ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳಲು 10 ರೋಗಿಗಳ ಜೀವ ತೆಗೆದ ನರ್ಸ್‌ಗೆ ಜೀವಾವಧಿ ಶಿಕ್ಷೆ

Date:

spot_img

ಬರ್ಲಿನ್, ಜರ್ಮನಿ: ತನ್ನ ರಾತ್ರಿ ಪಾಳಿಯ ಕೆಲಸದ ಹೊರೆ ಕಡಿಮೆ ಮಾಡಿಕೊಳ್ಳಲು ಆಘಾತಕಾರಿ ಕೃತ್ಯಕ್ಕೆ ಮುಂದಾಗಿದ್ದ ಪುರುಷ ನರ್ಸ್‌ ಓರ್ವ 10 ರೋಗಿಗಳನ್ನು ಕೊಲೆಗೈದ ಘಟನೆ ಜರ್ಮನಿಯಲ್ಲಿ ನಡೆದಿದೆ. ಈ ಭಯಾನಕ ಕೃತ್ಯಕ್ಕೆ ಸಂಬಂಧಿಸಿದಂತೆ ಜರ್ಮನಿಯ ಸ್ಥಳೀಯ ನ್ಯಾಯಾಲಯವು ಆರೋಪಿಗೆ ಜೀವಾವಧಿ ಶಿಕ್ಷೆಯನ್ನು ಘೋಷಿಸಿದೆ.

ಬಿಬಿಸಿ ವರದಿಯ ಪ್ರಕಾರ, ಈ ನರ್ಸ್‌ 10 ರೋಗಿಗಳನ್ನು ಕೊಲೆ ಮಾಡಿದ್ದು, ಇನ್ನುಳಿದ 27 ಜನರನ್ನು ಕೊಲೆ ಮಾಡುವುದಕ್ಕೆ ಯತ್ನಿಸಿದ್ದಾನೆ. ಜರ್ಮನಿಯ ವೂರ್ಸೆಲೆನ್‌ನಲ್ಲಿರುವ ಆಸ್ಪತ್ರೆಯಲ್ಲಿ ಈ ಘಟನೆಗಳು 2023 ಮತ್ತು 2024ರ ಅವಧಿಯಲ್ಲಿ ನಡೆದಿವೆ. ರಾತ್ರಿ ಪಾಳಿಯಲ್ಲಿ ಹೆಚ್ಚು ಹೆಚ್ಚು ರೋಗಿಗಳು ಸಾವನ್ನಪ್ಪುತ್ತಿರುವುದು ಹಾಗೂ ಅವರ ಆರೋಗ್ಯ ಇದ್ದಕ್ಕಿದ್ದಂತೆ ಕ್ಷೀಣಿಸುತ್ತಿರುವುದು ಗಮನಕ್ಕೆ ಬಂದ ನಂತರ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಅನುಮಾನ ವ್ಯಕ್ತಪಡಿಸಿ ದೂರು ದಾಖಲಿಸಿದ್ದರು.

ನಿದ್ರಾಜನಕ ನೀಡಿದ ನರ್ಸ್‌

44 ವರ್ಷ ಪ್ರಾಯದ ಈ ನರ್ಸ್‌, ತೀವ್ರ ಕಾಳಜಿಯ ಅಗತ್ಯವಿದ್ದ ವೃದ್ಧರು ಮತ್ತು ಮಾರಕ ಕಾಯಿಲೆಯಿಂದ ಬಳಲುತ್ತಿದ್ದ ರೋಗಿಗಳಿಗೆ ಅತಿಯಾದ ಪ್ರಮಾಣದಲ್ಲಿ ಮಾರ್ಫಿನ್ ಮತ್ತು ಮಿಡಜೋಲಮ್ ಎಂಬ ಒಂದು ರೀತಿಯ ನಿದ್ರಾಜನಕವನ್ನು ಇಂಜೆಕ್ಟ್ ಮಾಡಿದ್ದ ಎಂದು ತಿಳಿದುಬಂದಿದೆ. ಪ್ರಾಸಿಕ್ಯೂಟರ್‌ಗಳ ಪ್ರಕಾರ, ಈ ಔಷಧಿಯ ಅಮಲಿನಲ್ಲಿ ರೋಗಿಗಳು ನಿರ್ಜೀವವಾಗಿ ಮಲಗುವುದರಿಂದ, ರಾತ್ರಿಯಿಡೀ ಅವರಿಗೆ ಆರೈಕೆ ಮಾಡಬೇಕಾಗಿಲ್ಲ ಎಂಬ ಉದ್ದೇಶದಿಂದ ಆತ ಈ ಕೃತ್ಯ ಎಸಗಿದ್ದನು.

ಹೆಚ್ಚಿನ ಮಟ್ಟದ ಆರೈಕೆಯ ಅಗತ್ಯವಿರುವ ರೋಗಿಗಳಿಗೆ ಕಿರಿಕಿರಿ ತೋರ್ಪಡಿಸಿ, ಸಹಾನುಭೂತಿಯ ಕೊರತೆಯಿಂದ ಈ ಕೃತ್ಯ ಎಸಗಿದ ಆರೋಪಿಯ ಬಿಡುಗಡೆಗೆ ನ್ಯಾಯಾಲಯವು 15 ವರ್ಷಗಳ ನಂತರವೂ ತಡೆ ನೀಡಿದೆ. ನ್ಯಾಯಾಲಯವು ಆತನನ್ನು “ಜೀವನ ಮತ್ತು ಸಾವಿನ ಮಾಸ್ಟರ್‌ನಂತೆ” ಕೆಲಸ ಮಾಡಿದವನು ಎಂದು ಬಣ್ಣಿಸಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಗ್ಯಾಜೆಟ್ ಪ್ರಿಯರಿಗೆ ಗುಡ್ ನ್ಯೂಸ್: ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಶಿಯೋಮಿಯ ಪವರ್‌ಫುಲ್ 67W ಪವರ್ ಬ್ಯಾಂಕ್

ಶಿಯೋಮಿ ಭಾರತದಲ್ಲಿ ಹೊಸ 20000mAh ಪವರ್ ಬ್ಯಾಂಕ್ 5i ಬಿಡುಗಡೆ ಮಾಡಲಿದೆ. 67W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದ ಈ ಸಾಧನದ ಸಂಪೂರ್ಣ ಮಾಹಿತಿ ಇಲ್ಲಿದೆ.

ನಟಿ ಐಶ್ವರ್ಯ ಸಿಂಧೋಗಿಗೆ ಸೈಬರ್ ಕಿರುಕುಳ: ಪೊಲೀಸ್ ದೂರು

ನಟಿ ಐಶ್ವರ್ಯ ಸಿಂಧೋಗಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್ ಮೂಲಕ ಕಿರುಕುಳ ನೀಡಿದ ಕಿಡಿಗೇಡಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ದಿನ ವಿಶೇಷ – ರಾಷ್ಟ್ರೀಯ ಬಿ ಸಮ್‌ಒನ್ ದಿನ

ಜುಲೈ 21 ರ ರಾಷ್ಟ್ರೀಯ ಬಿ ಸಮ್‌ಒನ್ ದಿನವು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಮತ್ತು ಅವರ ರಕ್ಷಣೆಗೆ ವಿಶ್ವಾಸಾರ್ಹ ವ್ಯಕ್ತಿಯಾಗಲು ವಯಸ್ಕರಿಗೆ ಕರೆ ನೀಡುತ್ತದೆ.

ಅಡುಗೆಮನೆಯಲ್ಲೇ ಇದೆ ಮ್ಯಾಜಿಕ್ ಲಿಕ್ವಿಡ್: ಅಕ್ಕಿ ತೊಳೆದ ನೀರನ್ನು ಅಪ್ಪಿತಪ್ಪಿಯೂ ಚೆಲ್ಲಬೇಡಿ

ಅಕ್ಕಿ ತೊಳೆದ ನೀರು ಮತ್ತು ಗಂಜಿ ನೀರಿನಿಂದ ಪಡೆಯಬಹುದಾದ ಅದ್ಭುತ ಆರೋಗ್ಯ ಹಾಗೂ ಸೌಂದರ್ಯ ಪ್ರಯೋಜನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.