
ಕಾರ್ಕಳ : ಕಥೊಲಿಕ್ ಸಭಾ ಕಣಾಜಾರು ಇದರ ಮುಂದಾಳತ್ವದಲ್ಲಿ ಗಾಂಧಿ ಜಯಂತಿ ಕಣಾಜಾರು ಚರ್ಚ್ ವಠಾರದಲ್ಲಿ ಏರ್ಪಡಿಸಿದರು. ಕಥೊಲಿಕ್ ಸಭಾ ಅಧ್ಯಕ್ಷ ಶ್ರೀ ಆ್ಯಂಟನಿ ಮಿರಾಂದಾ ಸ್ವಾಗತಿಸಿ, ಶ್ರೀ ಜೆ.ಬಿ.ಡಿಸೊಜಾ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಮುಖ್ಯ ಅತಿಥಿ ಶ್ರೀ ಪ್ರಕಾಶ್ ಮಾರ್ಟಿಸ್ ಅಮಾಲು ರೋಗ ಹಾಗೂ ಅದರ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮಕ್ಕೆ ಹಾಜರಾದ ಕೊಂಕಣಿ ಸಾಹಿತಿ ಹಾಗೂ ಪ್ರಾಧ್ಯಾಪಕ ಶ್ರೀ ಸ್ಟೀವನ್ ಕ್ವಾಡ್ರಸ್ ಗಾಂಧಿ ಹಾಗೂ ಸಂವಿಧಾನದ ಬಗ್ಗೆ ಮಾಹಿತಿ ನೀಡಿದರು. ಫಲಾಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

































