
ಉಡುಪಿ:ಹರೇ ಕೃಷ್ಣ ಪ್ರಚಾರ ಕೇಂದ್ರ, ಉಡುಪಿಯ ನೇತೃತ್ವದಲ್ಲಿ ನೂತನ ‘ಹರೇ ಕೃಷ್ಣ ಭಜನಾ ಕುಟೀರ’ ನಿರ್ಮಾಣದ ಶಿಲಾನ್ಯಾಸ ಸಮಾರಂಭವು ಬರುವ ಏಪ್ರಿಲ್ 11, 2025ರಂದು ಬೆಳಿಗ್ಗೆ 9.30 ಗಂಟೆಗೆ ಉಡುಪಿಯ ಅಲೆವೂರು ಗ್ರಾಮದ ಹೊನ್ನೆಕೋಡಿಯಲ್ಲಿ ನೆರವೇರಲಿದೆ.
ಈ ಶಿಲಾನ್ಯಾಸವನ್ನು ಉಡುಪಿಯ ಕೃಷ್ಣಾಪುರ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ತಮ್ಮ ಅಮೃತ ಹಸ್ತದಿಂದ ನೆರವೇರಿಸಲಿದ್ದಾರೆ.
ಹರಿನಾಮ ಪ್ರಚಾರ ಮತ್ತು ಭಕ್ತಿ ಚಟುವಟಿಕೆಗಳ ಮೂಲಕ ಕಳೆದ ಹದಿನೈದು ವರ್ಷಗಳಿಂದ ಜಗದ್ಗುರು ಶ್ರೀಪಾದ ಮಧ್ವಾಚಾರ್ಯರ ತತ್ತ್ವ ಮತ್ತು ಶ್ರೀಲ ಪ್ರಭುಪಾದರ ಮಾರ್ಗದರ್ಶನದಲ್ಲಿ ಸೇವೆ ಸಲ್ಲಿಸುತ್ತಿರುವ ಹರೇ ಕೃಷ್ಣ ಪ್ರಚಾರ ಕೇಂದ್ರವು, ಈಗ ಈ ಸೇವಾ ಕಾರ್ಯವನ್ನು ಇನ್ನಷ್ಟು ವ್ಯಾಪಕಗೊಳಿಸುವ ಉದ್ದೇಶದಿಂದ ಅಲೆವೂರಿನಲ್ಲಿ ಭಜನಾ ಮಂದಿರ ನಿರ್ಮಾಣಕ್ಕೆ ಮುಂದಾಗಿದೆ.
ಭಕ್ತಾಧಿಗಳು ಈ ಕಾರ್ಯಕ್ರಮದಲ್ಲಿ ಸಕುಟುಂಬ ಸಮೇತರಾಗಿ ಭಾಗವಹಿಸಿ, ಶ್ರೀ ಕೃಷ್ಣ ಮುಖ್ಯಪ್ರಾಣರ ಕೃಪೆಗೆ ಪಾತ್ರರಾಗುವಂತೆ ರಾಜೇಶ್ ಶೆಟ್ ಬಿ ಅಧ್ಯಕ್ಷರು, ಹರೇ ಕೃಷ್ಣ ಪ್ರಚಾರ ಕೇಂದ್ರ, ಉಡುಪಿ ಮತ್ತು ಭಕ್ತ ವೃಂದದವರು ಹೃದಯಪೂರ್ವಕವಾಗಿ ಕೋರಿದ್ದಾರೆ.
ಸಂಪರ್ಕಕ್ಕೆ:
ಹರೇ ಕೃಷ್ಣ ಪ್ರಚಾರ ಕೇಂದ್ರ,
ಮಹಾಲಸಾ No.7-2-95C, ಪಿಳಿಚಂಡಿ ಮಾರ್ಗ, ಬೀಡಿನಗುಡ್ಡೆ ಉಡುಪಿ 576101
ದೂರವಾಣಿ: 9900096737