
✅ ಹೃದಯದ ಆರೋಗ್ಯ: ಪೊಟ್ಯಾಶಿಯಂ, ಫೈಬರ್ ಮತ್ತು ವಿಟಮಿನ್ ಗಳು ಹೃದಯ ಸಂಬಂಧಿ ಸಮಸ್ಯೆಗಳನ್ನು ತಡೆಯುತ್ತವೆ. ಕೊಲೆಸ್ಟ್ರಾಲ್ ನಿಯಂತ್ರಣ ಹಾಗೂ ರಕ್ತ ಪರಿಚಲನೆ ಸುಧಾರಣೆ ಮೂಲಕ ಹೃದಯಾಘಾತ ಅಪಾಯ ಕಡಿಮೆಯಾಗುತ್ತದೆ.
✅ ತ್ವಚೆಯ ಕಾಂತಿ ಹೆಚ್ಚಿಸುತ್ತದೆ: ಪಪ್ಪಾಯದಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಹಾಗೂ ವಿಟಮಿನ್ ಗಳು ಚರ್ಮದ ಆರೋಗ್ಯ ಹೆಚ್ಚಿಸುತ್ತವೆ. ಸುಕ್ಕುಗಳ ತಡೆ, ನಯಗೊಳಿಸುವಿಕೆ ಹಾಗೂ ಯೌವನದ ಹೊಳಪು ನೀಡಲು ಸಹಾಯ ಮಾಡುತ್ತದೆ.
✅ ಜೀರ್ಣಕ್ರಿಯೆ ಸುಧಾರಣೆ: ಪಪೈನ್ ಎಂಬ ಕಿಣ್ವ ಜೀರ್ಣಕ್ರಿಯೆಯನ್ನು ಸುಗಮಗೊಳಿಸಿ, ಮಲಬದ್ಧತೆ ತಡೆಯಲು ಸಹಕಾರಿಯಾಗಿದೆ.
✅ ಡಯಾಬಿಟಿಸ್ ನಿಯಂತ್ರಣ: ಕಡಿಮೆ ಸಕ್ಕರೆ ಹಾಗೂ ಹೆಚ್ಚಿನ ಫೈಬರ್ ಅಂಶದಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿರಿಸಬಹುದು.
✅ ಕಣ್ಣಿನ ಆರೋಗ್ಯ: ವಿಟಮಿನ್ ಸಿ, ಇ ಹಾಗೂ ಬೀಟಾ ಕ್ಯಾರೋಟಿನ್ ದೃಷ್ಟಿ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿ.
✅ ತೂಕ ನಿಯಂತ್ರಣ: ಹೊಟ್ಟೆ ತುಂಬಿದಂತೆ ಭಾಸವಾಗಿಸಿ, ಹೆಚ್ಚಿನ ಊಟದ ನಿಯಂತ್ರಣ ಮಾಡಬಹುದು.
✅ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ: ವಿಟಮಿನ್ ಸಿ ಸಮೃದ್ಧವಾಗಿರುವ ಕಾರಣ ದೇಹದ ಪ್ರತಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
✅ ಕ್ಯಾನ್ಸರ್ ತಡೆಗಟ್ಟುವಿಕೆ: ಲೈಕೋಪೀನ್ ಅಂಶ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ.
🚨 ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ತಿನ್ನುವುದರಿಂದಾಗುವ ಅಡ್ಡ ಪರಿಣಾಮಗಳು
❌ ಗರ್ಭಿಣಿಯರು ಪಪ್ಪಾಯ ಸೇವನೆ ತಪ್ಪಿಸಬೇಕು, ಅದು ಗರ್ಭಪಾತಕ್ಕೆ ಕಾರಣವಾಗಬಹುದು.
❌ ಹೆಚ್ಚು ಸೇವಿಸಿದರೆ ಅನ್ನನಾಳಕ್ಕೆ ಹಾನಿಯಾಗಬಹುದು.
❌ ಕಡಿಮೆ ಬಿಪಿ ಇರುವವರು ಜಾಗರೂಕರಾಗಿರಬೇಕು.
❌ ಅಲರ್ಜಿ ಸಮಸ್ಯೆ ಇರುವವರಿಗೆ ಪಪ್ಪಾಯ ಅನಾನುಕೂಲವಾಗಬಹುದು.
