
ಹಿರಿಯಡಕ: ಗ್ರೀನ್ ಪಾರ್ಕ್ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳು ಬೊಮ್ಮರಬೆಟ್ಟು ಗ್ರಾಮದ ಮುಂಡೂಜೆ ಸುರೇಶ್ ನಾಯಕ್ ಅವರ ಹೊಲದಲ್ಲಿ ನೇಜಿ ನೆಡುವ ಮೂಲಕ ಕೃಷಿ ಚಟುವಟಿಕೆಗಳ ಅನುಭವ ಪಡೆದರು. ಸುಮಾರು 70 ವಿದ್ಯಾರ್ಥಿಗಳು ಉತ್ಸಾಹದಿಂದ ಈ ಕ್ಷೇತ್ರಪ್ರವಾಸದಲ್ಲಿ ಭಾಗವಹಿಸಿದರು.

ವಿದ್ಯಾರ್ಥಿಗಳ ಆಸಕ್ತಿ ಮತ್ತು ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸುರೇಶ್ ನಾಯಕ್ ಅವರು, ಮಕ್ಕಳಿಗೆ ಸಿಹಿ ಹಂಚಿ ಸಂತೋಷಪಟ್ಟರು. ಈ ಸಮಯದಲ್ಲಿ ಶಾಲೆಯ ಆಡಳಿತಾಧಿಕಾರಿ ಶೇಖರ್ ಗುಜ್ಜರ್‌ಬೆಟ್ಟು, ಸಂಯೋಜಕಿ ಉಷಾ ರಾವ್, ಶಿಕ್ಷಕಿಯರಾದ ಶುಭ್ರ ಶೆಟ್ಟಿ, ರಂಜಿತಾ ಮತ್ತು ದೈಹಿಕ ಶಿಕ್ಷಕಿ ಮಮತಾ ಶೆಟ್ಟಿ ಉಪಸ್ಥಿತರಿದ್ದರು.

ಕೃಷಿಯ ಮಹತ್ವ ಹಾಗೂ ಕೃಷಿ ಕಾರ್ಯಗಳ ಕುರಿತು ಪ್ರಾಯೋಗಿಕ ಜ್ಞಾನ ಪಡೆದ ಮಕ್ಕಳು, ತಮ್ಮ ಕ್ಷೇತ್ರ ಪ್ರವಾಸದ ಬಗ್ಗೆ ಸಂತಸ ವ್ಯಕ್ತಪಡಿಸಿದರು.

