
ಕಾರ್ಕಳ: 2025-27ರ ಅವಧಿಗಾಗಿ ಕಾರ್ಕಳ ತಾಲೂಕು ಬ್ರಾಹ್ಮಣ ಸಂಘದ ನೂತನ ಕಾರ್ಯಕಾರಿ ಸಮಿತಿಯ ರಚನೆ ಮತ್ತು ಅಧಿಕಾರ ಹಸ್ತಾಂತರ ಪ್ರಕ್ರಿಯೆಯು 2025ರ ಜುಲೈ 20ರಂದು ನಡೆದ ಮಹಾಸಭೆಯಲ್ಲಿ ಯಶಸ್ವಿಯಾಗಿ ನೆರವೇರಿತು.
ಚುನಾವಣಾ ಅಧಿಕಾರಿಯಾದ ಸಾಣೂರು ದೇಂದಬೆಟ್ಟು ಶ್ರೀ ರಾಮ್ ಭಟ್ ಅವರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳು ಮತ್ತು ಸಮಿತಿ ಸದಸ್ಯರ ಆಯ್ಕೆ ನಡೆಯಿತು. ಈ ಸಂದರ್ಭದಲ್ಲಿ ನಿರ್ಗಮಿತ ಅಧ್ಯಕ್ಷರಾದ ಸೌಜನ್ಯ ಉಪಾಧ್ಯಾಯ, ನಿರ್ಗಮಿತ ಕಾರ್ಯದರ್ಶಿಗಳಾದ ಬಾಲಕೃಷ್ಣ ರಾವ್ ಮತ್ತು ನಿವೃತ್ತ ಇಸ್ರೋ ವಿಜ್ಞಾನಿ ಹಾಗೂ ಸಂಘದ ಹಿರಿಯ ಸದಸ್ಯರಾದ ಜನಾರ್ದನ ಇಡ್ಯಾ ಉಪಸ್ಥಿತರಿದ್ದರು.

ನೂತನ ಸಮಿತಿಯ ಪದಾಧಿಕಾರಿಗಳ ವಿವರ ಹೀಗಿದೆ:
- ಅಧ್ಯಕ್ಷರು: ನಾರಾಯಣ ಭಟ್ ಕೊಳಕೆ, ಇರ್ವತ್ತೂರು
- ಕಾರ್ಯದರ್ಶಿ: ಸುಧಾಳ ಶ್ರೀನಿವಾಸ್ ಉಪಾಧ್ಯಾಯ
- ಕೋಶಾಧಿಕಾರಿ: ಮಂಜುನಾಥ್
- ಉಪಾಧ್ಯಕ್ಷರು: ರಾಘವೇಂದ್ರ ಉಪಾಧ್ಯಾಯ ನೆಕ್ಲಾಜೆ
- ಜೊತೆ ಕಾರ್ಯದರ್ಶಿ: ಕೇಶವ ಮರಾಠೆ
- ಜೊತೆ ಕೋಶಾಧಿಕಾರಿ: ಪ್ರಮೋದ್ ಪಾಠಕ್
ಸಮಿತಿ ಸದಸ್ಯರು: ಕೃಷ್ಣ ಭಟ್, ಶಿವಪ್ರಸಾದ್ ಭಟ್ ಪೆರ್ವಾಜೆ, ಶ್ರೀರಾಮ ಗೋರೆ, ವಸಂತ್ ಕುಮಾರ್ (VK), ಗಿರಿಧರ್ ಭಟ್, ಸಂತೋಷ ಉಪಾಧ್ಯಾಯ, ಶಿವಾನಂದನ ಪಾಠಕ್, ವಿಜಯಕುಮಾರ್ ತಂತ್ರಿ, ರಾಜೇಶ ಗೋರೆ, ಮುರಳೀಧರ ಶರ್ಮ, ರಮೇಶ ರಾವ್ ಬಿ, ಪ್ರಕಾಶ್ ಭಟ್ ಪೆರ್ವಾಜೆ, ರಾಜೇಶ್ವರಿ ಆಚಾರ್, ಅನುರಾಧ ಉಡುಪ, ಮಾನಸ ಉಪಾಧ್ಯಾಯ.
