
ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಡಿಪಾರ್ಟ್ಮೆಂಟ್ ಆಫ್ ಕೌನ್ಸೆಲಿಂಗ್, ಸ್ಟೂಡೆಂಟ್ ವೆಲ್ಫೇರ್, ಟ್ರೈನಿಂಗ್ ಮತ್ತು ಪ್ಲೇಸ್ಮೆಂಟ್ ವಿಭಾಗದ ಆಶ್ರಯದಲ್ಲಿರುವ ಔರಾ ಕ್ಲಬ್ ನ ವಿದ್ಯಾರ್ಥಿಗಳು ಮರ್ಸಿ ಬ್ಯೂಟಿ ಅಕಾಡೆಮಿ, ಮಂಗಳೂರು ಮತ್ತು ಫ್ಲೈಹೈ ಚಾರಿಟಬಲ್ ಟ್ರಸ್ಟ್ ಸಹಯೋಗದೊಂದಿಗೆ, ಸತತ ನಾಲ್ಕನೇ ವರ್ಷದ ಕೂದಲು ದಾನ ಅಭಿಯಾನವನ್ನು ಅಕ್ಟೋಬರ್ 13 ರಂದು ಆಯೋಜಿಸಿದ್ದರು.
ದಾನ ಮಾಡಲಾದ ಕೂದಲನ್ನು ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವವರಿಗೆ ಉಚಿತ ವಿಗ್ ತಯಾರಿಸಲು ಉಪಯೋಗಿಸಲಾಗುವುದು. ಸಂಸ್ಥೆಯ ಹಲವಾರು ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರು ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.