
ಪೆರ್ಡೂರು : ಬಂಟರ ಸಂಘ (ರಿ) ಪೆರ್ಡೂರು ಇವರ ವತಿಯಿಂದ ವಿಜಯಲಕ್ಷ್ಮಿ ದಿನೇಶ ಹೆಗ್ಡೆ ಬ್ಯಾಂಕ್ವೆಟ್ ಹಾಲ್ ಹಾಗೂ ಜಲಜಾಕ್ಷಿ ವೀರಣ್ಣ ಸೂಡ ಬಯಲು ರಂಗವೇದಿಕೆಯ ಶಿಲಾನ್ಯಾಸ ಸಮಾರಂಭವು ದಿನಾಂಕ 09-03-2025ನೇ ರವಿವಾರ ಪೂರ್ವಾಹ್ನ ಘಂಟೆ 9.30ಕ್ಕೆ ಪೆರ್ಡೂರು ಬಂಟರ ಸಮುದಾಯ ಭವನದಲ್ಲಿ ನೆರವೇರಲಿದೆ.
ಕಳೆದ ವರ್ಷ ಭವ್ಯವಾದ ಬೃಹತ್ ಸಮುದಾಯ ಭವನವು ಲೋಕಾರ್ಪಣೆಗೊಂಡಿದ್ದು ಇದೀಗ ಜನರಿಗೆ ಇನ್ನಷ್ಟು ಅನುಕೂಲಕರವಾಗಲು ಬ್ಯಾಂಕ್ವೆಟ್ ಹಾಲ್ ಹಾಗೂ ಬಯಲು ರಂಗವೇದಿಕೆಯನ್ನು ನಿರ್ಮಿಸಲು ಉದ್ದೇಶಿಸಿದ್ದು ಇದರ ಶಿಲಾನ್ಯಾಸ ಸಮಾರಂಭಕ್ಕೆ ಕರ್ನಾಟಕ ರಾಜ್ಯದ ನಿವೃತ್ತ ಲೋಕಾಯುಕ್ತರಾದ ಜಸ್ಟಿಸ್ ಪಿ. ವಿಶ್ವನಾಥ ಶೆಟ್ಟಿ, ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಜಯಕರ ಶೆಟ್ಟಿ, ಮುಂಬೈ ಹೋಟೆಲ್ ಕೃಷ್ಣ ಪ್ಯಾಲೇಸ್‌ನ ಶ್ರೀ ಕೃಷ್ಣ ವೈ. ಶೆಟ್ಟಿ, ಮುಂಬೈ ಪ್ಯಾಪಿಲಾನ್ ಗ್ರೂಪ್ ಆಫ್ ಹೋಟೆಲ್ಸ್ನ ರಘು ಎಲ್. ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಅಧ್ಯಕ್ಷರಾದ ಅಜಿತ್‌ಕುಮಾರ್ ರೈ ಮಾಲಾಡಿ, ಉಡುಪಿ ಜಿಲ್ಲಾ ಸಭಾಂಗಣಗಳ ಅಧ್ಯಕ್ಷ ಶ್ರೀ ಎಚ್. ವಿಠ್ಠಲ ಶೆಟ್ಟಿ ಶೇಡಿಕೊಡ್ಲು, ಮುನಿಯಾಲು ಬಂಟರ ಸಂಘದ ಗೌರವಾಧ್ಯಕ್ಷ ದಿವಾಕರ ಶೆಟ್ಟಿ ಮುನಿಯಾಲುಬೈಲು, ಬಂಟರ ಮಾತೃ ಸಂಘದ ಉಡುಪಿ ತಾಲೂಕು ಸಮಿತಿ ಸಂಚಾಲಕರಾದ ಎಚ್. ಶಿವಪ್ರಸಾದ್ ಹೆಗ್ಡೆ, ಭದ್ರಾವತಿ ಸಂತೋಷ್ ರೈಸ್‌ಇಂಡಸ್ಟ್ರೀಸ್ ನ ಮಾಲಕರಾದ ಶ್ರೀ ಸುಧಾಕರ ಶೆಟ್ಟಿ, ಬೆಂಗಳೂರಿನ ಉದ್ಯಮಿಗಳಾದ ಶ್ರೀ ದಿನೇಶ ಹೆಗ್ಡೆ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷರಾದ ಶ್ರೀ ಶಾಂತಾರಾಮ ಸೂಡ ಕೆ. ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀಧರ ಶೆಟ್ಟಿ ಕುತ್ಯಾರುಬೀಡು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.