spot_img

ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳದಲ್ಲಿ ಉಚಿತ ಹರ್ನಿಯ ತಪಾಸಣಾ ಶಿಬಿರ

Date:

ಕಾರ್ಕಳ 19 ಫೆಬ್ರವರಿ 2025: ಕಾರ್ಕಳದ ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆಯಲ್ಲಿ ಶುಕ್ರವಾರ , ಫೆಬ್ರವರಿ 21, 2025 ರಂದು ಉಚಿತ ಹರ್ನಿಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಶಿಬಿರವು ಬೆಳಿಗ್ಗೆ ಗಂಟೆ 9:30ರಿಂದ ಸಂಜೆ ಗಂಟೆ 05:00ರವರೆಗೆ ಕಾರ್ಕಳದ ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಓ ಪಿ ಡಿ ಯಲ್ಲಿ ನಡೆಯಲಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ ಕೀರ್ತಿನಾಥ ಬಲ್ಲಾಳ ಅವರು ತಿಳಿಸಿದ್ದಾರೆ.

ರಿಯಾಯಿತಿ ದರದಲ್ಲಿ ಸಂಬಂಧಿತ ಪರೀಕ್ಷೆಗಳು ಮತ್ತು ಶಸ್ತ್ರಚಿಕಿತ್ಸೆ

ತಜ್ಞರ ಸಮಾಲೋಚನೆಯು ಉಚಿತವಾಗಿದ್ದು, ಹೊರರೋಗಿ ಪರೀಕ್ಷೆಗಳು ಮತ್ತು ಹರ್ನಿಯ ಶಸ್ತ್ರಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ಮಾಡಲಾಗುವುದು.

ಹೊಟ್ಟೆನೋವು, ಹೊಟ್ಟೆಯ ಭಾಗದಲ್ಲಿ ಉಬ್ಬು ಅಥವಾ ಉಬ್ಬು ವಿಕೆ, ಹರ್ನಿಯ ಇತಿಹಾಸ ಉಳ್ಳವರು ಮತ್ತು ಹರ್ನಿಯ ಚಿಕಿತ್ಸೆ ಆಯ್ಕೆಗಳ ಕುರಿತು ತಜ್ಞರ ಸಲಹೆ ಬಯಸುವವರು ಶಿಬಿರದಲ್ಲಿ ಭಾಗವಹಿಸಬಹುದೆಂದು ಖ್ಯಾತ ಶಸ್ತ್ರ ಚಿಕಿತ್ಸಕ ಡಾ ಮೃಣಾಲ್ ಕುಮಾರ್ ಅವರು ತಿಳಿಸಿದ್ದಾರೆ.

ಮೊದಲು ನೋಂದಾಯಿಸಿದ 50 ಜನರಿಗೆ ಮಾತ್ರ ಅವಕಾಶ. ಹೆಚ್ಚಿನ ಮಾಹಿತಿ ಮತ್ತು ನೋಂದಾವಣೆಗೆ ದೂರವಾಣಿ ಸಂಖ್ಯೆ: 9731601150 ಅಥವಾ 08258 230583. ಸಂಪರ್ಕಿಸಲು ಕೋರಲಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಇಂಧನ ಬೆಲೆ ಏರಿಕೆ ಖಂಡಿಸಿ ಎ.26ರಂದು ಮಂಗಳೂರಿನಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ

ಕೇಂದ್ರ ಸರ್ಕಾರ ಇಂಧನ ಹಾಗೂ ಅಡುಗೆ ಅನಿಲದ ಬೆಲೆ ಏರಿಸಿರುವುದನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಎಪ್ರಿಲ್ 26ರಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಸಾರ್ವಜನಿಕ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಂದಾದ್ರಿ ಬೆಟ್ಟದ ಮೇಲೆ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ: ಅನುಮಾನಾಸ್ಪದ ಸಾವು!

ಧಾರ್ಮಿಕ ಹಾಗೂ ಪ್ರವಾಸಿ ತಾಣವಿರುವ ಕುಂದಾದ್ರಿ ಬೆಟ್ಟದ ಮೆಟ್ಟಿಲು ರಸ್ತೆಯ ಮೊದಲ ತಿರುವಿನಲ್ಲಿ ಸುಟ್ಟ ಸ್ಥಿತಿಯ ಮಾನವ ದೇಹವೊಂದು ಪತ್ತೆಯಾಗಿದೆ. ಈ ಘಟನೆ ಸೋಮವಾರ ರಾತ್ರಿ ಬೆಳಕಿಗೆ ಬಂದಿದೆ.

ಪೇಜಾವರ ಶ್ರೀಗಳಿಗೆ ಸನಾತನ ರತ್ನ ಬಿರುದು ಸಹಿತ ಸಂಮಾನ

ಆಂಧ್ರಪ್ರದೇಶದ ನೆಲ್ಲೂರಿನ ಪ್ರತಿಷ್ಠಿತ ಆದಿಶಂಕರ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ಹಾಲಂಡಿನ ಮಹರ್ಷಿ ವೇದಿಕ್ ಯುನಿವರ್ಸಿಟಿ ಇವುಗಳ ವತಿಯಿಂದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಸನಾತನ ರತ್ನ ಬಿರುದನ್ನಿತ್ತು ಸಂಮಾನಿಸಲಾಗಿದೆ‌.

ನ್ಯಾಯಮೂರ್ತಿಗಳ ವರ್ಗಾವಣೆ: ಕರ್ನಾಟಕ ಹೈಕೋರ್ಟ್‌ನ ನಾಲ್ವರು ಮತ್ತಿತರ ರಾಜ್ಯಗಳಿಗೆ ಬದಲಾವಣೆ

ಸುಪ್ರೀಂ ಕೋರ್ಟ್‌ ಶಿಫಾರಸಿನಂತೆ, ಹೈಕೋರ್ಟ್‌ಗಳ ಆಡಳಿತಾತ್ಮಕ ಗುಣಮಟ್ಟವನ್ನು ಹೆಚ್ಚಿಸಲು ದೇಶದ ವಿವಿಧ ಹೈಕೋರ್ಟ್‌ಗಳ ನ್ಯಾಯಾಧೀಶರನ್ನು ವರ್ಗಾಯಿಸಲಾಗಿದೆ.