
ಹೆಬ್ರಿ : ಶ್ರೀ ಶ್ರೀ ಸಾಯಿಶಿವ ಕಲಾಲಯ ಎಜುಕೇಶನ್ ಆರ್ಗನೈಜೇಷನ್ ಮಯೂರಿ ನಾಟ್ಯಕಲಾ ಕೇಂದ್ರ ಹೆಬ್ರಿ ಇದರ ದ್ವಿತೀಯ ವಾರ್ಷಿಕೋತ್ಸವ ನೃತ್ಯ ಸಮರ್ಪಣಂ 2025 ಹೆಬ್ರಿ ಬಂಟರ ಭವನದಲ್ಲಿ ಜರುಗಿತು.
ನೃತ್ಯ ಸಮರ್ಪಣಂ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಬಂಟರ ಸಂಘದ ಅಧ್ಯಕ್ಷ ಉದ್ಯಮಿ ಹರ್ಷ ಶೆಟ್ಟಿ ಉದ್ಘಾಟಿಸಿ ಭಾರತೀಯ ಕಲಾ ಪ್ರಕಾರಗಳನ್ನು ಇಂದಿನ ಮಕ್ಕಳಿಗೆ ತಿಳಿಸುವ ಮಹತ್ ಕಾರ್ಯವನ್ನು ವ್ಯವಹಾರ ದೃಷ್ಟಿ ರಹಿತವಾಗಿ ಮಾಡುತ್ತಿರುವ ತಾಣದ ಮನೆ ಉದಯ್ ಶೆಟ್ಟಿ ಮತ್ತು ವಿದುಷಿ ಮಮತಾ ಮಯೂರಿ ಅವರ ಕಾರ್ಯ ಶ್ಲಾಘನೀಯ. ಮಕ್ಕಳು ಮತ್ತು ಪೋಷಕರ ಸಹಕಾರದಿಂದ ಇಂದು ಯಶಸ್ವಿ ನೃತ್ಯ ಶಾಲೆಯಾಗಿ ಮಯೂರಿ ನಾಟ್ಯಕೇಂದ್ರ ಮೂಡಿ ಬಂದಿದೆ ಎಂದು ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಸೀತಾ ನದಿ ಸೌಖ್ಯಯೋಗ ಟ್ರಸ್ಟ್ ಇದರ ಅಧ್ಯಕ್ಷ ಸೀತಾನದಿ ವಿಠಲ ಶೆಟ್ಟಿಯವರು ಮಾತನಾಡಿ ಬದ್ಧತೆ ತಾಳ್ಮೆ ಇದ್ದಲ್ಲಿ ಯೋಜನೆ ಫಲಪ್ರದವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಇದಕ್ಕೆ ಮಯೂರಿ ನಾಟ್ಯಕೇಂದ್ರ ನಿದರ್ಶನವೆಂದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಹೆಬ್ರಿ ಗ್ರಾಮ ಪಂಚಾಯತ್ ಪಿಡಿಓ ಸದಾಶಿವ ಸೇರ್ವೆಗಾರ್, ಹೆಬ್ರಿ ಬಂಟರ ಭವನದ ವ್ಯವಸ್ಥಾಪಕ ಸುಕೇಶ್ ಶೆಟ್ಟಿ ,ನೃತ್ಯ ಕೇಂದ್ರದ ಅಧ್ಯಕ್ಷ ತಾಣದ ಮನೆ ಉದಯ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಹೆಬ್ರಿಯ ಧಾರ್ಮಿಕ ದೀವಟಿಕೆ ಪರಿಚಾರಕ, ಹಿರಿಯ ಪ್ರಗತಿಪರ ಕೃಷಿಕ ಸಾಧು ಮಡಿವಾಳ ಹೆಬ್ರಿ ಅವರನ್ನು ಗೌರವಿಸಲಾಯಿತು.

ಅಧ್ಯಾಪಕ ಪ್ರಶಾಂತ್ ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು. ಶುಭಲಕ್ಷ್ಮಿ ಗಣ್ಯರ ಸಂದೇಶ ವಾಚಿಸಿದರು. ಕಾರ್ಯಕ್ರಮದಲ್ಲಿ ಮಯೂರಿ ನಾಟ್ಯ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ಜನಮನ ರಂಜಿಸಿತು. ಪ್ರಸಾದ್ ಶೆಟ್ಟಿ ಮತ್ತು ಸತೀಶ್ ಬೇಳಂಜೆಯವರು ಕಾರ್ಯಕ್ರಮ ನಿರ್ವಹಿಸಿದರು. ಶ್ರುತಿ ಅರುಣ್ ಕುಮಾರ್ ರವರು ಧನ್ಯವಾದ ಅರ್ಪಿಸಿದರು.



































