ಗದಗ ಜಿಲ್ಲೆಯಲ್ಲಿ ಭೀಕರ ಅಪಘಾತ; ಇಬ್ಬರು ಸಾವು, 8 ಮಂದಿಗೆ ಗಾಯ

Date:

spot_img

ಗದಗ : ಜಿಲ್ಲೆಯ ಹರ್ತಿ ಗ್ರಾಮದ ಸಮೀಪ ಗುರುವಾರ (ಮಾ. 5) ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಎಂಟು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ನಿಯಂತ್ರಣ ತಪ್ಪಿದ ಗೂಡ್ಸ್ ವಾಹನವೊಂದು ರಸ್ತೆ ಬದಿಯ ಮರಕ್ಕೆ ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಮೃತರನ್ನು ಗದಗ ತಾಲ್ಲೂಕಿನ ಹಿರೇಕೊಪ್ಪ ಗ್ರಾಮದ ಮುತ್ತಪ್ಪ ಸುಟಗೇರಿ (35) ಮತ್ತು ನಿಂಗಪ್ಪ ಯಳವತ್ತಿ (36) ಎಂದು ಗುರುತಿಸಲಾಗಿದೆ. ಗಾಯಗೊಂಡ ಎಂಟು ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಪ್ರಾಥಮಿಕ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಿರೇಕೊಪ್ಪ ಗ್ರಾಮದ ಸುಮಾರು 10 ಮಂದಿ ಗೋಜನೂರಿನಲ್ಲಿ ನಡೆದ ಕಾಮಣ್ಣನ ಮೆರವಣಿಗೆಯನ್ನು ವೀಕ್ಷಿಸಲು ತೆರಳಿದ್ದರು. ಮೆರವಣಿಗೆ ಮುಗಿಸಿ ಮರಳಿ ತಮ್ಮ ಗ್ರಾಮಕ್ಕೆ ಗೂಡ್ಸ್ ವಾಹನದಲ್ಲಿ ಬರುತ್ತಿದ್ದಾಗ ಚಾಲಕನ ಅಜಾಗರೂಕತೆಯಿಂದಾಗಿ ವಾಹನವು ಮರಕ್ಕೆ ಅಪ್ಪಳಿಸಿದೆ. ಅಪಘಾತದ ತೀವ್ರತೆಗೆ ವಾಹನವು ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕರ್ನಾಟಕದಲ್ಲಿ ಇನ್‌ಫ್ಲುಯೆಂಜಾ ಜ್ವರದ ಭೀತಿ: ಆರೋಗ್ಯ ಇಲಾಖೆ ಅಲರ್ಟ್

ರಾಜ್ಯದಲ್ಲಿ ಹವಾಮಾನ ಬದಲಾವಣೆಯಿಂದಾಗಿ ಸಾಂಕ್ರಾಮಿಕ ಇನ್‌ಫ್ಲುಯೆಂಜಾ ಜ್ವರ ಹೆಚ್ಚಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಎಚ್ಚರದಿಂದಿರಲು ಸೂಚನೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ರೋಹಿತ್ ಶರ್ಮಾ ನಿವೃತ್ತಿ ವದಂತಿಗೆ ಬ್ರೇಕ್, ಲಾರ್ಡ್ಸ್‌ನಲ್ಲಿ ಶತಕದ ದಾಖಲೆ

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ನಿವೃತ್ತಿ ವದಂತಿಗಳನ್ನು ತಳ್ಳಿಹಾಕಿದ ರೋಹಿತ್ ಶರ್ಮಾ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಹಾಸನ ಬಸ್‌ನಲ್ಲಿ ಮಹಿಳಾ ಕಂಡಕ್ಟರ್-ಪ್ರಯಾಣಿಕಳ ಫೈಟ್ ವೈರಲ್

ಹಾಸನದಲ್ಲಿ ಮಹಿಳಾ ಕಂಡಕ್ಟರ್ ಹಾಗೂ ಪ್ರಯಾಣಿಕಳ ನಡುವೆ ಸೀಟಿಗಾಗಿ ನಡೆದ ಭೀಕರ ಜಗಳದ ವಿಡಿಯೋ ವೈರಲ್ ಆಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ನಾರಾಯಣ ಗುರು ಜಯಂತಿ ಭಾಷಣ ಸ್ಪರ್ಧೆ 2026: ಉಡುಪಿಯಲ್ಲಿ ರಾಜ್ಯ ಮಟ್ಟದ ಸ್ಪರ್ಧೆ

ಉಡುಪಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಪ್ರಯುಕ್ತ ರಾಜ್ಯ ಮಟ್ಟದ ಆನ್‌ಲೈನ್ ಭಾಷಣ ಸ್ಪರ್ಧೆ ಆಯೋಜಿಸಲಾಗಿದೆ. ವಿಜೇತರಿಗೆ ಭಾರಿ ನಗದು ಬಹುಮಾನವಿದೆ, ಪೂರ್ಣ ಮಾಹಿತಿ ಇಲ್ಲಿದೆ ಓದಿ.