
ಚೆನ್ನೈ: ಟಾಲಿವುಡ್ ಸೂಪರ್ ಸ್ಟಾರ್ ಅಜಿತ್ ಕುಮಾರ್ ಅಭಿನಯಿಸಿರುವ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ನಡೆಸುತ್ತಿರುವ ನಡುವೆಯೇ ಕಾನೂನು ಸವಾಲನ್ನು ಎದುರಿಸಿದೆ.
ಪ್ರೀಮಿಯರ್ ನಂತರ ಐದು ದಿನ ಕಳೆದರೂ ಸಿನಿಮಾ ಕುರಿತು ಅಭಿಮಾನಿಗಳ ಕ್ರೇಜ್ ಕಡಿಮೆಯಾಗಿಲ್ಲ. ಭಾರತದಲ್ಲಿ ಮಾತ್ರ 101.30 ಕೋಟಿ ರೂ. ಗಳಿಸಿರುವ ಈ ಚಿತ್ರ, ವರ್ಲ್ಡ್‌ವೈಡ್‌ನಲ್ಲಿ 170 ಕೋಟಿ ರೂ. ಗಳಿಕೆ ಮಾಡಿದೆ. ಇದು ಪ್ರದೀಪ್ ರಂಗನಾಥನ್ ಅವರ ‘ಡ್ರಾಗನ್’ (152 ಕೋಟಿ ರೂ.) ಸಿನಿಮಾಗಳಿಕೆಯನ್ನು ಮೀರಿಸಿದೆ.
ಆದರೆ, ಈಗ ಈ ಯಶಸ್ವಿ ಸಿನಿಮಾಕ್ಕೆ ಮ್ಯೂಸಿಕ್ ಲೆಜೆಂಡ್ ಇಳಯರಾಜ ಕಾಪಿರೈಟ್ ಉಲ್ಲಂಘನೆಯ ಆರೋಪ ಹೇರಿದ್ದಾರೆ. ‘ಓಥ್ ರುಬಾಯುಮ್ ತಾರೆನ್’, ‘ಇಲಮೈ ಇಧೋ ಇಧೋ’ ಮತ್ತು ‘ಎನ್ ಜೋಡಿ ಮಂಜ ಕುರುವಿ’ ಎಂಬ ತಮ್ಮ ಹಳೆ ಹಿಟ್ ಹಾಡುಗಳ ಬದಲಾಗಿದ ಆವೃತ್ತಿಗಳನ್ನು ಅನುಮತಿ ಇಲ್ಲದೆ ಬಳಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಇದರಿಂದಾಗಿ ಇಳಯರಾಜ ಅವರ ಕಾನೂನು ತಂಡ ಸಿನಿಮಾ ನಿರ್ಮಾಪಕರಿಗೆ ನೋಟೀಸ್ ನೀಡಿದ್ದು, ಹಾಡುಗಳನ್ನು ತಕ್ಷಣ ತೆಗೆದುಹಾಕಬೇಕು ಅಥವಾ 5 ಕೋಟಿ ರೂ. ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದೆ.

ಇದಕ್ಕೂ ಮುನ್ನ ‘ಮಂಜುಮ್ಮೆಲ್ ಬಾಯ್ಸ್’ ಚಿತ್ರತಂಡ ಕೂಡಾ ಇಳಯರಾಜ ಅವರ ಅನುಮತಿಯಿಲ್ಲದೆ ಹಾಡು ಬಳಸಿದ್ದಕ್ಕಾಗಿ 60 ಲಕ್ಷ ರೂ. ಪರಿಹಾರ ನೀಡಿ ವ್ಯಾಜ್ಯ ನಿವಾರಿಸಿತ್ತು.
‘ಗುಡ್ ಬ್ಯಾಡ್ ಅಗ್ಲಿ’ ಚಿತ್ರದಲ್ಲಿ ಅಜಿತ್ ಜತೆ ತ್ರಿಷಾ ನಾಯಕಿಯಾಗಿ ನಟಿಸಿದ್ದಾರೆ. ಅರ್ಜುನ್ ದಾಸ್, ಸುನಿಲ್, ಪ್ರಿಯಾ ಪ್ರಕಾಶ್ ವಾರಿಯರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಿವಿ ಪ್ರಕಾಶ್ ಸಂಗೀತ ನೀಡಿರುವ ಈ ಸಿನಿಮಾ ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿದೆ.