
ಹಿರಿಯಡಕ : ಹಿಂದು ಸಂಗಮ ಆಯೋಜನಾ ಸಮಿತಿ,ಹಿರಿಯಡಕ ತಾಲೂಕು,ಉಡುಪಿ ಜಿಲ್ಲೆ ಇದರ ಯೋಜನೆಯಂತೆ 2026 ಇಸವಿಯ ಜನವರಿ ತಿಂಗಳ 18ನೇ ದಿನಾಂಕದಿಂದ ಪ್ರಾರಂಭಿಸಿ ಫೆಬ್ರವರಿ ತಿಂಗಳ 1ನೇ ದಿನಾಂಕದ ವರೆಗೆ ತಾಲೂಕಿನ ಏಳು ಕಡೆಗಳಲ್ಲಿ ಹಿಂದು ಸಂಗಮ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸಾಮಾಜಿಕ ಸೇವಾ, ಸಹಕಾರ, ಸ್ವಾವಲಂಬನೆ ವೃದ್ಧಿಸುವ ಸಲುವಾಗಿ ಸಮಾಜದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಸೇವಾ, ಕ್ರೀಡಾ, ಕಲಾ, ಸಹಕಾರಿ ಇತ್ಯಾದಿ ಎಲ್ಲಾ ಪ್ರಕಾರದ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಸಂಘಟನೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮಗಳು ನಡೆಯಲಿವೆ. ಕೌಟುಂಬಿಕ ಮೌಲ್ಯಗಳ ಪುನರುತ್ಥಾನ, ಸಾಮಾಜಿಕ ಸಾಮರಸ್ಯದ ಜಾಗರಣ, ಪರಿಸರ ಸಂರಕ್ಷಣೆಯ ಸಂಕಲ್ಪ, ಸ್ವಾವಲಂಬಿ ಹಾಗೂ ಸ್ವಾಭಿಮಾನಿ ಜೀವನ ಪದ್ಧತಿ ಮತ್ತು ನಾಗರೀಕ ಕರ್ತವ್ಯಗಳ ಪಾಲನೆಯ ಅನುಷ್ಠಾನದಂತಹ ಆದರ್ಶಗಳ ಅಡಿಯಲ್ಲಿ ಸಮಾಜಕ್ಕಾಗಿ ಸಂಘಟಿತವಾಗಿ ಸ್ಥಳೀಯ ಸಮಾಜವೇ ನಡೆಸುವ ಕಾರ್ಯಕ್ರಮಗಳು ನಡೆಯಲಿವೆ. ಸರ್ವರೂ ಭಾಗವಹಿಸಿ ಈ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕೆಂದು ಹಿಂದು ಸಂಗಮ ಆಯೋಜನಾ ಸಮಿತಿಯು ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿಕೊಳ್ಳುತ್ತಿದೆ.
ಹಿಂದು ಸಂಗಮ ಕಾರ್ಯಕ್ರಮಗಳು ಈ ಕೆಳಗಿನಂತಿವೆ :
- ನೀರೆ ಬೈಲೂರು : ಜನವರಿ 25 ಆದಿತ್ಯವಾರ : ಸಾಯಂಕಾಲ 3.00ಕ್ಕೆ
- ಆತ್ರಾಡಿ : ಜನವರಿ 26 ಸೋಮವಾರ : ಸಾಯಂಕಾಲ 3.30ಕ್ಕೆ
- ಅಲೆವೂರು : ಫೆಬ್ರವರಿ01 ಆದಿತ್ಯವಾರ : ಸಾಯಂಕಾಲ 3.30ಕ್ಕೆ
- ಹಿರಿಯಡಕ : ಫೆಬ್ರವರಿ 01 ಆದಿತ್ಯವಾರ : ಸಾಯಂಕಾಲ 3.00ಕ್ಕೆ
- ಪೆರ್ಡೂರು: ಫೆಬ್ರವರಿ 01 ಆದಿತ್ಯವಾರ : ಸಾಯಂಕಾಲ 3.00ಕ್ಕೆ
- ಹರಿಖಂಡಿಗೆ : ಫೆಬ್ರವರಿ 01 ಆದಿತ್ಯವಾರ : ಸಾಯಂಕಾಲ 3.00ಕ್ಕೆ
- ಪಳ್ಳಿ : ಫೆಬ್ರವರಿ 01 ಆದಿತ್ಯವಾರ : ಸಾಯಂಕಾಲ 3.00ಕ್ಕೆ
ಅದಮಾರು ಮಠದ ಕಿರಿಯ ಶ್ರೀಗಳಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರ ಗೌರವ ಅಧ್ಯಕ್ಷತೆಯಲ್ಲಿ ಹಾಗೂ ಜಯ ಕೋಟ್ಯಾನ್ ಬೆಳ್ಳಂಪಳ್ಳಿ ಅವರ ಅಧ್ಯಕ್ಷತೆಯಲ್ಲಿ , ರಾಮಚಂದ್ರ ಕುಂಜಿತ್ತಾಯ, ಜನಾರ್ದನ ನಾಯಕ್, ಪಾಂಡುರಂಗ ಪಾಣಾರ, ದೀಕ್ಷಿತಾ ರಾವ್, ದಿವಾಕರ ಭಂಡಾರಿ ಇವರುಗಳ ಉಪಾಧ್ಯಕ್ಷತೆಯಲ್ಲಿ , ಪ್ರಶಾಂತ ಅಂಜಾರುರವರ ಸಂಯೋಜಕತ್ವದಲ್ಲಿ , ರಮೇಶ್ ಕಲೊಟ್ಟೆ , ಸುಧೀರ್ ಹಿರೇಬೆಟ್ಟು , ಚೇತನಾ ನಾಯಕ್ ಸಹ ಸಂಯೋಜಕತ್ವದಲ್ಲಿ ಸಮಿತಿಯು ಕಾರ್ಯನಿರ್ವಹಿಸುತ್ತಿದೆ.



































