
ಕಾರ್ಕಳ : ಶ್ರೀ ರೋಬರ್ಟ್ ಟೆಲಿಸ್ ಪ್ಯಾಮಿಲಿ ವತಿಯಿಂದ ವಿಜೇತ ಶಾಲೆಗೆ ಅಗತ್ಯವಿರುವ 5 ಪ್ಯಾನ್ 15 ಬಕೆಟ್ 15 ಮಗ್ 30 ಚಾಪೆ 15 ಡೆಸ್ಟ್ ಬಿನ್ ಹಸ್ತಾಂತರಿಸಿದರು.
ಫಿಲೋಮಿನ ಪಿಂಟೋ ಇವರ ವತಿಯಿಂದ 3 ಚಾರ್ಜರ್ ಲೈಟ್ ಗಳನ್ನು ಹಾಗೂ ಶ್ರೀಮತಿ ವಂದನಾ ಪ್ರಭು ಹಾಗೂ ಡಾ.ಶ್ರೇಯಾ ರಾಮ್ ದಾಸ್ ಪ್ರಭು ಇವರ ವತಿಯಿಂದ 30 ಕೆ ಜಿ ಅಕ್ಕಿ ಮತ್ತು ನೀರುಳ್ಳಿಯನ್ನು ಹಸ್ತಾಂತರಿಸಿದರು.
ಶ್ರೀ ಶ್ರೀಕಾಂತ್ ಕಾಮತ್ ಫ್ಯಾಮಿಲಿ ವತಿಯಿಂದ ವಿಜೇತ ವಿಶೇಷ ಶಾಲಾ ಮಕ್ಕಳಿಗೆ ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡಿದರು. ದವಳ ಕಾಲೇಜು 1991-93 ಬ್ಯಾಚ್ ವತಿಯಿಂದ ಶಾಲಾ ಶ್ರೇಯೋಭಿವೃದ್ಧಿಗಾಗಿ 3 ಸಾವಿರ ದೇಣಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ರೋಬರ್ಟ್ ಟೆಲಿಸ್, ಹಾಗೂ ಅವರ ಮಗ ಕೈತ್, ವಂದನಾ ಪ್ರಭು ಹಾಗೂ ಮಗಳು ಡಾ.ಶ್ರೇಯಾ ರಾಮ್ ದಾಸ್ ಪ್ರಭು , ನಿಕಟಪೂರ್ವ ಪುರಸಭಾ ಅಧ್ಯಕ್ಷರು ಗಿರಿಧರ್ ನಾಯಕ್, ವಿಜೇತ ವಿಶೇಷ ಶಾಲಾ ಸಂಸ್ಥಾಪಕಿ ಡಾ.ಕಾಂತಿ ಹರೀಶ್ ಉಪಸ್ಥಿತರಿದ್ದರು.
ವಿಶೇಷ ಶಿಕ್ಷಕಿ ಹರ್ಷಿತಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಡಾ.ಕಾಂತಿ ಹರೀಶ್ ಸ್ವಾಗತಿಸಿ , ವಿಶೇಷ ಶಿಕ್ಷಕಿ ಸುಮನಾ ವಂದಿಸಿದರು.