
ಇರಾನ್‌ನ ಹಾರ್ಮುಜ್ ದ್ವೀಪದಲ್ಲಿ ಧಾರಾಕಾರ ಮಳೆಯ ಪರಿಣಾಮ ಸಮುದ್ರವು ರಕ್ತದ ಹೊಳೆಗಳಂತೆ ಕಾಣುತ್ತಿರುವ ಅಪರೂಪದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ. ಮಳೆಯ ನೀರು ಅಲ್ಲಿನ ಕಡುಗೆಂಪು ಮಣ್ಣಿನೊಂದಿಗೆ ಮಿಶ್ರಿತಗೊಂಡು ಸಮುದ್ರಕ್ಕೆ ಪ್ರವಹಿಸಿರುವುದರಿಂದ ಈ ದೃಶ್ಯ ಮೂಡಿಬಂದಿದೆ.
ಹಾರ್ಮುಜ್ ದ್ವೀಪ ತನ್ನ ಕೆಂಪು ಮಣ್ಣಿನಿಂದ ಪ್ರಸಿದ್ಧವಾಗಿದ್ದು, ಇದರಲ್ಲಿರುವ ಹೆಚ್ಚಿನ ಪ್ರಮಾಣದ ಕಬ್ಬಿಣದ ಆಕ್ಸೆಡ್ ಇದಕ್ಕೆ ವಿಶಿಷ್ಟ ಕೆಂಪು ಬಣ್ಣವನ್ನು ನೀಡುತ್ತದೆ. ಇತ್ತೀಚಿನ ಮಳೆಯಿಂದಾಗಿ ಈ ಬೀಚ್ ರಕ್ತದ ಮಡುವಿನಂತೆ ಕಾಣಿಸುತ್ತಿದ್ದು, ಅಲೆಗಳ ಉಬ್ಬರವಿಳಿತಗಳಲ್ಲಿ ಕೆಂಪು ನೀರು ಸಮುದ್ರವನ್ನು ಆವೃತ್ತಿಮಾಡುತ್ತಿದೆ.
ಈ ಅಪರೂಪದ ದೃಶ್ಯವನ್ನು ಸ್ಥಳೀಯರು ತಮ್ಮ ಫೋನ್ ಕ್ಯಾಮರಾಗಳಲ್ಲಿ ಸೆರೆಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇದು ಭಾರೀ ವೈರಲ್ ಆಗಿದೆ. ಇದು ವಿಲಕ್ಷಣ ಘಟನೆಯಲ್ಲ; ‘ಗೆಲಾಕ್’ ಎಂಬ ಈ ಮಣ್ಣು ಪ್ಲಾಸ್ಮಾ-ಪ್ರಚೋದಕ ವರ್ಣವನ್ನು ಹೊಂದಿರುವುದರಿಂದ ಮಳೆಗಾಲದಲ್ಲಿ ಇಂತಹ ಅಪರೂಪದ ನೋಟ ಕಂಡುಬರುತ್ತದೆ ಎಂದು New York Times ವರದಿ ಮಾಡಿದೆ.