
ಬೆಂಗಳೂರು: ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಭರ್ಜರಿ ಸರ್ಪ್ರೈಸ್ ನೀಡಿದ್ದು, ಕೇವಲ ರೂ.99 ಪ್ಲ್ಯಾನ್ ಹೊಂದಿರುವ ಬಳಕೆದಾರರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಮೊಬೈಲ್‌ನಲ್ಲಿ ಬಿಐಟಿವಿ ಸೇವೆಯ ಮೂಲಕ 450+ ಚಾನೆಲ್‌ಗಳನ್ನು ಉಚಿತವಾಗಿ ವೀಕ್ಷಿಸಬಹುದು.
ಬಿಐಟಿವಿ ಸೇವೆ ಮತ್ತು ಅದರ ವಿಶೇಷತೆಗಳು
ಬಿಐಟಿವಿ ಎಂಬುದು ಬಿಎಸ್ಎನ್ಎಲ್‌ನ ನೇರ-ಮೊಬೈಲ್ ಟಿವಿ ಸೇವೆಯಾಗಿದ್ದು, ಮೊಬೈಲ್ ಬಳಕೆದಾರರು ಹಾಗೂ ಆಂಡ್ರಾಯ್ಡ್ ಟಿವಿ ಹೊಂದಿರುವವರು ಈ ಸೇವೆಯ ಸದುಪಯೋಗ ಪಡೆಯಬಹುದು. ಬಳಕೆದಾರರಿಗೆ 450+ ಲೈವ್ ಚಾನೆಲ್‌ಗಳು, ವೆಬ್ ಸರಣಿಗಳು ಹಾಗೂ ಸಿನಿಮಾಗಳನ್ನು ವೀಕ್ಷಿಸುವ ಅವಕಾಶ ಲಭ್ಯವಾಗಲಿದೆ.
ಬಿಐಟಿವಿ ಸೇವೆ ಹೇಗೆ ಪಡೆಯಲು ಸಾಧ್ಯ?
ಬಿಎಸ್ಎನ್ಎಲ್ ಬಳಕೆದಾರರಾಗಿರಬೇಕು.ರೂ. 99 ಪ್ಲ್ಯಾನ್ ರಿಚಾರ್ಜ್ ಮಾಡಿಸಿಕೊಂಡು, ಬಿಐಟಿವಿ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಬೇಕು.ಅಪ್ಲಿಕೇಶನ್ ಮೂಲಕ ನೇರವಾಗಿ 450+ ಚಾನೆಲ್‌ಗಳನ್ನು ವೀಕ್ಷಿಸಬಹುದು.
ಈ ಹೊಸ ಸೇವೆ ಆನ್‌ಲೈನ್ ಮನರಂಜನೆಗೆ ಹೊಸ ಆಯಾಮವನ್ನು ತಂದುಕೊಡಲಿದ್ದು, ಕರ್ನಾಟಕದಲ್ಲಿ ಈ ಸೇವೆಗೆ ಕಳೆದ ವಾರವೇ ಅಧಿಕೃತ ಚಾಲನೆ ಸಿಕ್ಕಿದೆ. ಇದು ಬಿಎಸ್ಎನ್ಎಲ್ ಬಳಕೆದಾರರಿಗೆ ಸಣ್ಣ ಮೊತ್ತದಲ್ಲಿ ದೊಡ್ಡ ಪ್ರಮಾಣದ ಮನರಂಜನೆ ನೀಡುವ ಹೊಸ ಪ್ರಯತ್ನವಾಗಿದೆ.