spot_img

ಹಿರಿಯಡ್ಕದ ದೇವಾಡಿಗರ ಸಂಘದಲ್ಲಿ ಗಣಹೋಮ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವಿದ್ಯಾರ್ಥಿವೇತನ, ಸನ್ಮಾನ ಮತ್ತು ಪುಸ್ತಕ ವಿತರಣಾ ಸಮಾರಂಭ – 2025

Date:

spot_img

ಹಿರಿಯಡ್ಕ: ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ರಿ) ಮಂಗಳೂರು – ಉಪಸಂಘ ಹಿರಿಯಡ್ಕದಲ್ಲಿ ಜೂನ್ 29, 2025 ಭಾನುವಾರ ಗಣಹೋಮ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವಿದ್ಯಾರ್ಥಿವೇತನ, ಸನ್ಮಾನ ಮತ್ತು ಪುಸ್ತಕ ವಿತರಣಾ ಸಮಾರಂಭವು ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರು ಇದರ ಅಧ್ಯಕ್ಷರಾದ ಶ್ರೀಯುತ ಅಶೋಕ್ ಮೊಯ್ಲಿಯವರು “ಶ್ಯೆಕ್ಷಣಿಕ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ನೀಡುವ ಶ್ಯೆಕ್ಷಣಿಕ ಸೌಲಭ್ಯಗಳನ್ನು ಪಡೆದು ಜ್ಞಾನಾರ್ಜನೆಯ ಮೂಲಕ ಸಮಾಜಕ್ಕೆ ಮಾದರಿ ಪ್ರಜೆಯಾಗಿ ಸಂಸ್ಕೃತಿಯನ್ನು ಬೆಳೆಸಿ ಉಳಿಸಬೇಕು” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ ಸಂಘದ ಅಧ್ಯಕ್ಷರಾದ ರಾಜೇಂದ್ರ ಕುಮಾರ್ ದೇವಾಡಿಗರವರು ವಹಿಸಿದ್ದರು. “ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಪಾತ್ರವು ಮುಖ್ಯ. ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ನಾವು ಬೆಳೆಯಲು ಸಾಧ್ಯ. ನಮ್ಮ ಪರೀಕ್ಷೆಗಳಲ್ಲಿ ಅಂಕ ಗಳಿಸಲು ಇದು ಸಹಕಾರಿ, ಉತ್ತಮ ಶಿಸ್ತು, ನಾಯಕತ್ವ ಗುಣ, ಸೇವಾಮನೋಭಾವ ಸಹಿತ ಆದರ್ಶ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಸಾಧ್ಯ” ಎಂದು ಘನ ಉಪಸ್ಥಿತಿಯಲ್ಲಿದ್ದ ಕರ್ನಾಟಕ ದೇವಾಡಿಗರ ಸಂಘ ಮಂಗಳೂರು ಇದರ ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಶ್ರೀಯುತ ಹರೀಶ್ ಸೇರಿಗಾರ್ ಉದ್ಯಮಿ ದುಬೈ ಇವರು ಹೇಳಿದರು.

ಕಾರ್ಯಕ್ರಮದ ಮಹಾಪೋಷಕರಾದ ಶ್ರೀಯುತ ಶ್ರೀಧರ ದೇವಾಡಿಗ ಉಡುಪಿ ಇವರು , ಸಂಘದ ನೆರವು ಪಡೆದ ವಿದ್ಯಾರ್ಥಿವೇತನಗಳ ಹಿಂದೆ ಉದಾತ್ತವಾದ ಆಶಯವಿದೆ. ಆದ್ದರಿಂದ ಅದನ್ನು ಸದುಪಯೋಗ ಪಡಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿ ಶುಭ ಹಾರೈಸಿದರು.

ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಗಣ್ಯರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಕೇಂದ್ರ ಸಂಘದ ಪದಾಧಿಕಾರಿಗಳು ಹಾಗೂ ಸಮಿತಿಯ ಸದಸ್ಯರನ್ನು ಮತ್ತು ಕಾರ್ಯಕ್ರಮಕ್ಕೆ ಧನರೂಪದಲ್ಲಿ ಸಹಕರಿಸಿದ ಎಲ್ಲರನ್ನೂ ಅಭಿನಂದಿಸಲಾಯಿತು.

ಕುಮಾರಿ ಯಶಸ್ವಿನಿ ಹಿರಿಯಡ್ಕ ಇವರಿಂದ ಭರತನಾಟ್ಯ ಕಾರ್ಯಕ್ರಮವು ನಡೆಯಿತು. ಕುಮಾರಿ ಶತಾ ದೇವಾಡಿಗ ಪ್ರಾರ್ಥಿಸಿದರು. H ಗಣೇಶ್ ಸೇರಿಗಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ರಮೇಶ್ ಸೇರಿಗಾರ್ ವಂದಿಸಿದರು. ಶ್ರೀಮತಿ ಪೂರ್ಣಿಮಾ ದಿನೇಶ್ ಹಾಗೂ ಶತಾ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ರತ್ನಾಕರ ದೇವಾಡಿಗ, ಮಂಜುನಾಥ್ ಸೇರಿಗಾರ್, ವಿಶ್ವನಾಥ್ ಸೇರಿಗಾರ್ ಸಹಕರಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಗಣೇಶ ಚತುರ್ಥಿ

ಈ ಹಬ್ಬವು ಜ್ಞಾನ, ಸಮೃದ್ಧಿ ಮತ್ತು ಶುಭದ ದೇವರಾದ ಶ್ರೀ ಗಣೇಶನಿಗೆ ಸಮರ್ಪಿತವಾಗಿದೆ

ಕಾರ್ಕಳದಲ್ಲಿ ಬಡ್ಡಿ ವ್ಯಾಪಾರಿ ಹತ್ಯೆ, ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿ ಬಂಧನ

ಕಾರ್ಕಳದ ಕುಂಟಲ್ಪಾಡಿಯಲ್ಲಿ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ನಡೆದಿದ್ದು, ಈ ಸಂಬಂಧ ಬಸ್ ಚಾಲಕನನ್ನು ಬಂಧಿಸಲಾಗಿದೆ.

ಉಡುಪಿ ಉಚ್ಚಿಲ ದಸರಾ ಆಮಂತ್ರಣ ಪತ್ರಿಕೆ ಬಿಡುಗಡೆ

ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಆಶ್ರಯದಲ್ಲಿ ಜರಗಲಿರುವ 4ನೇ ವರ್ಷದ ಉಡುಪಿ ಉಚ್ಚಿಲ ದಸರಾ 2025 ಉತ್ಸವದ ಆಮಂತ್ರಣ ಪತ್ರಿಕೆಯನ್ನು ಗೌರವ ಸಲಹೆಗಾರ ನಾಡೋಜ ಡಾ. ಜಿ. ಶಂಕರ್ ಅವರು ಬಿಡುಗಡೆಗೊಳಿಸಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಾಲ್ಕು ಬಾರಿ ಕರೆ ಮಾಡಿದರೂ ಉತ್ತರಿಸದ ಮೋದಿ: ವರದಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇತ್ತೀಚಿನ ವಾರಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕನಿಷ್ಠ ನಾಲ್ಕು ಬಾರಿ ಕರೆ ಮಾಡಿದ್ದಾರೆ. ಆದರೆ, ಮೋದಿ ಕರೆಗಳನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಜರ್ಮನ್‌ನ ಪ್ರಮುಖ ಪತ್ರಿಕೆಯೊಂದು ವರದಿ ಮಾಡಿದೆ.