
ಮುತ್ತೂರು: ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ದೈವಸ್ಥಾನ ಮುತ್ತೂರು, ಅಂಜಾರು ಗ್ರಾಮ, ಹಿರಿಯಡಕದಲ್ಲಿ ತಾರೀಕು 19-03-2025 ಬುಧವಾರ ಮೊದಲ್ಗೊಂಡು 20-03-2025ನೇ ಗುರುವಾರದವರೆಗೆ ದೈವರಾಜ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ಹರಕೆಯ ನೇಮೋತ್ಸವ ನಡೆಯಲಿದೆ.
ಈ ಕಾರ್ಯಕ್ರಮವು ಮುತ್ತೂರು ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಅಂಗಳದ ಮಹಾಚಪ್ಪರದಲ್ಲಿ ಜರುಗಲಿದ್ದು, ಭಕ್ತಾಭಿಮಾನಿಗಳು ಪಾಲ್ಗೊಂಡು ಶ್ರೀ ದೈವಗಳ ಸಿರಿಮುಡಿಗಂಧ ಪ್ರಸಾದವನ್ನು ಸ್ವೀಕರಿಸಿ ಪರಮಾನುಗ್ರಹಕ್ಕೆ ಪಾತ್ರರಾಗುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.