
ಹಿರ್ಗಾನ: 2024–25ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಸರಕಾರಿ ಪ್ರೌಢ ಶಾಲೆ ಹಿರ್ಗಾನ 94% ಸಾಧನೆಯೊಂದಿಗೆ ಅತ್ಯುತ್ತಮ ಫಲಿತಾಂಶ ದಾಖಲಿಸಿದೆ. ವಿದ್ಯಾರ್ಥಿಗಳ ಪರಿಶ್ರಮ ಮತ್ತು ಶಿಕ್ಷಕರ ಮಾರ್ಗದರ್ಶನದಿಂದಾಗಿ ಈ ಯಶಸ್ಸು ಸಾಧ್ಯವಾಗಿದೆ.
ಶಾಲೆಯ ಪ್ರಥಮ ಸ್ಥಾನವನ್ನು ರಿತೇಶ್ ಮೂಲ್ಯ ಅವರು 625 ಅಂಕಗಳಲ್ಲಿ 616 ಅಂಕಗಳನ್ನು (98.56%) ಪಡೆದಿದ್ದಾರೆ. ದ್ವಿತೀಯ ಸ್ಥಾನವನ್ನು ತಜ್ಞಶ್ರೀ ಆತ್ರೇಯ ಅವರು 607 ಅಂಕಗಳು (97.12%) ಗಳಿಸಿದ್ದು, ಶರಣ್ಯ ಆರ್ ಪೂಜಾರಿ ಅವರು 595 ಅಂಕಗಳೊಂದಿಗೆ (95.2%) ತೃತೀಯ ಸ್ಥಾನದಲ್ಲಿದ್ದಾರೆ. ಇದಲ್ಲದೆ 11 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ಶಾಲೆಯ ಶೈಕ್ಷಣಿಕ ಮಟ್ಟವನ್ನು ಮತ್ತಷ್ಟು ಉನ್ನತಿಗೆ ಎತ್ತಿದ್ದಾರೆ.
ಈ ಉತ್ತಮ ಫಲಿತಾಂಶಕ್ಕೆ ಕಾರಣರಾದ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಶಾಲೆಯ ವತಿಯಿಂದ ಅಭಿನಂದನೆಗಳು ಮತ್ತು ಕೃತಜ್ಞತೆಗಳು.