
ಬಿಗ್ ಬಾಸ್ ಕನ್ನಡ ಸೀಸನ್ 7ನಲ್ಲಿ ಗಮನ ಸೆಳೆದ ನಟ ಶೈನ್ ಶೆಟ್ಟಿ, ತಮ್ಮ ಹೃದಯದ ಹತ್ತಿರದ “ಗಲ್ಲಿ ಕಿಚನ್” ರೆಸ್ಟೋರೆಂಟ್‌ನ್ನು ಮುಚ್ಚಿಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಕುರಿತು ಭಾವನಾತ್ಮಕವಾಗಿ ಬರೆದ ಪತ್ರವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
“ನನ್ನ ಅಸ್ತಿತ್ವ ಮತ್ತು ವ್ಯಕ್ತಿತ್ವಕ್ಕೆ ಶಕ್ತಿ ನೀಡಿದ ಪ್ರಯಾಣವೊಂದು — ‘ಗಲ್ಲಿ ಕಿಚನ್’! ಪುಟ್ಟ ದೋಸೆ ಕ್ಯಾಂಪ್ ಆಗಿ ಆರಂಭವಾಗಿ ಜನಪ್ರಿಯ ರೆಸ್ಟೋರೆಂಟ್ ಆಗಿ ಬೆಳೆದ ಈ ಕನಸು ಈಗ ಮುಗಿಯುತ್ತಿದೆ,” ಎಂದು ಶೈನ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
‘ಲಕ್ಷ್ಮಿ ಬಾರಮ್ಮ’ ಸೀರಿಯಲ್ ನಂತರದ ಹಿನ್ನಡೆಗೆ ಬೆಂಬಲವಾಗಿ ಆರಂಭಿಸಿದ ‘ಗಲ್ಲಿ ಕಿಚನ್’ ಫುಡ್ ಟ್ರಕ್, ಹಲವು ಜನರ ಮೆಚ್ಚುಗೆ ಗಳಿಸಿ ಎರಡು ಶಾಖೆಗಳ ಹೋಟೆಲ್ ಆಗಿತ್ತು. ಆದರೆ ಈಗ ಅವರು ಈ ಪ್ರಯಾಣಕ್ಕೆ “ಗುಡ್ ಬೈ” ಹೇಳಿದ್ದಾರೆ.
ಭಾವಪೂರ್ಣವಾಗಿ “ನಾನು ನಿಮ್ಮ ಪ್ರೀತಿಗೆ ಸದಾ ಋಣಿ” ಎಂದು ಹೇಳಿದ ಶೈನ್ , ಮುಂದಿನ ಹಾದಿಯಲ್ಲಿ ಹೊಸ ಅಧ್ಯಾಯ ಆರಂಭಿಸಲಿದ್ದೇನೆ ಎಂದು ಹೇಳಿದ್ದಾರೆ.