಯವರಾಗಿದ್ದು, ಅವರ ಹಿರಿಯ ಸಹೋದರ ಶ್ರೀಚಂದ್‌ ಹಿಂದುಜಾ ಅವರು 2023 ರಲ್ಲಿ ನಿಧನರಾಗಿದ್ದರು. ಪ್ರಕಾಶ್‌ ಹಿಂದುಜಾ ಮತ್ತು ಅಶೋಕ್‌ ಹಿಂದುಜಾ ಅವರು ಉಳಿದ ಸಹೋದರರಾಗಿದ್ದಾರೆ.

ಉದ್ಯಮ ಕ್ಷೇತ್ರದ ‘ಜಿಪಿ’ ಪಾತ್ರ

ಉದ್ಯಮ ವಲಯದಲ್ಲಿ ಪ್ರೀತಿಯಿಂದ “ಜಿಪಿ” ಎಂದೇ ಖ್ಯಾತರಾಗಿದ್ದ ಗೋಪಿಚಂದ್‌ ಹಿಂದುಜಾ ಅವರು 1950 ರಲ್ಲಿ ತಮ್ಮ ಕುಟುಂಬದ ವ್ಯವಹಾರವನ್ನು ಪ್ರವೇಶಿಸಿದರು. ಇವರು ಕಂಪನಿಯನ್ನು ಭಾರತ-ಮಧ್ಯಪ್ರಾಚ್ಯ ವ್ಯಾಪಾರದ ಮೂಲಕ ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಮಹತ್ತರ ಕೀರ್ತಿಗೆ ಪಾತ್ರರಾಗಿದ್ದರು.

ಅವರು ಬಾಂಬೆಯ ಜೈ ಹಿಂದ್‌ ಕಾಲೇಜಿನಲ್ಲಿ ಪದವಿ ಪಡೆದಿದ್ದು, ವೆಸ್ಟ್‌ ಮಿನಿಸ್ಟರ್‌ ಯೂನಿರ್ವಸಿಟಿ ಮತ್ತು ರಿಚ್ಮಂಡ್‌ ಕಾಲೇಜ್‌ಗಳಿಂದ ಗೌರವ ಡಾಕ್ಟರೇಟ್‌ ಪದವಿಗೆ ಭಾಜನರಾಗಿದ್ದರು.

ಹಿಂದೂಜಾ ಗ್ರೂಪ್‌ನ ವ್ಯಾಪ್ತಿ

ಹಿಂದೂಜಾ ಗ್ರೂಪ್‌ ಸದ್ಯ ಆಟೋಮೊಟಿವ್‌, ಬ್ಯಾಂಕಿಂಗ್‌, ಫೈನಾನ್ಸ್‌, ಐಟಿ, ಹೆಲ್ತ್‌ ಕೇರ್‌, ರಿಯಲ್‌ ಎಸ್ಟೇಟ್‌, ಇಂಧನ, ಮಾಧ್ಯಮ, ಎಂಟರ್‌ಟೈನ್‌ಮೆಂಟ್‌ ಸೇರಿ ಒಟ್ಟು 11 ಪ್ರಮುಖ ಸೆಕ್ಟರ್‌ಗಳಲ್ಲಿ ಉದ್ಯಮ ಹೊಂದಿದೆ. ಅಶೋಕ್‌ ಲೇಲ್ಯಾಂಡ್‌, ಇಂಡಸ್‌ ಇಂಡ್‌ ಬ್ಯಾಂಕ್‌ ಮತ್ತು ಎನ್‌ಎಕ್ಸ್‌ಟಿ ಡಿಜಿಟಲ್‌ ಲಿಮಿಟೆಡ್‌ ಹಿಂದೂಜಾ ಬ್ರ್ಯಾಂಡ್‌ನ ಪ್ರಮುಖ ಉದ್ಯಮಗಳಾಗಿವೆ.

ಸಂಡೇ ಟೈಮ್ಸ್‌ ಇತ್ತೀಚೆಗೆ ಬಿಡುಗಡೆ ಮಾಡಿದ ಶ್ರೀಮಂತರ ಪಟ್ಟಿಯ ಪ್ರಕಾರ, 32.3 ಬಿಲಿಯನ್ ಪೌಂಡ್ಸ್‌ನ ಒಟ್ಟು ಆಸ್ತಿಯ ಮೌಲ್ಯದೊಂದಿಗೆ ಗೋಪಿಚಂದ್‌ ಹಿಂದುಜಾ ಫ್ಯಾಮಿಲಿಯು ಯುಕೆಯ ಶ್ರೀಮಂತ ವ್ಯಕ್ತಿಗಳು ಎಂದು ಗುರುತಿಸಲ್ಪಟ್ಟಿತ್ತು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಭಾರತೀಯ ಗೇಮಿಂಗ್ ಪ್ರಿಯರಿಗೆ ಶುಭಸುದ್ದಿ: ಮಾರುಕಟ್ಟೆಗೆ ಲಗ್ಗೆ ಇಟ್ಟ ಡೆಲ್‌ನ ಶಕ್ತಿಶಾಲಿ ಏಲಿಯನ್‌ವೇರ್ ಲ್ಯಾಪ್‌ಟಾಪ್‌ಗಳು

ಡೆಲ್ ಭಾರತದಲ್ಲಿ ಹೊಸ ಏಲಿಯನ್‌ವೇರ್ ಗೇಮಿಂಗ್ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ನೂತನ ಬೆಲೆ, ಡಿಸ್ಪ್ಲೇ ಮತ್ತು ಪ್ರೊಸೆಸರ್ ವೈಶಿಷ್ಟ್ಯಗಳ ವಿವರ ಇಲ್ಲಿದೆ.

ದಿನ ವಿಶೇಷ – ರಾಷ್ಟ್ರೀಯ ಧ್ವಜ ದತ್ತು ದಿನ

ಪ್ರತಿ ವರ್ಷ ಜುಲೈ 22 ರಂದು ಭಾರತದ ರಾಷ್ಟ್ರೀಯ ಧ್ವಜ ದತ್ತು ದಿನವನ್ನು ಆಚರಿಸಲಾಗುತ್ತದೆ. ತಿರಂಗಾ ಧ್ವಜದ ಇತಿಹಾಸ, ವಿನ್ಯಾಸ ಮತ್ತು ಮಹತ್ವದ ಸಂಪೂರ್ಣ ವಿವರ ಇಲ್ಲಿದೆ.

ಸೂಪರ್‌ಫುಡ್ ಪೀಚ್: ಪ್ರತಿದಿನ ಈ ಒಂದು ಹಣ್ಣು ತಿಂದರೆ ಹೃದಯ, ಕಣ್ಣುಗಳಿಗೆ ಎಷ್ಟು ಲಾಭ ಗೊತ್ತಾ?

ನಿತ್ಯ ಪೀಚ್ ಹಣ್ಣು ಸೇವಿಸುವುದರಿಂದ ಲಭಿಸುವ ಆರೋಗ್ಯಕಾರಿ ಲಾಭಗಳು, ರೋಗನಿರೋಧಕ ಶಕ್ತಿ, ಹೃದಯದ ಭದ್ರತೆ ಹಾಗೂ ಕಣ್ಣಿನ ದೃಷ್ಟಿ ಹೆಚ್ಚಿಸುವ ವಿವರ ಇಲ್ಲಿದೆ.

ತುಳುವ ಮಹಾಸಭೆ ಉಡುಪಿ ಅಧ್ಯಕ್ಷರಾಗಿ ಉದಯ ಕುಮಾರ್ ಹೆಗ್ಡೆ ಆಯ್ಕೆ

ತುಳುವ ಮಹಾಸಭೆ ಇಂಟರ್ನ್ಯಾಷನಲ್ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಯರ್ಲಪಾಡಿ ಉದಯ ಕುಮಾರ್ ಹೆಗ್ಡೆ ಆಯ್ಕೆಯಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ