
ಹೊಸದಿಲ್ಲಿ: ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯ ಏರಿಕೆ ಮುಂದುವರಿದಿದ್ದು, ದಿಲ್ಲಿಯಲ್ಲಿ ಒಂದೇ ದಿನ 1,100 ರೂ. ಏರಿಕೆಯಾಗಿದೆ. ಇದರ ಪರಿಣಾಮ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 92,150 ರೂ.ಗೆ ತಲುಪಿದ್ದು, ಇದು ದಾಖಲೆ ಮಟ್ಟವಾಗಿದೆ. ಈ ಮೊದಲು ಗರಿಷ್ಠ 91,050 ರೂ. ದಾಖಲಾಗಿತ್ತು.
ವರ್ಷದ ಸರಾಸರಿ ಏರಿಕೆ
ಕಳೆದ ವರ್ಷ ಏಪ್ರಿಲ್ 1ರ ಬೆಲೆಯೊಂದಿಗೆ ಹೋಲಿಸಿದರೆ, ಚಿನ್ನದ ದರ 23,730 ರೂ. ಹೆಚ್ಚಳವಾಗಿದೆ. ಶೇ.99.5 ಶುದ್ಧತೆಯ ಚಿನ್ನದ ದರವೂ 97,700 ರೂ. ಗರಿಷ್ಠಕ್ಕೆ ತಲುಪಿದೆ.
ಬೆಳ್ಳಿಯ ದರದಲ್ಲಿ ಭಾರೀ ಜಿಗಿತ
ಬೆಳ್ಳಿಯ ದರದಲ್ಲೂ ಉಲ್ಬಣ ಕಂಡುಬಂದಿದ್ದು, ದಿಲ್ಲಿಯಲ್ಲಿ 1 ಕೆ.ಜಿ ಬೆಳ್ಳಿಗೆ 1,300 ರೂ. ಹೆಚ್ಚಳವಾಗಿ 1,03,000 ರೂ.ಗೆ ತಲುಪಿದೆ. ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನಕ್ಕೆ 1,140 ರೂ. ಏರಿಕೆಯಾಗಿ 90,980 ರೂ. ಆಗಿದ್ದು, ಬೆಳ್ಳಿಯ ದರ 3,000 ರೂ. ಏರಿಕೆಯಾಗಿ 1,05,000 ರೂ.ಗೆ ತಲುಪಿದೆ.