spot_img

ಆಗುಂಬೆ ಘಾಟಿಯಲ್ಲಿ ಭಾರಿ ಮಳೆಯ ಹಿನ್ನಲೆ ಭೂ ಕುಸಿತದ ಸಾಧ್ಯತೆ : ಭಾರಿ ವಾಹನಗಳ ಸಂಚಾರ ನಿಷೇಧ

Date:

spot_img

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿ ಪ್ರದೇಶದಲ್ಲಿ ನಿರಂತರ ಭಾರೀ ಮಳೆಯ ಹಿನ್ನೆಲೆಯಲ್ಲಿ ಭೂ ಕುಸಿತ ಸಂಭವಿಸುವ ಅಪಾಯದ ಮುನ್ನೆಚ್ಚರಿಕಾ ಕ್ರಮವಾಗಿ, ಜಿಲ್ಲಾಡಳಿತವು ಘಾಟಿ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ನಿಷೇಧ ಹೇರಿದೆ.

ಮಲ್ಪೆ-ಆಗುಂಬೆ ಸಂಪರ್ಕಿಸುವ 169ಎ ಹೆದ್ದಾರಿಯಲ್ಲಿ ಭಾರೀ ಮಳೆಯಿಂದಾಗಿ ಭೂಮಿಯಲ್ಲಿ ಭೂ ಕುಸಿತ ಸಂಭವಿಸುವ ಅಪಾಯದ ಮುನ್ನೆಚ್ಚರಿಕಾ ಕ್ರಮವಾಗಿ, ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರು ಆದೇಶ ಹೊರಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಉಡುಪಿಯಿಂದ ತೀರ್ಥಹಳ್ಳಿಗೆ ಪ್ರಯಾಣಿಸುವ ಭಾರೀ ವಾಹನಗಳು ಈಗ ಬದಲಿ ಮಾರ್ಗವಾದ ಉಡುಪಿ – ಕುಂದಾಪುರ – ಸಿದ್ದಾಪುರ – ಮಾಸ್ತಿಕಟ್ಟೆ – ತೀರ್ಥಹಳ್ಳಿ ಮಾರ್ಗವಾಗಿ ಸಾಗಬೇಕಾಗಿದೆ. ಲಘು ವಾಹನಗಳಿಗೆ ಮಾತ್ರ ಆಗುಂಬೆ ಘಾಟಿ ರಸ್ತೆ ತೆರೆಯಲ್ಪಟ್ಟಿದ್ದು, ವಾಹನಚಾಲಕರು ಎಚ್ಚರಿಕೆಯಿಂದ ಸಾಗಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ. ಪರಿಸ್ಥಿತಿಗೆ ಅನುಗುಣವಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಶ್ರೀ ಕ್ಷೇ.ಧ.ಗ್ರಾ. ಯೋಜನೆ ಉಡುಪಿ ತಾಲೂಕು : 79ನೇ ಸ್ವಾತಂತ್ರ್ಯ ದಿನಾಚರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್(ರಿ.) ಉಡುಪಿ ತಾಲೂಕು ಇದರ ವತಿಯಿಂದ ಅಂಬಲಪಾಡಿ ಪ್ರಗತಿ ಸೌಧ ಆವರಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಪಣಂಬೂರಿನ ವೀಳ್ಯದೆಲೆ: ಆರೋಗ್ಯ ಭಾಗ್ಯದ ಕಣಜ

ವೀಳ್ಯದೆಲೆ ಎಂದರೆ ಕೇವಲ ತಾಂಬೂಲವಲ್ಲ, ಇದು ಔಷಧೀಯ ಗುಣಗಳ ಕಣಜ

ಗೂಗಲ್‌ನಿಂದ ಕೃತಕ ಬುದ್ಧಿಮತ್ತೆ ಆಧಾರಿತ ‘ಜೀನಿ 3’ ಬಿಡುಗಡೆ

ಗೂಗಲ್ ಡೀಪ್‌ಮೈಂಡ್ ಸಂಸ್ಥೆಯು ತನ್ನ ಇತ್ತೀಚಿನ ಸಂವಾದಾತ್ಮಕ 3D AI ಮಾದರಿ ಜೀನಿ 3 ಅನ್ನು ಅನಾವರಣಗೊಳಿಸಿದೆ.

ಧರ್ಮಸ್ಥಳ ಪ್ರಕರಣ: ಸುಳ್ಳು ದೂರು ನೀಡಿದರೆ ಕಠಿಣ ಕ್ರಮ – ಗೃಹ ಸಚಿವ ಜಿ. ಪರಮೇಶ್ವರ

ಸಾಮೂಹಿಕ ಸಮಾಧಿ ಆರೋಪ ಸುಳ್ಳಾದರೆ ದೂರುದಾರರಿಗೆ ಕಠಿಣ ಶಿಕ್ಷೆ: ಪರಮೇಶ್ವರ