
ಹೆರ್ಗ: ಹೆರ್ಗ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ವೇದಮೂರ್ತಿ ಹೆರ್ಗ ರಾಘವೇಂದ್ರ ತಂತ್ರಿ ಅವರು ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಸಂಘದ ಅಧ್ಯಕ್ಷರಾದ ಹೆರ್ಗ ದಿನಕರ ಶೆಟ್ಟಿ ಅವರು ನೂತನ ಕಟ್ಟಡದ ಶಿಲಾನ್ಯಾಸ ನೆರವೇರಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರು, ನಿರ್ದೇಶಕರು, ಸಂಘದ ಸದಸ್ಯರು ಮತ್ತು ಸ್ವರ್ಣ ಫ್ರೆಂಡ್ಸ್ ಗೋಳಿಕಟ್ಟೆ ಹೆರ್ಗ ಇದರ ಗೌರವಾಧ್ಯಕ್ಷರು, ಸ್ಥಳೀಯರು ಹಾಗೂ ಕಾರ್ಯದರ್ಶಿ ಅಶ್ವಿನಿ ನಾಯ್ಕ ಮತ್ತು ರಾಜಶ್ರೀ ಉಪಸ್ಥಿತರಿದ್ದರು.