spot_img

ಹನಿಟ್ರ್ಯಾಪ್ ಗೆ ಬಲಿ ಆದ ಮಾಜಿ ಅಧ್ಯಕ್ಷ: 20 ಲಕ್ಷಕ್ಕೆ ಬ್ಲಾಕ್‌ಮೇಲ್ ಮಾಡಿದ್ದ ಯುವತಿ ಬಂಧನ

Date:

ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ ತವರು ಪ್ರದೇಶದಲ್ಲಿ, ಗುಬ್ಬಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷನನ್ನು ಹನಿಟ್ರ್ಯಾಪ್ ಮಾಡಿ 20 ಲಕ್ಷ ರೂಪಾಯಿ ವಸೂಲಿ ಮಾಡಲು ಯತ್ನಿಸಿದ್ದ ಯುವತಿ ನಿಶಾ ಹಾಗೂ ಆಕೆಯ ಗ್ಯಾಂಗ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಮಾಜಿ ಅಧ್ಯಕ್ಷ ಅಣ್ಣಪ್ಪಸ್ವಾಮಿಗೆ ಫೇಸ್‌ಬುಕ್ ಮೂಲಕ ಪರಿಚಯವಾಗಿ, ಹನಿಟ್ರ್ಯಾಪ್ ಗ್ಯಾಂಗ್ ನಿಷಾ ಮೊದಲು ಸ್ನೇಹ ಬೆಳೆಸಿ ಬಳಿಕ ಪ್ರೀತಿಯ ನಾಟಕವಾಡಿದ್ದಳು. ನಂತರ ಅಣ್ಣಪ್ಪಸ್ವಾಮಿಯನ್ನು ಲಾಡ್ಜ್‌ಗೆ ಕರೆದೊಯ್ದು ಬೆತ್ತಲೆ ವಿಡಿಯೋ ಮಾಡಿದ್ದಾಳೆ. ಈ ವಿಡಿಯೋವನ್ನಾಧಾರವಾಗಿ 20 ಲಕ್ಷ ರೂಪಾಯಿ ಬೇಡಿಕೆ ಇಟ್ಟು, ನೀಡದಿದ್ದರೆ ರೇಪ್ ಕೇಸ್ ಹಾಕಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ.

ಘಟನೆಯಿಂದ ಆತಂಕಗೊಂಡ ಅಣ್ಣಪ್ಪಸ್ವಾಮಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ಸಂಬಂಧ ನಿಶಾ, ಆಕೆಯ ಸ್ನೇಹಿತೆ ಜ್ಯೋತಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅದೇ ಗ್ಯಾಂಗ್‌ನ ಭಾಗಿಯಾಗಿದ್ದ ಗುಬ್ಬಿಯ ಬಸವರಾಜು ಹಾಗೂ ಭರತ್ ಪರಾರಿಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.ವಿಚಾರಣೆ ವೇಳೆ, ಈ ಮೊದಲು ನಡೆದ ಕುರಿಮೂರ್ತಿ ಕೊಲೆ ಪ್ರಕರಣದಲ್ಲಿಯೂ ಬಸವರಾಜು ಮತ್ತು ಭರತ್ ಆರೋಪಿಯಾಗಿರುವುದು ಬೆಳಕಿಗೆ ಬಂದಿದೆ.

ಈ ಹಿಂದೆ ಬಿಜೆಪಿಯಿಂದ ಪಟ್ಟಣ ಪಂಚಾಯತಿ ಅಧ್ಯಕ್ಷನಾಗಿದ್ದ ಅಣ್ಣಪ್ಪಸ್ವಾಮಿ, ಗುಬ್ಬಿ ತಾಲೂಕಿನಲ್ಲಿ ನಡೆದ ಸಾವಿರಾರು ಎಕರೆ ಸರ್ಕಾರಿ ಜಮೀನು ಗೋಲ್ಮಾಲ್ ಕೇಸಿನಲ್ಲಿ ಎ2 ಆರೋಪಿಯಾಗಿದ್ದಾರೆ.ಅಧ್ಯಕ್ಷನಾಗಿದ್ದ ವೇಳೆ 3 ತಿಂಗಳು ತಲೆಮರಿಸಿಕೊಂಡಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಬ್ಬಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಚಿನ್ನಯ್ಯ ತಂದ ‘ಬುರುಡೆ’ಯ ರಹಸ್ಯ ಬಯಲು: ವಿಠಲಗೌಡರ ಮೇಲೆ ಎಸ್‌ಐಟಿ ಕಣ್ಣು, ಬಂಧನ ಖಚಿತವೇ?

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಪರಾಧಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್ಐಟಿ ಇದೀಗ ಮತ್ತೊಂದು ಮಹತ್ವದ ಬೆಳವಣಿಗೆಗೆ ಸಾಕ್ಷಿಯಾಗಿದೆ.

ಐಟಿಆರ್ ಸಲ್ಲಿಕೆ ಗಡುವಿನತ್ತ ತೀವ್ರ ಕುತೂಹಲ: ಸರ್ಕಾರದಿಂದ ಮತ್ತಷ್ಟು ವಿಸ್ತರಣೆ ನಿರೀಕ್ಷೆ?

ಭಾರತದಾದ್ಯಂತ ತೆರಿಗೆ ಪಾವತಿದಾರರಿಗೆ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವ ಸಮಯ ಹತ್ತಿರವಾಗುತ್ತಿದೆ.

ಹೆಬ್ರಿಯಲ್ಲಿ ಅದ್ಧೂರಿ ಶಾರದೋತ್ಸವಕ್ಕೆ ಮುಹೂರ್ತ: ಆಮಂತ್ರಣ ಪತ್ರಿಕೆ ಬಿಡುಗಡೆ

ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಅದ್ದೂರಿಯಾಗಿ ಆಯೋಜಿಸಿರುವ 6ನೇ ವರ್ಷದ ಶಾರದೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶನಿವಾರ ಬಿಡುಗಡೆ ಮಾಡಿದರು.

ಜಿಎಸ್‌ಟಿ ಇಳಿಕೆ ಪರಿಣಾಮ: ಮಹೀಂದ್ರ, ಟಾಟಾ, ಟೊಯೊಟಾ ಕಾರುಗಳ ಬೆಲೆಯಲ್ಲಿ ಭಾರಿ ಕಡಿತ

ಜಿಎಸ್‌ಟಿ ಪರಿಷ್ಕರಣೆಯ ನಂತರ, ಮಹೀಂದ್ರ, ಟಾಟಾ, ಟೊಯೊಟ ಮತ್ತು ರೆನೊ ಸೇರಿದಂತೆ ಹಲವಾರು ಪ್ರಮುಖ ವಾಹನ ತಯಾರಕ ಕಂಪನಿಗಳು ತಮ್ಮ ಕಾರುಗಳ ಬೆಲೆಯನ್ನು ಗಮನಾರ್ಹವಾಗಿ ಇಳಿಕೆ ಮಾಡಿವೆ.