
ಹೆಬ್ರಿ : ಹೆಬ್ರಿಯ ಸುಪ್ರಸಿದ್ಧ ಸಾರ್ವಜನಿಕ ಗಣೇಶೋತ್ಸವದ ಸುವರ್ಣ ಸಂಭ್ರಮಕ್ಕೆ ವಿಶೇಷ ಕಳೆ ತುಂಬುವ ನಿಟ್ಟಿನಲ್ಲಿ ಪ್ರಚಾರ ಲಾಂಛನವನ್ನು ರಾಮ ಮಂಟಪದಲ್ಲಿ ಅನಾವರಣಗೊಳಿಸಲಾಯಿತು. ಈ ವಿಶಿಷ್ಟ ಲೋಗೋವನ್ನು ಹೆಬ್ರಿ ಸುಧಿ ಆರ್ಟ್ಸ್‌ನ ಸುದೀಪ್ ಭಟ್ ಅವರು ತಮ್ಮ ಕಲ್ಪನೆಯಿಂದ ರೂಪಿಸಿದ್ದಾರೆ.
ಹೆಬ್ರಿ ದೇವಳದ ಅನುವಂಶೀಯ ಮೊಕ್ತೇಸರರಾದ ತಾರಾನಾಥ ಬಲ್ಲಾಳ್ ಅವರು ಈ ಲಾಂಛನವನ್ನು ಅನಾವರಣಗೊಳಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು. ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಜನಾರ್ಧನ ಎಚ್, ಉಪಾಧ್ಯಕ್ಷರಾದ ಎಚ್.ಕೆ. ಸುಧಾಕರ್, ದಿವಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಆಚಾರ್ಯ ಮಠದ ಬೆಟ್ಟು, ಸಮಿತಿಯ ಪೋಷಕರಾದ ಎಂ. ಯೋಗೀಶ್ ಭಟ್, ಬಾಲಕೃಷ್ಣ ನಾಯಕ್, ಸುಧೀರ್ ನಾಯಕ್, ಪ್ರವೀಣ್ ಬಲ್ಲಾಳ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

ಮಹಿಳಾ ಸಮಿತಿಯ ಬಾನು ಪಿ. ಬಲ್ಲಾಳ್, ರಾಮಕೃಷ್ಣ ಆಚಾರ್ಯ, ಡಾ. ವಿದ್ಯಾಧರ್ ಹೆಗ್ಡೆ, ವಸಂತ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ಶಂಕರ್ ಸೇರಿಗಾರ್, ಉಮೇಶ್ ನಾಯಕ್, ವಿಜೇಂದ್ರ ಶೆಟ್ಟಿ, ಸೇವಾ ಪ್ರತಿನಿಧಿ ನಾಗರತ್ನ, ಶಾಲಿನಿ ಎಸ್. ಭಂಡಾರಿ, ಸಂತೋಷ್ ನಾಯಕ್, ನಾಗರಾಜ, ತಿಪ್ಪೇಸ್ವಾಮಿ ಅವರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಟಿ.ಜಿ. ಆಚಾರ್ಯ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರೆ, ಪ್ರಸಾದ್ ಶೆಟ್ಟಿ ವಂದನಾರ್ಪಣೆ ಮಾಡಿದರು. ಈ ಲಾಂಛನದ ಬಿಡುಗಡೆಯು ಮುಂಬರುವ ಗಣೇಶೋತ್ಸವದ ಸುವರ್ಣ ಸಂಭ್ರಮಕ್ಕೆ ಭವ್ಯ ಚಾಲನೆ ನೀಡಿದೆ.