spot_img

ವಿದೇಶಕ್ಕೆ ರಫ್ತುಗಾಗಬೇಕಿದ್ದ ಕೂದಲು ಕಳ್ಳರ ಪಾಲು

Date:

ಬೆಂಗಳೂರು: ರಾಜಧಾನಿ ಬೆಂಗಳೂರು ಹೊರವಲಯದ ಸೋಲದೇವನಹಳ್ಳಿ ಬಳಿಯ ಲಕ್ಷ್ಮೇಪುರ ಕ್ರಾಸ್‌ನಲ್ಲಿರುವ ಕೂದಲು ದಾಸ್ತಾನು ಗೋದಾಮಿಗೆ ನುಗ್ಗಿದ ಖದೀಮರು, ಸುಮಾರು ₹70 ಲಕ್ಷ ಮೌಲ್ಯದ 850 ಕೆ.ಜಿ. ತಲೆಗೂದಲು ಕಳವು ಮಾಡಿರುವ ಘಟನೆ ನಿಜಕ್ಕೂ ಅಚ್ಚರಿಯೂ, ಆಘಾತಕಾರಿಯೂ ಆಗಿದೆ. ಚೀನಾ, ಬರ್ಮಾ ಮತ್ತು ಹಾಂಗ್‌ಕಾಂಗ್‌ಗೆ ರಫ್ತು ಮಾಡಲು ಸಿದ್ಧಪಡಿಸಿದ್ದ ಈ ಕೂದಲುಗಳನ್ನು ಫೆಬ್ರವರಿ 28ರಂದು ದೋಚಲಾಗಿತ್ತು.

ಪೊಲೀಸರ ತನಿಖೆಯಲ್ಲಿ ಪ್ರಮುಖ ಆರೋಪಿ, ಗದಗ ಮೂಲದ ಯಲ್ಲಪ್ಪ ಎಂಬಾತನನ್ನು ಬಂಧಿಸಲಾಗಿದೆ. ಬಂಧಿತನಿಂದ ₹18 ಲಕ್ಷ ಮೌಲ್ಯದ 300 ಕೆ.ಜಿ. ತಲೆಗೂದಲು ವಶಪಡಿಸಿಕೊಳ್ಳಲಾಗಿದೆ. ಐದು ಮಂದಿ ಸಹಚರ ಆರೋಪಿಗಳು ಈ ತನಕ ಪತ್ತೆಯಾಗದೇ, ಆಂಧ್ರಪ್ರದೇಶಕ್ಕೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅನೇಕ ವರ್ಷಗಳಿಂದ ಕೂದಲು ವ್ಯಾಪಾರ ನಡೆಸುತ್ತಿರುವ ವೆಂಕಟಸ್ವಾಮಿ ಎಂಬ ವ್ಯಾಪಾರಿಯು ಹೆಸರಘಟ್ಟ ಸುತ್ತಮುತ್ತಲಿನ ಗ್ರಾಮಗಳಿಂದ ತಲೆಗೂದಲು ಖರೀದಿಸಿ, ಅದನ್ನು ಗೋದಾಮಿನಲ್ಲಿ ಸಂಗ್ರಹಿಸಿ, ಹೈದರಾಬಾದ್‌ನ ವ್ಯಾಪಾರಿಗಳ ಮೂಲಕ ಚೀನಾ, ಬರ್ಮಾ ಹಾಗೂ ಹಾಂಗ್‌ಕಾಂಗ್‌ ಗೆ ರಫ್ತು ಮಾಡುತ್ತಿದ್ದ. ಕಳ್ಳತನಕ್ಕೂ ಕೆಲ ದಿನಗಳ ಮುನ್ನ ಚೀನಾದ ಗ್ರಾಹಕರು ಗೋದಾಮಿಗೆ ಬಂದು, ಗುಣಮಟ್ಟದ ಕೂದಲು ಕಳುಹಿಸಲು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಸುಮಾರು 850 ಕೆ.ಜಿ. ತಲೆಗೂದಲು ಆಯ್ದು, ತೂಕಮಾಪನ ಮಾಡಿ ಮೂಟೆಗಳಲ್ಲಿ ಸಿದ್ಧಪಡಿಸಲಾಗಿತ್ತು.

ಆದರೆ, ಫೆ.28ರಂದು ವೆಂಕಟಸ್ವಾಮಿಯವರು ವ್ಯಾಪಾರ ಮುಗಿದ ಬಳಿಕ ಗೋದಾಮಿಗೆ ಬೀಗ ಹಾಕಿ ಹೋಗಿದ್ದರು. ಮಾ.2ರಂದು ಕೂದಲು ರಫ್ತು ಮಾಡಬೇಕಾಗಿದ್ದ ಸಂದರ್ಭದಲ್ಲೇ ಈ ಕಳ್ಳತನ ನಡೆದಿದೆ. ಗೋದಾಮಿನ ಶಟರ್ ಮುರಿದು ನುಗ್ಗಿದ ದುಷ್ಕರ್ಮಿಗಳು ಬೆಚ್ಚಿ ಬೀಳಿಸುವ ರೀತಿಯಲ್ಲಿ ಕೂದಲು ದೋಚಿ ಚನ್ನಪಟ್ಟಣ ಮೂಲದ ವ್ಯಕ್ತಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.

ಅಕ್ಕಪಕ್ಕದ ಅಂಗಡಿಗಳಲ್ಲಿದ್ದ ಸಿ.ಸಿ. ಕ್ಯಾಮೆರಾದ ದೃಶ್ಯಾವಳಿಗಳ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು, ಮುಖ್ಯ ಆರೋಪಿ ಯಲ್ಲಪ್ಪನನ್ನು ಪತ್ತೆ ಹಚ್ಚಿದ್ದಾರೆ. ಆತನೊಂದಿಗೆ ಕೂದಲು ವ್ಯವಹಾರ ನಡೆಸುತ್ತಿದ್ದ ಸಹಚರರೇ ಸಂಚು ರೂಪಿಸಿ ಈ ಕೃತ್ಯ ಎಸಗಿದಿರುವ ಶಂಕೆ ವ್ಯಕ್ತವಾಗಿದೆ. “ವೆಂಕಟಸ್ವಾಮಿ ಅವರು ಸಂಗ್ರಹಿಸಿದ್ದ ತಲೆಗೂದಲಿನ ಬೆಲೆ ಪ್ರತಿ ಕೆ.ಜಿ.ಗೆ ₹8,000 ಆಗಿತ್ತು. ಈ ಗುಣಮಟ್ಟದ ಕೂದಲುಗಳನ್ನು ವಿಗ್ ತಯಾರಿಕೆಗೆ ಬಳಸಲಾಗುತ್ತಿತ್ತು. ಕಳವು ಪ್ರಕರಣದಲ್ಲಿ ಇತರ ಆರೋಪಿಗಳ ಬಂಧನಕ್ಕೂ ಶೀಘ್ರ ಕಾರ್ಯಾಚರಣೆ ನಡೆಯಲಿದೆ,” ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಮಹಾರಾಜ ಕರ್ಣಿ ಸಿಂಗ್

ಬಿಕನೆರ್ ನ ರಾಜ ವಂಶಸ್ಥ ಮಹಾರಾಜ ಸಾಧುಲ್ ಸಿಂಗ್ ದಂಪತಿಗಳಿಗೆ 1924 ಎಪ್ರಿಲ್ 21ರಂದು ಕರ್ನಿ ಸಿಂಗ್ ಜನಿಸಿದರು.

ಬೇಸಿಗೆಯಲ್ಲಿ ವಾಲ್ನಟ್ ಸೇವಿಸುವುದರ ಪ್ರಯೋಜನಗಳು!

ಬೇಸಿಗೆಯಲ್ಲಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀರಿನಾಂಶದಿಂದ ಕೂಡಿದ ಹಣ್ಣುಗಳು ಮತ್ತು ತರಕಾರಿಗಳಷ್ಟೇ ಪ್ರಾಮುಖ್ಯತೆ ಡ್ರೈ ಫ್ರೂಟ್ಸ್‌ಗೂ ಇದೆ

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ನಿಷೇಧ: ವಿದ್ಯಾರ್ಥಿಗಳಿಗೆ ಅವಮಾನ, ನ್ಯಾಯಾಲಯದ ಮುಂದೆ ಪ್ರಕರಣ

ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಯಜ್ಞೋಪವೀತ (ಜನಿವಾರ) ಧರಿಸಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಿದ ಪ್ರಕರಣಗಳು ರಾಜ್ಯವ್ಯಾಪಿ ವಿವಾದವಾಗಿ ಪರಿಣಮಿಸಿದೆ.

ಸುಪ್ರೀಂಕೋರ್ಟ್ ಕಾನೂನು ರಚಿಸಿದರೆ ಸಂಸತ್ತಿನ ಅಗತ್ಯವೇನು? – ಬಿಜೆಪಿ ಸಂಸದ ನಿಶಿಕಾಂತ್ ದುಬೆಯ ವಿವಾದಾತ್ಮಕ ಹೇಳಿಕೆ

ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ನಿಶಿಕಾಂತ್ ದುಬೆ ಅವರು ಸುಪ್ರೀಂಕೋರ್ಟ್ ಕಾನೂನು ರಚನೆಯಲ್ಲಿ ಹೆಚ್ಚು ಹಸ್ತಕ್ಷೇಪ ಮಾಡಿದರೆ ಸಂಸತ್ತನ್ನು ಮುಚ್ಚಿಬಿಡಬೇಕು ಎಂದು ವಾದಿಸಿದ್ದಾರೆ