
ಹಿರಿಯಡ್ಕ : ಗ್ರೀನ್ ಪಾರ್ಕ್ ಸೆಂಟ್ರಲ್ ಶಾಲೆಯ ವಿದ್ಯಾರ್ಥಿಗಳು ಕ್ರೈಸ್ಟ್ ಕಿಂಗ್ ಪಿ. ಯು. ಕಾಲೇಜ್, ಕಾರ್ಕಳ ಏರ್ಪಡಿಸಿದ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸ್ಪರ್ಧೆ ಯಲ್ಲಿ ಭಾಗವಹಿಸಿ ರನ್ನರ್ ಅಪ್ ಪ್ರಶಸ್ತಿ ಯನ್ನು ತನ್ನದಾಗಿಸಿ ಕೊಂಡಿದೆ.

ಬೆಸ್ಟ್ ಔಟ್ ಆಫ್ ವೇಸ್ಟ್ ಸ್ಪರ್ಧೆ ಯಲ್ಲಿ ಪ್ರಥಮ, ಫೇಸ್ ಪೈಂಟಿಂಗ್ ನಲ್ಲಿ ಪ್ರಥಮ, ನೃತ್ಯ ಸ್ಪರ್ಧೆ ಯಲ್ಲಿ ಪ್ರಥಮ ಸ್ಥಾನ ವನ್ನು ಪಡೆದುಕೊಂಡು ಸಮಗ್ರ ಪ್ರಶಸ್ತಿಯೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

ಶಾಲಾ ಶಿಕ್ಷಕಿಯರಾದ ಜಯಲಕ್ಷ್ಮಿ, ಸೌಮ್ಯ ಮತ್ತು ನಾಗಸುದನ್ ರವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಸಗನ್ ಶೆಟ್ಟಿ, ಶರದಿ ಉಪಾಧ್ಯಾಯ, ರೋಶಿನಿ, ನಿಷ್ಕ, ಆರತ್ರಿಕ, ಶರದಿ, ಆಧ್ಯ, ಪೂರ್ವಿ, ಹಂಶಿಕ, ಅಧಿತಿ, ಶ್ರೇಷ್ಠ, ಸ್ವಸ್ತಿ, ವಂಶ್ ನಿಧಿ, ಅಧಿತಿ, ಶ್ರೇಷ್ಟ್, ಅನುಷ, ಪ್ರಾಪ್ತಿ, ದ್ರುತಿ, ಪ್ರಣಿತ, ಧನ್ವಿ, ಅನಘ, ನಿಧಿಶ್,ಅದ್ವಿಕ್, ಆಗಮ್, ಸಮರ್ಥ್, ಸುಶ್ರಾವ್ಯ, ಸಾನ್ವಿ, ಜೀವಿಕ, ರಾಶಿ ಭಾಗವಹಿಸಿದ್ದರು.




































