
ಹೆಬ್ರಿ: ಹೆಬ್ರಿಯಲ್ಲಿ ನಡೆಯುತ್ತಿರುವ ಗಣೇಶೋತ್ಸವದ ಸುವರ್ಣ ಸಂಭ್ರಮದ ಅಂಗವಾಗಿ ಭಕ್ತರು ಸಂಭ್ರಮದಿಂದ ಹಸಿರು ಹೊರೆ ಕಾಣಿಕೆ ಮೆರವಣಿಗೆಯನ್ನು ನಡೆಸಿದರು. ಹೆಬ್ರಿ ಬಂಟರ ಭವನದಿಂದ ಆರಂಭವಾದ ಈ ಮೆರವಣಿಗೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ರಿ ತಾಲೂಕು ಯೋಜನಾಧಿಕಾರಿ ಶ್ರೀಮತಿ ಲೀಲಾವತಿಯವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜನಾರ್ಧನ ಎಚ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಆಚಾರ್ಯ, ಧಾರ್ಮಿಕ ಮುಖಂಡ ಎಚ್. ಭಾಸ್ಕರ್ ಜೋಯಿಸ್, ಉಪಾಧ್ಯಕ್ಷರಾದ ಎಚ್.ಕೆ. ಸುಧಾಕರ್, ಪ್ರಕಾಶ್ ಮಲ್ಯ, ದಿವಾಕರ್ ಶೆಟ್ಟಿ ಸೀತಾನದಿ, ಕೋಶಾಧಿಕಾರಿಗಳಾದ ದೇವಾನಂದ ನಾಯಕ್, ಜೊತೆ ಕಾರ್ಯದರ್ಶಿಗಳಾದ ಶಂಕರ್ ಸೇರಿಗಾರ್, ಶೇಖರ್ ನಾಯ್ಕ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ವಲಯ ಮೇಲ್ವಿಚಾರಕರಾದ ಉದಯ್, ಸೇವಾ ಪ್ರತಿನಿಧಿಗಳು, ಎಸ್.ಆರ್. ಸಂಸ್ಥೆಯ ಅಧ್ಯಕ್ಷರಾದ ನಾಗರಾಜ ಶೆಟ್ಟಿ, ಸಪ್ನ ನಾಗರಾಜ ಶೆಟ್ಟಿ, ಗಣೇಶೋತ್ಸವ ಉಪ ಸಮಿತಿಗಳ ಸಂಚಾಲಕರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.
ವೇದಿಕೆ ಸಮಿತಿ ಸಂಚಾಲಕರಾದ ಪ್ರಸಾದ್ ಶೆಟ್ಟಿ ಸ್ವಾಗತಿಸಿದರೆ, ಟಿ.ಜಿ. ಆಚಾರ್ಯ ವಂದನಾರ್ಪಣೆ ಮಾಡಿದರು. ಈ ಹಸಿರು ಹೊರೆಕಾಣಿಕೆ ಮೆರವಣಿಗೆಯು ಗಣೇಶೋತ್ಸವದ ವೈಭವಕ್ಕೆ ಮತ್ತಷ್ಟು ಮೆರುಗು ನೀಡಿತು.