
ಬೆಂಗಳೂರು: ಅತ್ಯಾಚಾರ ಮತ್ತು ಅಶ್ಲೀಲ ವಿಡಿಯೋ ಪ್ರಕರಣಗಳಲ್ಲಿ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಹೊಸ ಕೆಲಸ ನೀಡಲಾಗಿದೆ. ವರದಿಯ ಪ್ರಕಾರ, ಪ್ರಜ್ವಲ್ ರೇವಣ್ಣ ಈಗ ಜೈಲಿನ ಲೈಬ್ರರಿ ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ದಿನಕ್ಕೆ ₹522 ಸಂಬಳ
ಜೈಲಿನಲ್ಲಿರುವ ಕೈದಿಗಳು ಮತ್ತು ವಿಚಾರಣಾಧೀನ ಕೈದಿಗಳು ಗ್ರಂಥಾಲಯಕ್ಕೆ ಬಂದು ಪುಸ್ತಕಗಳನ್ನು ಪಡೆದಾಗ ಅವುಗಳನ್ನು ನೋಂದಾಯಿಸಿಕೊಳ್ಳುವುದು ಪ್ರಜ್ವಲ್ ಅವರ ಕೆಲಸವಾಗಿದೆ. ಜೈಲಿನ ನಿಯಮಗಳ ಪ್ರಕಾರ, ಈ ಕೆಲಸಕ್ಕೆ ಅವರಿಗೆ ದಿನಗೂಲಿ ನೀಡಲಾಗುವುದು. ಈ ಕೆಲಸಕ್ಕಾಗಿ ಪ್ರಜ್ವಲ್ ಅವರಿಗೆ ದಿನಕ್ಕೆ 522 ರೂಪಾಯಿ ಸಂಬಳ ನಿಗದಿಪಡಿಸಲಾಗಿದ್ದು, ಕೆಲಸಕ್ಕೆ ಹಾಜರಾಗದ ದಿನಗಳಲ್ಲಿ ಸಂಬಳ ಕಡಿತ ಮಾಡಲಾಗುವುದು.