
ಬೆಂಗಳೂರು: ಯಾವುದೇ ಸಂದರ್ಭಕ್ಕೆ ತಕ್ಕಂತೆ ಸರಿಯಾದ ಪಾದರಕ್ಷೆ ಆಯ್ಕೆ ಮಾಡುವುದು ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಮತ್ತು ಆರಾಮಕ್ಕೆ ಪ್ರಮುಖವಾಗಿದೆ. ಮದುವೆ, ಔಟಿಂಗ್, ಟ್ರೆಕ್ಕಿಂಗ್, ಶಾಪಿಂಗ್ ಹೀಗೆ ಪ್ರತಿಯೊಂದು ಸಂದರ್ಭಕ್ಕೂ ವಿಭಿನ್ನ ಶೂಗಳು ಅಥವಾ ಚಪ್ಪಲಿಗಳು ಬೇಕಾಗುತ್ತವೆ.
ಆರಾಮ ಮತ್ತು ಫ್ಯಾಷನ್ ಒಂದೇ ಹಾದಿಯಲ್ಲಿ
ಸ್ನೀಕರ್ ಶೂಗಳು ಡೆನಿಮ್ ಹಾಗೂ ಕ್ಲಾಸಿಕ್ ಸ್ಟೈಲ್ ಡ್ರೆಸ್ಸುಗಳೊಂದಿಗೆ ಚೆನ್ನಾಗಿ ಹೊಂದಿಕೆಯಾಗುತ್ತವೆ. ವೆಜಸ್ ಪಾದಗಳಿಗೆ ಸೂಕ್ತವಾಗಿ ಹೊಂದಿಕೊಂಡು ಇಡೀ ದಿನ ಆರಾಮವನ್ನು ನೀಡುತ್ತವೆ. ಹೈ ಹೀಲ್ಸ್ ಉಡುಪಿಗೆ ಕ್ಲಾಸಿ ಲುಕ್ ನೀಡುತ್ತವೆ, ಅಲ್ಲದೆ, ಅವು ಈಗ ಹೆಚ್ಚು ಮೃದು ಹಾಗೂ ಆರಾಮದಾಯಕವಾಗಿವೆ.
ಸಾಧಾರಣ ಶೂಗಳೂ ಟ್ರೆಂಡಿಯೇ
ಲೋ ಪರ್ಸ್ ಸ್ಲಿಪ್ಪರ್ಗಳು ಶಾರ್ಟ್ಸ್ ಮತ್ತು ಡೆನಿಮ್ಗಳೊಂದಿಗೆ ಉತ್ತಮ ಹೊಂದಾಣಿಕೆಯನ್ನು ನೀಡುತ್ತವೆ. ಕಪ್ಪು, ನೀಲಿ ಮತ್ತು ಕಂದು ಬಣ್ಣದ ಪಾದರಕ್ಷೆಗಳು ಯಾವಾಗಲೂ ಶ್ರೇಷ್ಠ ಆಯ್ಕೆಯಾಗುತ್ತವೆ. ಇತ್ತೀಚೆಗೆ ಬಿಳಿ ಬೂಟುಗಳು ಫ್ಯಾಷನ್ ಆಗಿದ್ದು, ಇದು ವ್ಯಕ್ತಿಗೆ ಸ್ಟೈಲಿಷ್ ಲುಕ್ ನೀಡಲು ಸಹಾಯ ಮಾಡುತ್ತದೆ.