spot_img

ಗರುಡ ಗ್ಯಾಂಗ್ ದರೋಡೆ ಸಂಚು ವಿಫಲ: ಭಟ್ಕಳದಲ್ಲಿ ಮೂವರ ಬಂಧನ, ಇಬ್ಬರ ಶೋಧಕಾರ್ಯಾ ಮುಂದುವರಿಕೆ

Date:

spot_img

ಭಟ್ಕಳ: ರಾಜ್ಯ ಹೆದ್ದಾರಿ ಭಾಗದ ಬಿಳಾಲಖಂಡ ಗ್ರಾಮದ ಸಾಗರ ರಸ್ತೆ ಕ್ರಾಸ್ ಬಳಿ ಬೆಳಗಿನ ಜಾವ ದರೋಡೆಗೆ ಸಂಚು ರೂಪಿಸಿದ್ದ ಕುಖ್ಯಾತ ‘ಗರುಡ ಗ್ಯಾಂಗ್’ನ ಐವರ ಪೈಕಿ ಮೂವರು ಪೊಲೀಸರ ಬದ್ಧ ಕಾರ್ಯಾಚರಣೆಯಲ್ಲಿ ಬಂಧಿತರಾಗಿದ್ದಾರೆ. ಇಬ್ಬರು ಆರೋಪಿಗಳು ಮಿಂಚಿನಂತೆ ಪರಾರಿಯಾಗಿದ್ದು, ಅವರಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.

ಬಂಧಿತರನ್ನು ಚೊಕ್ಕಬೆಟ್ಟು ನಿವಾಸಿ ಜಲೀಲ್ ಹುಸೈನ್ (39), ಗಾಂಧಿನಗರದ ನಾಸಿರ್ ಹಕೀಮ್ (26) ಹಾಗೂ ಇನ್ನೋರ್ವ ಅಪ್ರಾಪ್ತ ಬಾಲಕನೆಂದು ಗುರುತಿಸಲಾಗಿದೆ. ಇವರಲ್ಲಿ ಜಲೀಲ್ ಮೇಲೆ 11 ಪ್ರಕರಣಗಳು ಮತ್ತು ನಾಸಿರ್ ಮೇಲೆ 2 ಕಳ್ಳತನ ಹಾಗೂ ದರೋಡೆ ಪ್ರಕರಣಗಳು ದಾಖಲಿವೆ.

ಘಟನೆಯಲ್ಲಿ ಪರಾರಿಯಾದ ಆರೋಪಿಗಳು ಜಿಶಾನ್ (ಮುಗ್ದಮ್ ಕಾಲೋನಿ) ಮತ್ತು ನಬೀಲ್ (ಬಟ್ಟಾಗಾಂವ್) ಆಗಿದ್ದಾರೆ. ಬಂಧಿತರು ಕಾರಿನಲ್ಲಿ ಕುಳಿತು ಚಾಕು, ತಾಡಪತ್ರೆ, ಕಾರಾಪುಡಿ, ಬೆಲ್ಟ್, ಮುಚ್ಚುಗಟ್ಟು ಟೋಪಿ ಇತ್ಯಾದಿ ಉಪಕರಣಗಳೊಂದಿಗೆ ದರೋಡೆ ಸಂಚು ರೂಪಿಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಕಾರನ್ನು ಪರಿಶೀಲಿಸಲು ಮುಂದಾದಾಗ ಆರೋಪಿಗಳು ತಪ್ಪಿಸಿಕೊಳ್ಳಲು ಹಿಮ್ಮುಖವಾಗಿ ಚಲಿಸಿದ ಕಾರು ನಿಯಂತ್ರಣ ತಪ್ಪಿ ಗಟಾರಕ್ಕೆ ಬಿದ್ದಿದೆ. ಈ ಮೂಲಕ ಮೂವರು ಸಿಕ್ಕಿಹಾಕಿಕೊಂಡಿದ್ದು, ಉಳಿದ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತರನ್ನು ವಿಚಾರಣೆ ನಡೆಸಲಾಗುತ್ತಿದೆ. ಪರಾರಿಯಾಗಿರುವ ಇಬ್ಬರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಶ್ರೀ ಕ್ಷೇ.ಧ.ಗ್ರಾ. ಯೋಜನೆಯಿಂದ ಅಸಹಾಯಕರಿಗೆ ಮಾಸಾಶನದ ನೆರವು

ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ವತಿಯಿಂದ ಉಡುಪಿ ಜಿಲ್ಲೆಯ 868 ಅಸಹಾಯಕರಿಗೆ ಮಾಸಾಶನದ ನೆರವು ಹಾಗೂ 779 ವಿಶೇಷ ಚೇತನರಿಗೆ ಉಚಿತ ಸಲಕರಣೆಗಳ ವಿತರಣೆ ಮಾಡಲಾಗಿದೆ.

ಯುವ ಜನತೆ ಹೆಚ್ಚೆಚ್ಚು ರಕ್ತದಾನಕ್ಕೆ ಮುಂದಾಗಿ : ಡಾ.ವೀಣಾ ಕುಮಾರಿ ; ಮಲಬಾರ್ ಗೋಲ್ಡ್‌ನಿಂದ ಬೃಹತ್ ರಕ್ತದಾನ ಶಿಬಿರ

ಉಡುಪಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಮುಖ್ಯಸ್ಥೆ ಡಾ.ವೀಣಾಕುಮಾರಿಯವರು ಉಡುಪಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ 12 ನೇ ವಾರ್ಷಿಕೋತ್ಸವದ ಪ್ರಯುಕ್ತ ಉಡುಪಿ ಜಿಲ್ಲಾಸ್ಪತ್ರೆಯ ಸಹಯೋಗದೊಂದಿಗೆ ಗುರುವಾರ ಸಂಸ್ಥೆಯಲ್ಲಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರ ಹಾಗೂ ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಹೆರಿಗೆ ನಂತರವೂ ಇರಲಿ ಕಾಳಜಿ: ಪ್ರಸವದ ಬಳಿಕ ಎದುರಾಗುವ ಚಳಿ ಮತ್ತು ನಡುಕವನ್ನು ನಿರ್ವಹಿಸುವುದು ಹೇಗೆ?

ಗರ್ಭಾವಸ್ಥೆಯ ಸಮಯದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಷ್ಟೇ ಮುಖ್ಯ ಹೆರಿಗೆಯ ನಂತರವೂ ನಿಮ್ಮ ಆರೋಗ್ಯದ ಕಡೆ ಗಮನಹರಿಸುವುದು.

ದಿನ ವಿಶೇಷ – ಲೋಕಮಾನ್ಯ ಬಾಲ ಗಂಗಾಧರ ತಿಲಕ್ ಸ್ಮರಣೆ

1920ನೇ ಆಗಸ್ಟ್ 1ರಂದು, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ನಾಯಕ ಮತ್ತು "ಲೋಕಮಾನ್ಯ" ಎಂದು ಗೌರವಿಸಲ್ಪಟ್ಟ ಬಾಲ ಗಂಗಾಧರ ತಿಲಕ್ ಅವರು ನಿಧನರಾದರು