
ಹೆಬ್ರಿ : ಕಲಿತ ಶಾಲೆಗೆ ಕಿಂಚಿತ್ತಾದರೂ ಸಹಾಯ ಮಾಡುವುದು ನಮ್ಮೆಲ್ಲರ ಕರ್ತವ್ಯ. ಕನ್ನಡ ಮಾಧ್ಯಮ ಶಾಲೆಯಲ್ಲಿ ಸಿಗುವ ಮಾನವೀಯ ಮೌಲ್ಯ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ.ಅಂಕ ಗಳಿಸುವ ಭರದಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಹಿಂದೆ ಬೀಳಬೇಡಿ ಎಂದು ಸಂತೋಷ ಪೂಜಾರಿ ನೆಕ್ಕಾರ್ ಬೆಟ್ಟು ಹೇಳಿದರು. ಅವರು ಮುದ್ರಾಡಿ ಎಂ. ಎನ್. ಡಿ. ಎಸ್. ಎಂ. ಅನುದಾನಿತ ಪ್ರೌಢಶಾಲೆಗೆ 1995-96 ನೆ ಸಾಲಿನ ವಿದ್ಯಾರ್ಥಿಗಳು ಕ್ರೀಡಾ ಪರಿಕರಗಳು ಸೇರಿ ಮೂಲಭೂತ ಸೌಲಭ್ಯಗಳಿಗೆ ಕೊಡಮಾಡಿದ 50,000 ರೂಗಳ ಚೆಕ್ ಮತ್ತು ಕ್ರೀಡಾ ಪರಿಕರಗಳ ಹಸ್ತಾಂತರ ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿದ್ಯಾಸಾಗರ ಎಜ್ಯುಕೇಶನ್ ಟ್ರಸ್ಟ್ (ರಿ.) ನ ಕಾರ್ಯದರ್ಶಿ ಅಶೋಕ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಶಾಲೆಗೆ ನೀಡಿದ ಧನ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿದರು.

ವೇದಿಕೆಯಲ್ಲಿ 1995-96 ನ ಸಾಲಿನ ವಿದ್ಯಾರ್ಥಿಗಳಾದ ಸಂತೋಷ ಪೂಜಾರಿ ನೆಕ್ಕಾರ್ ಬೆಟ್ಟು ಬಲ್ಲಾಡಿ, ಶ್ರೀನಿವಾಸ ಉಪಾಧ್ಯಾಯ ಮುದ್ರಾಡಿ ಉಡುಪಿ, ಸೌಮ್ಯ ಪ್ರಭು ಮುದ್ರಾಡಿ ಬೆಂಗಳೂರು, ಅಶೋಕ ಪೂಜಾರಿ ಸಾಂತ್ರಪಲ್ಕೆ ಮುದ್ರಾಡಿ, ಶರತ್ ಶೆಟ್ಟಿ ಮುದ್ರಾಡಿ, ರಾಘವೇಂದ್ರ ಆಚಾರ್ಯ ಮುದ್ರಾಡಿ, ನವೀನ್ ಆಚಾರ್ಯ ಕೆಲಕಿಲ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಿಕ್ಷಕಿ ಶ್ಯಾಮಲಾ ನಿರೂಪಿಸಿ, ರಘುಪತಿ ಹೆಬ್ಬಾರ್ ವಂದಿಸಿದರು. ಶಿಕ್ಷಕರಾದ ಮಹೇಶ್ ನಾಯ್ಕ ಕೆ , ಪಿ. ವಿ.ಆನಂದ, ಚಂದ್ರಕಾಂತಿ ಹೆಗ್ಡೆ, ಮಹೇಶ ಎಂ. ಸಹಕರಿಸಿದರು. 1995-96 ನೆ ಸಾಲಿನ ಹಿರಿಯ ವಿದ್ಯಾರ್ಥಿಗಳೆಲ್ಲರ ಸಹಕಾರ ದಿಂದ ಈ ಕಾರ್ಯಕ್ರಮ ಸಂಪನ್ನಗೊಂಡಿತು.