
ಬಣ್ಣಂಪಳ್ಳಿ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಣ್ಣಂಪಳ್ಳಿ ಇಲ್ಲಿಗೆ ಶ್ರೀ ಮನೋಜ್ ಶೆಟ್ಟಿ ಸುಶೀಲ ನಿಲಯ ಹಂದಿಬೆಟ್ಟು ಇವರು ಕೊಡುಗೆಯಾಗಿ ನೀಡಿದಂತಹ 50,000 ರೂಪಾಯಿ ಮೌಲ್ಯದ ಪೀಠೋಪಕರಣಗಳನ್ನು ಬಂಟರ ಸಂಘ ಪೆರ್ಡೂರು ಇದರ ಅಧ್ಯಕ್ಷರಾದ ಶ್ರೀಯುತ ಶಾಂತರಾಮ ಸೂಡರವರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬಂಟರ ಸಂಘದ ಸದಸ್ಯರಾದ ಶ್ರೀ ಸಾಂಗ್ಲಿ ದಿವಾಕರ್ ಶೆಟ್ಟಿ, ಶ್ರೀ ಶ್ರೀಪಾದರೈ ಪಳಜೆ, ರಮೇಶ್ ಹೆಗ್ಗಡೆ ಅಂಕಲ್ ಬೆಟ್ಟು ,ವಿಜಯ್ ಶೆಟ್ಟಿ ಕಲ್ಲಾಳ, ವಸಂತ್ ಕುಮಾರ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ನಿತೇಶ್ ಶೆಟ್ಟಿ, ಪಂಚಾಯತ್ ಸದಸ್ಯರಾದ ಉದಯ್ ಕುಲಾಲ್, ಶ್ರೀ ರಾಘವೇಂದ್ರ ನಾಯಕ್ , ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀಯುತ ಚಂದ್ರ ಪುತ್ರನ್ , ಶಿಕ್ಷಕರು, ಪೋಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.