spot_img

ಜನೌಷಧ ಕೇಂದ್ರಗಳ ಸ್ಥಗಿತಕ್ಕೆ ಹೈಕೋರ್ಟ್ ತಡೆ: ರಾಜ್ಯ ಸರ್ಕಾರದ ಆದೇಶಕ್ಕೆ ಬ್ರೇಕ್!

Date:

spot_img

ಕಲಬುರಗಿ : ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಧಾನಮಂತ್ರಿ ಜನೌಷಧ ಕೇಂದ್ರಗಳನ್ನು ಸ್ಥಗಿತಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠ ಮಧ್ಯಂತರ ತಡೆ ನೀಡಿದೆ. ಇದರಿಂದಾಗಿ ಕಡಿಮೆ ದರದಲ್ಲಿ ಔಷಧಿಗಳನ್ನು ಪಡೆಯುತ್ತಿದ್ದ ಬಡ ರೋಗಿಗಳಿಗೆ ತಾತ್ಕಾಲಿಕವಾಗಿ ನಿರಾಳತೆ ಸಿಕ್ಕಂತಾಗಿದೆ.

ರಾಜ್ಯ ಸರ್ಕಾರದ ಈ ಆದೇಶದ ವಿರುದ್ಧ 16 ಜನ ಅರ್ಜಿದಾರರು ಕಲಬುರಗಿ ಹೈಕೋರ್ಟ್‌ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಜನೌಷಧ ಕೇಂದ್ರಗಳ ಸ್ಥಾಪನೆಗೆ ಸಾಕಷ್ಟು ಮೂಲಸೌಕರ್ಯಗಳನ್ನು ಕಲ್ಪಿಸಲು ದೊಡ್ಡ ಪ್ರಮಾಣದ ಖರ್ಚು ತಗುಲಿದೆ. ಅಲ್ಲದೆ, ಈ ಕೇಂದ್ರಗಳು ಬಡ ರೋಗಿಗಳಿಗೆ ಶೇಕಡಾ 50 ರಿಂದ 96 ರಿಯಾಯಿತಿ ದರದಲ್ಲಿ ಔಷಧಿಗಳನ್ನು ಒದಗಿಸುತ್ತಿದ್ದು, ಸರ್ಕಾರದ ಆದೇಶದಿಂದಾಗಿ ಈ ಸೌಲಭ್ಯ ಕೈತಪ್ಪುತ್ತದೆ ಎಂಬುದು ಅರ್ಜಿದಾರರ ವಾದವಾಗಿತ್ತು. “ಸರ್ಕಾರದ ಆದೇಶದಿಂದ ನಮ್ಮ ಮೂಲಭೂತ ಹಕ್ಕಿಗೆ ಧಕ್ಕೆ ಆಗಿದೆ” ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದರು.

ಅರ್ಜಿದಾರರ ಮನವಿಯನ್ನು ಪರಿಗಣಿಸಿದ ಹೈಕೋರ್ಟ್, ಮುಂದಿನ ವಿಚಾರಣೆಯವರೆಗೆ ಅರ್ಜಿದಾರರ ಜನೌಷಧ ಕೇಂದ್ರಗಳನ್ನು ಸ್ಥಗಿತಗೊಳಿಸದಂತೆ ರಾಜ್ಯ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿದೆ. ಈ ನಿರ್ಧಾರದಿಂದಾಗಿ ಜನೌಷಧ ಕೇಂದ್ರಗಳು ಸದ್ಯಕ್ಕೆ ಎಂದಿನಂತೆ ಕಾರ್ಯನಿರ್ವಹಿಸಲಿವೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಗುರು ದತ್ತ್ (ವಾಸಂತ್ ಕುಮಾರ್ ಶಿವಶಂಕರ ಪಡುಕೋಣೆ) ಜನ್ಮದಿನ

ಗುರು ದತ್ತ್ ಭಾರತೀಯ ಸಿನಿಮಾದ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ನಿರ್ದೇಶಕರು, ನಟರು ಮತ್ತು ನಿರ್ಮಾಪಕರಲ್ಲಿ ಒಬ್ಬರು

ಟೆಸ್ಲಾ ಭಾರತ ಪ್ರವೇಶ: ಜುಲೈನಲ್ಲಿ ಮುಂಬೈನಲ್ಲಿ ಮೊದಲ ಶೋರೂಂ ಉದ್ಘಾಟನೆ!

ಅಮೆರಿಕ ಮೂಲದ ಪ್ರಖ್ಯಾತ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ ಟೆಸ್ಲಾ, ಜುಲೈನಲ್ಲಿ ಭಾರತದಲ್ಲಿ ತನ್ನ ಮೊದಲ ಶೋರೂಂ ತೆರೆಯಲು ಸಜ್ಜಾಗಿದೆ.

ನದಿಗೆ ಬಿದ್ದ ಹೊಸ ಐಫೋನ್ 16 ಪ್ರೊ ಮ್ಯಾಕ್ಸ್ – 4 ಗಂಟೆಗಳ ನಂತರವೂ ಕಾರ್ಯನಿರ್ವಹಿಸಿದ ಸ್ಮಾರ್ಟ್‌ಫೋನ್!

ಕೇವಲ ನಾಲ್ಕು ದಿನಗಳ ಹಿಂದೆ ಖರೀದಿಸಿದ್ದ ಐಫೋನ್ ಒಂದು ನದಿಯೊಳಗೆ ಬಿದ್ದರೂ, ಕೆಲವು ಗಂಟೆಗಳ ನಂತರವೂ ಅದು ಕಾರ್ಯನಿರ್ವಹಿಸುತ್ತಿರುವುದು ಎಲ್ಲರನ್ನೂ ಅಚ್ಚರಿಗೊಳಿಸಿದೆ.

ಮೈಸೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ಭೇದಿಸಿದ ಪೊಲೀಸರು: 6 ಪುರುಷರು, 2 ಯುವತಿಯರು ರೆಡ್ ಹ್ಯಾಂಡ್ ಆಗಿ ಸೆರೆ!

ಮೈಸೂರು ತಾಲ್ಲೂಕಿನ ದಾಸನಕೊಪ್ಪಲು ಗ್ರಾಮದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ 'ಹೈಟೆಕ್' ವೇಶ್ಯಾವಾಟಿಕೆ ದಂಧೆಯ ಮೇಲೆ ಪೊಲೀಸರು ದಾಳಿ ನಡೆಸಿ, 6 ಪುರುಷರು ಮತ್ತು ಇಬ್ಬರು ಯುವತಿಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.